ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನ ಸಾಹಿತ್ಯ ಸಮ್ಮೇಳನ 26ಕ್ಕೆ

ಸಮ್ಮೇಳನಾಧ್ಯಕ್ಷರಾಗಿ ಶಿವಾನಂದ ಗುರೂಜಿ ಆಯ್ಕೆ
Last Updated 23 ಜನವರಿ 2019, 12:22 IST
ಅಕ್ಷರ ಗಾತ್ರ

ದಾವಣಗೆರೆ: ವಚನ ಸಾಹಿತ್ಯ ಮತ್ತು ಸಾಮಾಜಿಕ ಪರಿವರ್ತನೆ ಕುರಿತು ಜಿಲ್ಲಾ ಮಟ್ಟದ ಒಂದು ದಿನದ ವಚನ ಸಾಹಿತ್ಯ ಸಮ್ಮೇಳನವನ್ನು ಜ. 26ರಂದು ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕೋಳ್‌ ಈಶ್ವರಪ್ಪ ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೆಳಿಗ್ಗೆ 8.30ಕ್ಕೆ ಸಮ್ಮೇಳನಾಧ್ಯಕ್ಷ ಶಿವಾನಂದ ಗುರೂಜಿ ರಾಷ್ಟ್ರಧ್ವಜ, ಚಿಕ್ಕೋಳ್‌ ಈಶ್ವರಪ್ಪ ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು. ವಿದ್ಯಾನಗರದ ಆಂಜನೇಯ ಸ್ವಾಮಿ ದೇಗುಲದಲ್ಲಿ ಬೆಳಿಗ್ಗೆ 9ಕ್ಕೆ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಡಾ. ಎಂ.ಜಿ. ಈಶ್ವರಪ್ಪ ಮೆರವಣಿಗೆ ಉದ್ಘಾಟಿಸುವರು ಎಂದರು.

ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶರಣ ಸಾಹಿತ್ಯ ಪರಿಷತ್ತು ರಾಜ್ಯ ಅಧ್ಯಕ್ಷ ಡಾ. ಬಸವರಾಜ ಸಾದರ ಅಧ್ಯಕ್ಷತೆ ವಹಿಸುವರು. ಪರಿಷತ್ತಿನ ಗೌರವ ಸಲಹೆಗಾರ ಡಾ. ಗೊ.ರು. ಚನ್ನಬಸಪ್ಪ ಸಮ್ಮೇಳನ ಉದ್ಘಾಟಿಸುವರು. ಕದಳಿ ಮಹಿಳಾ ವೇದಿಕೆ ಜಿಲ್ಲಾ ಅಧ್ಯಕ್ಷೆ ಪ್ರಮೀಳಾ ನಟರಾಜ್‌ ಉಪಸ್ಥಿತರಿರುವರು.

‘ಅನುಭವ ಮಂಟಪದ ಅನನ್ಯತೆ’ ಗೋಷ್ಠಿ ಮಧ್ಯಾಹ್ನ 12ಕ್ಕೆ ಆರಂಭವಾಗಲಿದ್ದು, ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ಅನಿತಾ ದೊಡ್ಡಗೌಡರ್‌ ‘ಅನುಭವ ಮಂಟಪದ ಸಾಮಾಜಿಕ ಆಯಾಮ’ ಕುರಿತು ಉಪನ್ಯಾಸ ನೀಡುವರು. ಡಿ.ಆರ್‌.ಎಂ. ವಿಜ್ಞಾನ ಕಾಲೇಜಿನ ಉಪನ್ಯಾಸಕ ಡಾ. ವಡ್ನಾಳ್‌ ಜಿ. ರುದ್ರೇಶ್‌ ‘ಅನುಭವ ಮಂಟಪದ ಆರ್ಥಿಕ ಆಯಾಮ’, ದಾವಣಗೆರೆ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ಬ್ರಹ್ಮದೇವ ಹದಳಗಿ ‘ಅನುಭವ ಮಂಟಪ ಮತ್ತು ಜಾಗತೀಕರಣ’ ಉಪನ್ಯಾಸ ನೀಡುವರು. ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ.

‘ವಚನ ವಾಚನ ಮತ್ತು ವಿಶ್ಲೇಷಣೆ’ ಗೋಷ್ಠಿ ಮಧ್ಯಾಹ್ನ 2.30ಕ್ಕೆ ದವನ್‌ ಕಾಲೇಜು ಶೈಕ್ಷಣಿಕ ಸಲಹೆಗಾರ ಬಾತಿ ಬಸವರಾಜ್‌, ಯುಬಿಡಿಟಿ ಎಂಜಿನಿಯರಿಂಗ್‌ ಕಾಲೇಜಿನ ಕನ್ನಡ ಉಪನ್ಯಾಸಕ ಬಸವರಾಜ ಹನುಮಲಿ ವಿಶ್ಲೇಷಣೆ ಮಾಡುವರು. ಯಶಾ ದಿನೇಶ್‌ ಸಂಗಡಿಗರು ವಚನ ಗಾಯನ ಮಾಡುವರು.

3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಮ್ಮೇಳನಾಧ್ಯಕ್ಷ ಶಿವಾನಂದ ಗುರೂಜಿ, ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ ಅಧ್ಯಕ್ಷತೆ ವಹಿಸುವರು. ಬಸವರಾಜ ಸಾದರ ಸಮಾರೋಪ ಭಾಷಣ ಮಾಡುವರು. ಗೊ.ರು. ಚನ್ನಬಸಪ್ಪ ಉಪಸ್ಥಿತರಿರುವರು.

ಸುದ್ದಿಗೋಷ್ಠಿಯಲ್ಲಿ ಎಂ.ಎಚ್‌. ಗೌಡ್ರು, ಕಲ್ಲಪ್ಪ, ತಿಪ್ಪಣ್ಣ, ಶಿವಲಿಂಗಮೂರ್ತಿ, ಪಂಕಜಾ ದಯಾನಂದ್, ವಿಶ್ವನಾಥ ಬಂಗಾಳೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT