ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಅರ್ಥ ಮಾಡಿಕೊಂಡು ಅಳವಡಿಸಿಕೊಳ್ಳಿ: ನ್ಯಾಯಾಧೀಶರಾದ ಕೆ.ಬಿ. ಗೀತಾ ಸಲಹೆ

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಕೆ.ಬಿ. ಗೀತಾ ಸಲಹೆ
Last Updated 15 ಏಪ್ರಿಲ್ 2021, 6:47 IST
ಅಕ್ಷರ ಗಾತ್ರ

ದಾವಣಗೆರೆ: ಹೃದಯಾಳದಿಂದ ಸಂವಿಧಾನವನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಂಬೆಡ್ಕರ್ ಅವರ ತತ್ವಾದರ್ಶ ಉಳಿಸಿಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಕೆ.ಬಿ. ಗೀತಾ ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಸ್ಲಂ ಜನಾಂದೋಲನ ವತಿಯಿಂದ ಎಡಿಆರ್ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಬಿ.ಆರ್‌. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿರಿಯ ವಕೀಲ ಬಿ.ಎಂ. ಹನುಮಂತಪ್ಪ, ‘ನೋವಿದ್ದವರ ಪರವಾಗಿ ಹೋರಾಟ ಮಾಡಿದ ಅಂಬೇಡ್ಕರ್ ಅವರ ಜೀವನ ನಮಗೆ ಸ್ಫೂರ್ತಿಯಾಗಬೇಕು. ಸಮಾಜದಲ್ಲಿರುವ ಅಸಮಾನತೆ, ಜಾತಿಯತೆ ಮತ್ತು ವರ್ಗ ಸಂಘರ್ಷಗಳ ನಿವಾರಣೆಗೆ ಅವಿರತ ಹೋರಾಟ ಮಾಡಬೇಕು’ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯ್ಕ, ‘ಶತಮಾನಗಳಿಂದ ಶೋಷಣೆಗೊಳಗಾದ ಸಮಾಜ ಶಿಕ್ಷಣ, ಸಂಘಟನೆ ಮತ್ತು ಹೋರಾಟಗಳ ಮೂಲಕ ತಮ್ಮ ಹಕ್ಕು ಕರ್ತವ್ಯಗಳ ಬಗ್ಗೆ ತಿಳಿವಳಿಕೆ ನೀಡಿ ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದ ಅಂಬೇಡ್ಕರ್ ಜಯಂತಿ ನಿತ್ಯೋತ್ಸವವಾಗಬೇಕು’ ಎಂದು ತಿಳಿಸಿದರು.‌

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್. ಅರುಣ್‍ಕುಮಾರ್, ‘ಸ್ವತಂತ್ರ ಭಾರತಕ್ಕೆ ಅಂಬೇಡ್ಕರ್ ಅವರ ಕೊಡುಗೆ ಅಮೂಲ್ಯ. ಇಡೀ ಜಗತ್ತೇ ಗೌರವಿಸವು ಒಬ್ಬ ಮಹಾನ್ ಮಾನವತವಾದಿ. ಮಹಿಳಾ ಹಕ್ಕು, ಕಾರ್ಮಿಕರ ಹಕ್ಕುಗಳನ್ನು ದೊರಕುವಂತೆ ಮಾಡಿದವರು ಅವರು’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಅನೀಸ್‌ ಪಾಷಾ, ಆಂಜನೇಯ ಗುರೂಜಿ, ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಶ್ರೀನಿವಾಸ್ ಮಾತನಾಡಿದರು. ಸ್ಲಂ ಜನಾದೋಂಲನದ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ ಅಧ್ಯಕ್ಷತೆ ವಹಿಸಿದ್ದರು.

ಕಾಂಗ್ರೆಸ್‌ ಇಂಟಕ್‌ ಘಟಕ, ಮಜ್ದೂರ್‌ ಘಟಕ: ನಗರದ ಹದಡಿ ರಸ್ತೆಯಲ್ಲಿರುವ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗ ಹಾಗೂ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ವಿಭಾಗದಿಂದ ಅಂಬೇಡ್ಕರ್‌ ಜಯಂತಿ ನಡೆಯಿತು.

ಕೆಪಿಸಿಸಿ ವಕ್ತಾರ ಡಿ ಬಸವರಾಜ್‌, ‘ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತಕ್ಕೆ ಬಂದ ದಿನದಿಂದಲೂ ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನು ಬದಲಿಸಲು ಪ್ರಯತ್ನಿಸಲಾಗುತ್ತಿದೆ. ಒಂದೊಮ್ಮೆ ಅಂಬೇಡ್ಕರ್ ರಚಿಸಿದ ಸಂವಿಧಾನ ಬದಲಿಸಿದರೆ ದೇಶದಲ್ಲಿ ರಕ್ತ ಕ್ರಾಂತಿಯಾಗಲಿದೆ’ ಎಂದು ಎಚ್ಚರಿಸಿದರು.

ಮುಖ್ಯಮಂತ್ರಿ ಮತ್ತು ಸಾರಿಗೆ ಮಂತ್ರಿಯವರು ಸಾರಿಗೆ ನೌಕರರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಎಚ್. ಸುಭಾನ್ ಸಾಬ್, ಜಿಲ್ಲಾ ಕಾಂಗ್ರೆಸ್ ರಾಷ್ಟ್ರೀಯ ಮಜ್ಬೂರ್ ವಿಭಾಗದ ಅಧ್ಯಕ್ಷ ಕೆ.ಎಂ. ಮಂಜುನಾಥ್ ಅವರೂ ಇದ್ದರು.

ಆನಗೋಡಿನಲ್ಲಿ ಅಂಬೇಡ್ಕರ್‌ ಜಯಂತಿ: ಬುಧವಾರ ಆನಗೋಡು ಗ್ರಾಮದ ಅಂಬೇಡ್ಕರ್ ನಗರದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 130ನೇ ಜಯಂತಿಯನ್ನು ಯುವ ಜೈ ಭೀಮ್ ಸಂಘ ಹಮ್ಮಿಕೊಂಡಿತು.

ಗ್ರಾಮ ಪಂಚಾಯತಿ ಸದಸ್ಯ ಕರಿಬಸಪ್ಪ ಉದ್ಘಾಟಿಸಿ ಮಾತನಾಡಿ, ‘ಅಂಬೇಡ್ಕರ್ ಬರೆದ ಭಾರತ ಸಂವಿಧಾನವು ದೇಶದ ಕಟ್ಟಕಡೆಯ ವ್ಯಕ್ತಿಯ ಸಮಾಜಿಕ,ಆರ್ಥಿಕ, ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸುವ ತತ್ವ ಸಿದ್ಧಾತವಾಗಿದೆ. ಅಂಬೇಡ್ಕರ್ ದಲಿತ ನಾಯಕ ಮಾತ್ರವಲ್ಲದೇ ಸಮಾಜ ಮೇಲ್ವರ್ಗವದರಿಗೆ ಸಂವಿಧಾನ ನೀಡಿದ ಅನುಕೂಲಗಳನ್ನು ಮರೆಯಬಾರದು, ಅಂಬೇಡ್ಕರ್ ಮೇಲ್ವರ್ಗದಲ್ಲಿ ಜನಿಸಿದ್ದರೆ ಭಾರತದಲ್ಲಿ ಅನೇಕ‌ ದೇವಸ್ಥಾನ ನಿರ್ಮಿಸುತ್ತಿದ್ದರು’ ಎಂದು ತಿಳಿಸಿದರು.

ಶಿಕ್ಷಕರಾದ ಸೋಮಶೇಖರಪ್ಪ, ‘ಅಂಬೇಡ್ಕರ್‌ ಆದರ್ಶ ವೇದಿಕೆ ಮೇಲಿನ ಮಾತಿಗೆ ಸೀಮಿತವಾಗಿದೆ. ಜೀವನದಲ್ಲಿ ಅಳವಡಿಸಿಕೊಂಡಿಲ್ಲ. ಅಂಬೇಡ್ಕರ್ ಜಯಂತಿಯನ್ನು ಎಸ್‌ಸಿ, ಎಸ್‌ಟಿ, ಮುಸ್ಲಿಂ ಸಮುದಾಯಗಳು ಮಾತ್ರ ಆಚರಿಸುವುದಲ್ಲ. ಎಲ್ಲ ಸಮುದಾಯಗಳು ಆಚರಿಸಬೇಕು’ ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಅಧ್ಯಕ್ಷ ನಸ್ರುಲ್ಲಾ, ಸುರೇಶ್ ಮಾತನಾಡಿದರು. ಬಸವರಾಜ್, ಯುವ ಜೈ ಭೀಮ್ ಸಂಘದ ಅಧ್ಯಕ್ಷ‌ ಶ್ರೀನಿವಾಸ್, ಉಪಾಧ್ಯಕ್ಷ ಮನೋಜ್, ವೆಂಕಟೇಶ್,ರುದ್ರಪ್ಪ, ಸುನೀಲ್, ಸಿದ್ದೇಶ್, ಗೋವಿಂದಪ್ಪ ಇದ್ದರು.

ಎಸ್‌ಸಿಎಸ್‌ಟಿ ಕಾನೂನು ಹಕ್ಕುಗಳ ಹೋರಾಟ ಸಮಿತಿ: ಸಮಿತಿ ಜಿಲ್ಲಾ ಅಧ್ಯಕ್ಷ ಆವರಗೆರೆ ವಾಸು ಮಾತನಾಡಿ, ‘ಅಪಾರ ಶ್ರಮದ ಮೂಲಕ ಜ್ಞಾನದ ಶಿಖರ ಏರಿ ಭಾರತದ ಹೊಸ ಸಂವಿಧಾನವನ್ನು ರೂಪಿಸಿದವರು ಅಂಬೇಡ್ಕರ್‌’ ಎಂದು ತಿಳಿಸಿದರು.

ರಾಜು ಕೆರೆಯಾಗನಹಳ್ಳಿ, ಜೀವನ್ ನಿಟುವಳ್ಳಿ ಸಿ. ಗುರುಮೂರ್ತಿ, ಮಂಜುನಾಥ ಮಳಲ್ಕೆರೆ, ರುದ್ರೇಶ ಮಳಲ್ಕೆರೆ, ಅಂಜಿನಪ್ಪ ಮಳಲ್ಕೆರೆ, ಕುಮಾರನಾಯ್ಕ, ಸಂತೋಷ ದೊಡ್ಡಮನಿ, ಮಂಜುನಾಥ, ಪರಶುರಾಮ ಗುದ್ದಾಳ್, ಚೌಡೇಶ್, ವಿಕ್ರಮ್, ದಾದು, ರಾಜಪ್ಪ, ಅಲ್ಲಾಭಕ್ಷಿ, ಗಿರೀಶ್, ಪ್ರಕಾಶ್, ಮಧು, ಕಾರ್ತಿಕ, ತಿಪ್ಪೇಸ್ವಾಮಿ ಅವರೂ ಇದ್ದರು.

ಕೊಂಡಜ್ಜಿ ಶಾಲೆ: ಹರಿಹರ ತಾಲ್ಲೂಕು ಕೊಂಡಜ್ಜಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬೇಡ್ಕರ್‌ ಜಯಂತಿ ನಡೆಯಿತು. ಎಸ್‌ಡಿಎಂಸಿ ಅಧ್ಯಕ್ಷ ಎಚ್‌. ಗಂಗಾಧರ್‌, ಉಪಾಧ್ಯಕ್ಷ ಪರಮೇಶ್ವರಪ್ಪ, ಸದಸ್ಯರಾದ ಪರಶುರಾಮ, ವಿಜಯ ಕುಮಾರ್‌, ಗುಡ್ಡಪ್ಪ, ಮಂಜುಳಾ ಬಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ, ಸದಸ್ಯರಾದ ಶಿವಕುಮಾರ್‌, ಕರಿಯಮ್ಮ, ವನಜಾಕ್ಷಮ್ಮ, ಮರಿಯಮ್ಮ, ನಾರಪ್ಪ, ದುರುಗಮ್ಮ, ರತ್ನಮ್ಮ, ಗಿರಿಜಮ್ಮ, ಹದಡಿ ನಿಂಗಪ್ಪ, ಮುಖ್ಯ ಶಿಕ್ಷಕ ಹನುಮಂತಪ್ಪ, ಶಿಕ್ಷಕರಾದ ಶಾಂತಕುಮಾರಿ, ಸಾವಿತ್ರಮ್ಮ, ಜ್ಯೋತಿ, ಅಂಜನಾದೇವಿ, ಜಾಕೀರ್‌ ಹುಸೇನ್‌ ಇದ್ದರು.

ಸಂವಿಧಾನವೇ ಧರ್ಮಗ್ರಂಥ’

ದಾವಣಗೆರೆ: ಸಂವಿಧಾನವೇ ದೇಶದ ಧರ್ಮಗ್ರಂಥ. ಸಂವಿಧಾನದ ಮೇಲೆ ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಗೌರವವಿಲ್ಲ. ಹಾಗಾಗಿ ಸಂವಿಧಾನ ವಿರೋಧಿ ಆಡಳಿತ ನೀಡುತ್ತಿವೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ‘ವಿಶ್ವಸಂಸ್ಥೆ ಅಂಬೇಡ್ಕರ್ ಜನ್ಮದಿನವನ್ನು ವಿಶ್ವ ಜ್ಞಾನ ದಿನವನ್ನಾಗಿ ಘೋಷಿಸಿದೆ. ಆದರೆ ದೇಶ ನಡೆಸುವ ಬಿಜೆಪಿಯವರು ಸಂವಿಧಾನ ವಿರೋಧ ಹೇಳಿಕೆ ನೀಡುವ ಮೂಲಕ ಅಂಬೇಡ್ಕರ್ ಅವರನ್ನು ಅವಮಾನಿಸುತ್ತಿದೆ’ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಜಿಲ್ಲಾ ವಕ್ತಾರೆ ನಾಗರತ್ನಮ್ಮ, ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ರಾಜ್ಯ ಕಾರ್ಯದರ್ಶಿ ಸೋಮ್ಲಾಪುರದ ಹನುಮಂತಪ್ಪ, ಪಾಲಿಕೆ ಸದಸ್ಯ ಕೆ.ಚಮನ್ ಸಾಬ್, ಕಾಂಗ್ರೆಸ್ ಲೀಗಲ್ ಸೆಲ್ ಅಧ್ಯಕ್ಷ ಪ್ರಕಾಶ್ ಪಾಟೀಲ್, ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಸಾಗರ್ ಎಂ.ಎಚ್.,ಯುವ ಕಾಂಗ್ರೆಸ್ ಮುಖಂಡ ರಾಕೇಶ್ ಮಾತನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಮುಖಂಡರಾದ ಶ್ವೇತಾ ಶ್ರೀನಿವಾಸ್, ಸವಿತಾ ಗಣೇಶ್, ಸುಧಾ ಮಂಜುನಾಥ್, ಆಶಾ ಉಮೇಶ್, ಮೀನಾಕ್ಷಿ ಜಗದೀಶ್, ಎಸ್.ಮಲ್ಲಿಕಾರ್ಜುನ್, ಹರೀಶ್ ಕೆ.ಎಲ್., ಇಟ್ಟಿಗುಡಿ ಮಂಜುನಾಥ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT