ಶನಿವಾರ, ಜುಲೈ 24, 2021
21 °C

ಇಬ್ಬರು ವೃದ್ಧರು ಸೇರಿ 8 ಮಂದಿಗೆ ಕೊರೊನಾ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

ದಾವಣಗೆರೆ: 80 ವರ್ಷದ ಮತ್ತು 60 ವರ್ಷದ ಇಬ್ಬರು ವೃದ್ಧರು ಸೇರಿ 8 ಮಂದಿಗೆ ಕೊರೊನಾ ಇರುವುದು ಗುರುವಾರ ದೃಢಪಟ್ಟಿದೆ.

ನಿಟುವಳ್ಳಿ 60 ಅಡಿ ರಸ್ತೆಯ 17 ವರ್ಷದ ಬಾಲಕನಿಗೆ (ಪಿ. 16668) ಶೀತಜ್ವರ ಎಂದು ಗುರುತಿಸಲಾಗಿದೆ. ಯಾರ ಸಂಪರ್ಕದಿಂದ ಬಂದಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ಬೆಂಗಳೂರಿನಿಂದ ಬಂದಿರುವ ಎಂಸಿಸಿ ಎ ಬ್ಲಾಕ್‌ನ 32 ವರ್ಷದ ಯುವಕನಿಗೆ (ಪಿ.16671) ಸೋಂಕು ಬಂದಿದೆ. ಹರಿಹರ ಜುಗಿಳಿಬಾವಿಯ 34 ವರ್ಷದ ವ್ಯಕ್ತಿಯ (ಪಿ.11158) ಸಂಪರ್ಕದಿಂದ ಸೌಕಿಪೇಟೆಯ 35 ವರ್ಷದ ಯುವಕನಿಗೆ ವೈರಸ್‌ ತಗುಲಿದೆ. ಚನ್ನಗಿರಿ ಕುಂಬಾರಬೀದಿಯ 39 ವರ್ಷದ ವ್ಯಕ್ತಿಯಿಂದ (ಪಿ.9896) ಚನ್ನಗಿರಿ ರಾಜನಗೊಂಡನಹಳ್ಳಿಯ 40 ವರ್ಷದ ವ್ಯಕ್ತಿಗೆ (ಪಿ. 16672) ಕೊರೊನಾ ಬಂದಿದೆ.

ಹೊನ್ನಾಳಿ ಕ್ಯಾಸಿನಕೆರೆ 59 ವರ್ಷದ ವ್ಯಕ್ತಿಯಿಂದ (ಪಿ. 10386) ಕ್ಯಾಸಿನಕೆರೆಯ 19 ವರ್ಷದ ಯುವಕನಿಗೆ (ಪಿ. 16673) ಸೋಂಕು ತಗುಲಿದೆ.

ಪಿ.ಬಿ. ರೋಡ್‌ನ 24 ವರ್ಷದ ಯುವಕನಿಗೆ (ಪಿ. 16674) ಸೋಂಕು ಕಾಣಿಸಿಕೊಂಡಿದೆ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.

ಕಂಟೈನ್‌ಮೆಂಟ್‌ ವಲಯದಲ್ಲಿ ರ‍್ಯಾಂಡಮ್‌ ಆಗಿ ಪರೀಕ್ಷೆ ಮಾಡುವ ಸಂದರ್ಭದಲ್ಲಿ ಹರಿಹರದ 60 ವರ್ಷದ ವೃದ್ಧ (ಪಿ.16674), ಬೇತೂರು ರಸ್ತೆಯ 80 ವರ್ಷದ ವೃದ್ಧರಲ್ಲಿ (ಪಿ. 16675) ಸೋಂಕು ಕಾಣಿಸಿಕೊಂಡಿದ್ದು, ಸಂಪರ್ಕ ಹುಡುಕಲಾಗುತ್ತಿದೆ.

ಜಿಲ್ಲೆಯಲ್ಲಿ ಈವರೆಗೆ 333 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ ಗುರುವಾರ ಬಿಡುಗಡೆಗೊಂಡ 6 ಮಂದಿ ಸೇರಿ 272 ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ. 8 ಮಂದಿ ಮೃತಪಟ್ಟಿದ್ದಾರೆ. 53 ಸಕ್ರಿಯ ಪ್ರಕರಣಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು