ಪ್ರಜಾವಾಣಿ ವಾರ್ತೆ

ದಾವಣಗೆರೆ: ಹಳೆಯ ಕಾಲದ (ಪಾರಂಪರಿಕ ನಾಣ್ಯ) ನೀಡುವುದಾಗಿ ನಂಬಿಸಿ ಮುಂಬೈನ ಪಾನ್ ಬೀಡಾ ಶಾಪ್ ಮಾಲೀಕನಿಗೆ ₹ 7 ಲಕ್ಷ ವಂಚಿಸಿರುವ ಪ್ರಕರಣ ಇಲ್ಲಿನ ಲೋಕಿಕೆರೆ ರಸ್ತೆಯ ಅಯ್ಯಪ್ಪ ದೇವಾಲಯದ ಬಳಿ ನಡೆದಿದೆ.

ಪೂರ್ವ ಮುಂಬೈನಗುಲಾಬ್ ಚಂದ್ ಶೀತಲ್ ಪ್ರಸಾದ್ ಗುಪ್ತಾ ಮೋಸ ಹೋದವರು. ಪೂರ್ವ ಮುಂಬೈನ ಹರ್ಷದ್ ರಾಜ್ ಕುಮಾರ್ ಪಾಠಕ್, ಕರ್ನಾಟಕದ ರಮೇಶ್ ಹಾಗೂ ಮಹಾರಾಷ್ಟ್ರದ ನಾಸಿಕ್ನ ಅಮನ್ ಶೇಖ್ ಹಾಗೂ ಜೀಶಾನ್ ಶೇಖ್ ಮೋಸ ಮಾಡಿದವರು.

ಗುಲಾಬ್ ಚಂದ್ ಹಾಗೂಹರ್ಷದ್ ರಾಜ್ಕುಮಾರ್ ಪಾಠಕ್ ಅಕ್ಕಪಕ್ಕದ ಮನೆಯವರಾಗಿದ್ದು, ಆರೋಪಿ ಪಾಠಕ್ ಅಮನ್ ಶೇಖ್ ಹಾಗೂ ಜೀಶನ್ ಶೇಖ್ ಅವರನ್ನು ಗುಲಾಬ್ ಚಂದ್ಗೆ ಪರಿಚಯ ಮಾಡಿಕೊಟ್ಟಿದ್ದಾನೆ.

ಆ ವೇಳೆ ಅಮನ್ ಶೇಖ್ ಎಂಬಾತ ‘ಕರ್ನಾಟಕದಲ್ಲಿ ನನ್ನ ಸ್ನೇಹಿತ ರಮೇಶ್ 5 ಕೆ.ಜಿ. ಪಾರಂಪರಿಕ ನಾಣ್ಯವನ್ನು ಇಟ್ಟಿದ್ದು, ಹಣಕಾಸಿನ ಸಮಸ್ಯೆಯಿಂದಾಗಿ ಕಡಿಮೆ ಬೆಲೆಗೆ ನಾಣ್ಯಗಳನ್ನು ಮಾರಾಟ ಮಾಡುತ್ತಿದ್ದಾನೆ.ಹುಬ್ಬಳ್ಳಿಯ ಚೆಕ್ ಪೋಸ್ಟ್ ಬಳಿ ನನ್ನ ಸಹೋದರ ಜೀಶನ್ನೊಂದಿಗೆ ನಾಣ್ಯಗಳನ್ನು ನೋಡಿದ್ದೇನೆ’ ಎಂದು ಗುಲಾಬ್ ಚಂದ್ಗೆ ತಿಳಿಸಿದ್ದಾನೆ.

ಕಡಿಮೆ ಬೆಲೆಗೆ ನಾಣ್ಯಗಳನ್ನು ತಂದು ಮುಂಬೈನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಎಂದು ಆಮಿಷ ಒಡ್ಡಿದ ಆರೋಪಿಗಳು 10 ಗ್ರಾಂನ ಚಿನ್ನದ ನಾಣ್ಯಗಳಿಗೆ ₹10 ಲಕ್ಷವಾಗುತ್ತದೆ. ನಾನು ಚೌಕಾಸಿ ಮಾಡಿ ₹ 7 ಲಕ್ಷಕ್ಕೆ ಕೊಡಿಸುತ್ತೇನೆ ಎಂದು ಗುಲಾಬ್ ಚಂದ್ ಅವರನ್ನು ನಂಬಿಸಿದ್ದಾರೆ.

ಇದನ್ನು ನಂಬಿದ ಗುಲಾಬ್ ಚಂದ್ ಪತ್ನಿ ಹಾಗೂಹರ್ಷದ್ ರಾಜ್ ಕುಮಾರ್ ಜೊತೆ ಹುಬ್ಬಳ್ಳಿಗೆ ಹೊರಟು ಬಂದಿದ್ದಾರೆ. ಆದರೆ ಆರೋಪಿಗಳುಲೋಕಿಕೆರೆ ರಸ್ತೆಯ ಅಯ್ಯಪ್ಪ ದೇವಾಲಯದ ಬಳಿ ಬರಲು ಹೇಳಿದ್ದಾರೆ. ಅದರಂತೆಯೇ ಲೋಕಿಕೆರೆಗೆ ಬಂದ ಗುಲಾಬ್ ಚಂದ್ ಕುಟುಂಬಕ್ಕೆ ರಮೇಶ್ ಎಂಬಾತ ನನ್ನ ಬಳಿ 3600 ಪಾರಂಪರಿಕ ನಾಣ್ಯಗಳು ಇವೆ ಎಂದು ಹೇಳಿ ಕುಂಕುಮ ಲೇಪಿಸಿರುವ ನಾಣ್ಯಗಳನ್ನು ನೀಡಿದ್ದಾನೆ.

ಮುಂಬೈನಲ್ಲಿ ಹೋಗಿ ನಾಣ್ಯವನ್ನು ಪರೀಕ್ಷಿಸಿದಾಗ ತಾಮ್ರಲೇಪಿತ ನಾಣ್ಯಗಳು ಎಂದು ತಿಳಿದುಬಂದಿದೆ. ಆರೋಪಿಗಳು ಸ್ವಿಚ್ ಆಫ್ ಮಾಡಿಕೊಂಡಿದ್ದರು.

ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.