ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್‌ಗೆ ಬೆದರಿಕೆ: ಆರೋಪಿ ವಿರುದ್ಧ 36 ಪ್ರಕರಣ

Published 20 ಡಿಸೆಂಬರ್ 2023, 4:32 IST
Last Updated 20 ಡಿಸೆಂಬರ್ 2023, 4:32 IST
ಅಕ್ಷರ ಗಾತ್ರ

ದಾವಣಗೆರೆ: ಲೋಕಾಯುಕ್ತರ ಹೆಸರಿನಲ್ಲಿ ನ್ಯಾಮತಿ ತಹಶೀಲ್ದಾರ್ ಗೋವಿಂದಪ್ಪ ಅವರಿಗೆ ಕರೆ ಮಾಡಿ ಹಣ ಹಾಕುವಂತೆ ಬೆದರಿಸಿದ್ದ ಆರೋಪಿ ಮುರಿಗೆಪ್ಪ ಅಲಿಯಾಸ್ ಮುರುಗೇಶ್ ವಿರುದ್ಧ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಕುರಿತು ರಾಜ್ಯದ ವಿವಿಧ ಠಾಣೆಗಳಲ್ಲಿ 36ಕ್ಕೂ ಪ್ರಕರಣಗಳು ದಾಖಲಾಗಿವೆ.

ಡಿ.7ರಂದು ಗೋವಿಂದಪ್ಪ ಅವರಿಗೆ ಕರೆ ಮಾಡಿ, ‘ನಾನು ಲೋಕಾಯುಕ್ತ ಕಚೇರಿಯ ಡಿವೈಎಸ್‌ಪಿಯಾಗಿದ್ದು, ನಿಮ್ಮ ಮೇಲೆ ಬೆಂಗಳೂರು ನಗರದ ಎಂ.ಎಸ್. ಬಿಲ್ಡಿಂಗ್‌ನಲ್ಲಿರುವ ಲೋಕಾಯುಕ್ತ ಕಚೇರಿಯಲ್ಲಿ ಎಫ್.ಐ.ಆರ್ ಆಗಿದೆ. ಈ ವಿಚಾರವಾಗಿ   ರೇಡ್ ಮಾಡಲು ಸಿಬ್ಬಂದಿ ತಯಾರು ಮಾಡಿದ್ದಾರೆ. ನಿಮ್ಮ ಮೇಲೆ ದಾಳಿ ಮಾಡದಂತೆ ನಮ್ಮ ಮೇಲಧಿಕಾರಿಗಳಿಗೆ ತಿಳಿಸಿದ್ದೇನೆ. ನಾನು ಹೇಳಿದ ನಂಬರ್‌ಗೆ ₹2 ಲಕ್ಷ ಹಾಕಿ ಎಂದು ಬೇಡಿಕೆ ಇಟ್ಟಿದ್ದ. ಈ ಕುರಿತು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯ ಜಾಡು ಹಿಡಿದು ಪೊಲೀಸರು ಮಹಾರಾಷ್ಟ್ರದ ಸಾಂಗ್ಲಿಯ ಮೀರಜ್ ಟೌನ್‌ನಲ್ಲಿ ಈತನನ್ನು ಪೊಲೀಸರು ಬಂಧಿಸಿದ್ದರು.

ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT