ದಾವಣಗೆರೆ: ಗುರುವಾರ ಬಂದಿದ್ದ 8000 ಲಸಿಕೆಯಲ್ಲಿ ಸುಮಾರು 7000 ಶುಕ್ರವಾರವೇ ಮುಗಿದಿತ್ತು. ಉಳಿದ ಒಂದು ಸಾವಿರ ಡೋಸ್ ಶನಿವಾರ ಬೆಳಿಗ್ಗೆಯೇ ಖಾಲಿಯಾಗಿತ್ತು. ಬಹುತೇಕ ಕಡೆಗಳಲ್ಲಿ ಜನರು ಬಂದು ಕಾದು ವಾಪಸ್ಸಾದರು.

ಜಿಲ್ಲಾ ಚಿಗಟೇರಿ ಆಸ್ಪತ್ರೆ ಸೇರಿ ಜಿಲ್ಲೆಯಲ್ಲಿ 100 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತದೆ. ಎಲ್ಲ ಕಡೆಗಳಲ್ಲಿ ಜನರು ಬೆಳಿಗ್ಗೆಯೇ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದರು. ಲಸಿಕೆ ಖಾಲಿಯಾಗಿದೆ ಎಂದು ಸಿಬ್ಬಂದಿ ತಿಳಿಸಿದರೂ. ಲಸಿಕೆ ಖಾಲಿ ಎಂದು ಬೋರ್ಡ್ ಹಾಕಿದರೂ ಜನ ವಾಪಸ್ಸಾಗಲು ತಯಾರಿರಲಿಲ್ಲ. ಕಾದು ಕಾದು ಸುಸ್ತಾದ ಮೇಲೆಯೆ ಮರಳಿದರು.

ಲಸಿಕೆ ಇನ್ನೆರಡು ದಿನಗಳ ಕಾಲ ಇರುವುದಿಲ್ಲ. ಸರ್ಕಾರ ಎರಡು ದಿನಗಳಲ್ಲಿ ಪೂರೈಕೆ ಮಾಡುವುದಾಗಿ ತಿಳಿಸಿದೆ. ಆದರೆ ಬಂದ ಬಳಿಕವಷ್ಟೇ ಖಚಿತವಾಗಲಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಪೆಟ್ರೊಲ್ ಬಂಕ್ನಲ್ಲಿ ಕೊರೊನಾ ಲಸಿಕೆ?: ಪೆಟ್ರೋಲ್ ಬಂಕ್ನಲ್ಲಿ ಕೊರೊನಾ ಲಸಿಕೆ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ದಾವಣಗೆರೆ ಪಿ.ಬಿ. ರೋಡ್ನಲ್ಲಿ ಪೂಜಾ ಹೋಟೆಲ್ ಬಳಿ ಇರುವ ಎಚ್.ಪಿ. ಪೆಟ್ರೋಲ್ ಬಂಕ್ನ ಕಚೇರಿ ಬಳಿ ಕೆಲವರಿಗೆ ಲಸಿಕೆ ಹಾಕುತ್ತಿರುವುದನ್ನು ಪತ್ತೆಹಚ್ಚಿದ ಜನರು ಮಾಧ್ಯಮದವರಿಗೆ ತಿಳಿಸಿದ್ದರು. ಮಾಧ್ಯಮದ ಮಂದಿ ಬರುತ್ತಿದ್ದಂತೆ ಲಸಿಕೆ ನೀಡುತ್ತಿದ್ದವರು ಪರಾರಿಯಾಗಿದ್ದಾರೆ. ‘ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ
ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.