ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ದಾಖಲೆ ಇಲ್ಲದ ₹ 3.98 ಲಕ್ಷ ವಶ

Published 20 ಮಾರ್ಚ್ 2024, 16:13 IST
Last Updated 20 ಮಾರ್ಚ್ 2024, 16:13 IST
ಅಕ್ಷರ ಗಾತ್ರ

ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಹೊಳೆಹರಹಳ್ಳಿ ಚೆಕ್ ಪೋಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ₹3.98 ಲಕ್ಷವನ್ನು ಚುನಾವಣಾ ಕಣ್ಗಾವಲು ತಂಡವು (ಎಸ್‌.ಎಸ್‌.ಟಿ) ಬುಧವಾರ ವಶಪಡಿಸಿಕೊಂಡಿದೆ.

ಶಿಕ್ಷಕ ಗಡೇಕಟ್ಟೆ ಎಂಬುವರು ಬೈಕ್‌ನಲ್ಲಿ ಹಣ ಸಾಗಿಸುತ್ತಿದ್ದಾಗ ಎಸ್‌ಎಸ್‌ಟಿ ಸಿಬ್ಬಂದಿ ಪರಿಶೀಲಿಸಿದಾಗ ನಗದು ಪತ್ತೆಯಾಗಿದ್ದು, ಸಾಲದ ಹಣ ಎನ್ನಲಾಗುತ್ತಿದೆ. ಆದರೆ ಯಾವುದೇ ದಾಖಲೆ ಸಲ್ಲಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಅಬ್ದುಲ್ ನಜೀರ್ ಎಂಬವರು 21 ಮೊಬೈಲ್‌ಗಳನ್ನು ಖಾಸಗಿ ಬಸ್‌ನಲ್ಲಿ ತೆಗದುಕೊಂಡು ಹೋಗುತ್ತಿರುವ ವೇಳೆ ವಶಪಡಿಸಿಕೊಳ್ಳಲಾಗಿದೆ. ಮೊಬೈಲ್ ಬಿಲ್‌ಗಳು ನಿಖರವಾಗಿಲ್ಲದ ಕಾರಣಕ್ಕೆ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ನಗದು ಹಾಗೂ ಮೊಬೈಲ್‌ಗಳನ್ನು ಖಜಾನೆಗೆ ಒಪ್ಪಿಸಲಾಗಿದೆ.

‘ಮುಂದಿನ ತನಿಖೆ ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT