ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಾಪಟ್ಟಣ | ಕಿಲೋ ₹70ಕ್ಕೆ ಇಳಿದ ಟೊಮೆಟೊ ದರ

Published 8 ಆಗಸ್ಟ್ 2023, 14:43 IST
Last Updated 8 ಆಗಸ್ಟ್ 2023, 14:43 IST
ಅಕ್ಷರ ಗಾತ್ರ

ಬಸವಾಪಟ್ಟಣ: ಕಿಲೋಗೆ ₹150ಕ್ಕೆ ಏರಿದ್ದ ಟೊಮೆಟೊ, ಈಗ ₹70ರಂತೆ ಮಾರಾಟವಾಗುತ್ತಿದೆ. ರೈತರು ಇಲ್ಲಿನ ಸಂತೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾರಾಟಕ್ಕೆ ತಂದದ್ದರಿಂದ ಟೊಮೆಟೊ ಬೆಲೆ ಸಹಜವಾಗಿ ಕುಸಿಯಿತು.

ಆದರೆ ಟೊಮೆಟೊ ದರ ಇದಕ್ಕಿಂತಲೂ ಕಡಿಮೆಯಗಲು ಇನ್ನೂ ಕೆಲವಾರಗಳು ಬೇಕಾಗುತ್ತದೆ ಎನ್ನುತ್ತಾರೆ ವ್ಯಾಪಾರಿಗಳು

ಎರಡು ತಿಂಗಳಿನಿಂದ 25 ಕಿಲೋ ತೂಗುವ ಕ್ರೇಟ್‌ ಒಂದಕ್ಕೆ ₹2000ದಂತೆ ಸಗಟು ದರದಲ್ಲಿ ಮಾರಾಟವಾಗುತ್ತಿದ್ದ ಟೊಮೆಟೊ ಇಲ್ಲಿನ ಸಂತೆಯಲ್ಲಿ ₹1,300ಕ್ಕೆ ಇಳಿದಿದೆ ಎಂದು ಇಲ್ಲಿನ ತರಕಾರಿ ವ್ಯಾಪಾರಿ ಮುಹೀಬುಲ್ಲಾ ಹೇಳಿದ್ದಾರೆ. 

ನಗರಗಳ ಮಾರುಕಟ್ಟೆಗೆ ಹೊರ ರಾಜ್ಯಗಳಿಂದ ಟೊಮೆಟೊ ಬಂದಿದೆ ಎಂಬ ವದಂತಿ ಇದೆ. ಇದರಿಂದ ಬೆಲೆ ಕಡಿಮೆ ಆಗಬಹುದು ಎಂದು ಟೊಮೆಟೊ ಬೆಳೆಗಾರರು ನಗರಗಳಿಗೆ ಹೋಗದೇ, ಸ್ಥಳೀಯ ಸಂತೆಗಳಿಗೆ ಟೊಮೆಟೊ ತರುತ್ತಿದ್ದಾರೆ ಎಂದು ವ್ಯಾಪಾರಿ ಮಹಮದ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT