ದಾವಣಗೆರೆ: ಸಾಲ ಕೊಡುವುದಾಗಿ ನಂಬಿಸಿ ಖಾಸಗಿ ಫೈನಾನ್ಸ್ ಕಂಪನಿಯೊಂದು ಫೈನಾನ್ಸ್‌ನಲ್ಲೇ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ₹1.16 ಲಕ್ಷ ವಂಚಿಸಿದೆ.

ಚನ್ನಗಿರಿ ತಾಲ್ಲೂಕಿನ ಗೊಲ್ಲರಹಳ್ಳಿ ಗ್ರಾಮದ ಜಿ.ಎಚ್. ಪ್ರವೀಣ್ ವಂಚನೆಗೆ ಒಳಗಾದವರು.

ಸೊನಾಟೆಲ್ ಫೈನಾನ್ಸ್ ಲಿಮಿಟೆಡ್ ಕಂಪನಿಯವರು ಎಂದು ಹಿಂದಿ ಭಾಷೆಯಲ್ಲಿ ಪ್ರವೀಣ್ ಅವರಿಗೆ ಕರೆ ಮಾಡಿದ ವ್ಯಕ್ತಿಯೊಬ್ಬ ₹4 ಲಕ್ಷ ವೈಯಕ್ತಿಕ ಸಾಲ ಕೊಡುವುದಾಗಿ ಹೇಳಿ, ಪಾನ್, ಆಧಾರ ನಂಬರ್ ಪಡೆದಿದ್ದಾನೆ. ಬಳಿಕ ವಿಮೆ ದಾಖಲೆ ದಾಖಲೆಗಳ ಖರ್ಚಿಗೆ ₹13 ಸಾವಿರ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ. ಆಗ ಪ್ರವೀಣ್ ಅವರು ಗೂಗಲ್ ಪೇ ಮುಖಾಂತರ ಹಣ ಹಾಕಿದ್ದಾರೆ.

ಸಾಲ ಭದ್ರತೆಗಾಗಿ ₹53,400, ಅಲ್ಲದೇ ಜಿಎಸ್‌ಟಿ ಕಟ್ಟದೇ ಇರುವ ಕಾರಣ ನಿಮಗೆ ಲೋನ್ ಆಗಿಲ್ಲ ಎಂದು ₹44, 700 ಹಣವನ್ನು ಪ್ರವೀಣ್ ಅವರಿಂದ ಪಡೆದುಕೊಂಡಿದ್ದಾರೆ. ಅಂತಿಮವಾಗಿ ನಿಮ್ಮ ಹಣ ಒಂದು ವಾರದಲ್ಲಿ ಬರುತ್ತದೆ ಲೋನ್ ರದ್ದು ಮಾಡಲು ಮತ್ತೆ ಹಣ ಕಟ್ಟಿ ಎಂದಿದ್ದಕ್ಕೆ ಪ್ರವೀಣ್ ಮತ್ತೊಮ್ಮೆ ₹5 ಸಾವಿರ ಕಟ್ಟಿದ್ದಾರೆ. ಆದರೆ ಕಟ್ಟಿದ ಹಣ ಮಾತ್ರ ವಾಪಸ್ ಬರಲಿಲ್ಲ ಎಂದು ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.