ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ 1ರಂದು ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ

Last Updated 29 ಫೆಬ್ರುವರಿ 2020, 13:01 IST
ಅಕ್ಷರ ಗಾತ್ರ

ದಾವಣಗೆರೆ: ಕರ್ನಾಟಕ ಅಮೆಚೂರ್ ಬಾಡಿ ಬಿಲ್ಡರ್ಸ್ ಅಸೋಸಿಯೇಷನ್ ಮತ್ತು ಟೈಟಾನ್ ಗ್ರೂಪ್ ವತಿಯಿಂದ ರಾಜ್ಯಮಟ್ಟದ ಮುಕ್ತ ದೇಹದಾರ್ಢ್ಯ ಸ್ಪರ್ಧೆ ಮಾರ್ಚ್‌ 1ರಂದು ನಗರದ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ನಡೆಯಲಿದೆ.

‘ಸಂಜೆ 6ಕ್ಕೆ ನಡೆಯುವ ಈ ಸಮಾರಂಭವನ್ನು ಮಾಜಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಬೆಂಗಳೂರು ಎಸಿ‍ಪಿ ಎಂ.ಬಾಬು, ನಗರ ವಿಭಾಗದ ಡಿಎಸ್‌ಪಿ ಯು.ನಾಗೇಶ್‌ ಐತಾಳ್, ಮೇಯರ್ ಬಿ.ಜಿ. ಅಜಯಕುಮಾರ್, ಪಾಲಿಕೆ ಸದಸ್ಯ ಜೆ.ಎನ್.ಶ್ರೀನಿವಾಸ್, ದುಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಭಾಗವಹಿಸುವರು’ ಎಂದು ಕಾರ್ಯಕ್ರಮದ ಆಯೋಜಕ ಮಂಜುನಾಥ್ ಮೊಗವೀರ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ಸ್ಪರ್ಧೆಯಲ್ಲಿ ಟೈಟಲ್ ವಿನ್ನರ್‌ಗೆ ಬಜಾಜ್ ಪಲ್ಸರ್ 160 ಸಿಸಿ ಬೈಕ್, ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವುದು. ಮೋಸ್ಟ್‌ ಮಸ್ಟುಲರ್‌ಗೆ ₹25 ಸಾವಿರ, ಬೆಸ್ಟ್‌ ಫೋಸರ್‌ಗೆ ₹20 ಸಾವಿರ ಹಾಗೂ ಎಲ್ಲಾ ಗುಂಪುಗಳಲ್ಲೂ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಗುವುದು’ ಎಂದರು.

‘ಸ್ಪರ್ಧೆಗೆ ₹500 ನೋಂದಣಿ ಶುಲ್ಕವಿದ್ದು, ಭಾನುವಾರ ಮಧ್ಯಾಹ್ನ 1ರಿಂದ ಮಧ್ಯಾಹ್ನ 3ರವರೆಗೆ ದೇಹ ಪರೀಕ್ಷೆಗೆ ಹಾಜರಾಗಬೇಕು. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಡಯಟ್‌ ಫುಡ್ ನೀಡಲಾಗುವುದು’ ಎಂದು ಹೇಳಿದರು.

ಪ್ರಮೋದ್, ವಾಸಿಂ, ಮೆಹಬೂಬ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT