ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯತ್ನಾಳ್ ಕಾಮಿಡಿ ಮುತ್ಯಾ: ವಚನಾನಂದ ಶ್ರೀ

Published 6 ಮೇ 2024, 16:22 IST
Last Updated 6 ಮೇ 2024, 16:22 IST
ಅಕ್ಷರ ಗಾತ್ರ

ಹರಿಹರ: ‘ಯತ್ನಾಳ್ ಈಗಾಗಲೇ ಸಿಎಂ ಅಂದರೆ ಕಾಮಿಡಿ ಮುತ್ಯಾ ಆಗಿದ್ದಾರೆ, ಮುಂದೆ ದೇವರು ಇವರನ್ನು ಎಚ್‌ಎಂ ಅಂದರೆ ಹುಚ್ಚ ಮುತ್ಯಾ ಹಾಗೂ ಪಿಎಂ ಅಂದರೆ ಪಾಗಲ್ ಮುತ್ಯಾ ಕೂಡ ಮಾಡಲಿ’ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀ ವ್ಯಂಗ್ಯವಾಡಿದರು. 

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ರವರು ಮಾಡಿದ ಟೀಕೆ ಬಗ್ಗೆ ಸೋಮವಾರ ಮಾಧ್ಯಮದವರಿಗೆ  ಅವರು ಪ್ರತಿಕ್ರಿಯಿಸಿದರು. 

ಒಬಿಸಿ ಮೀಸಲಾತಿ ಬೇಕು:

‘ವೀರಶೈವ ಸಮುದಾಯ ಕೆಲವು ಉಪಪಂಗಡಗಳಿಗೆ ಕೇಂದ್ರದ ಇತರೆ ಹಿಂದುಳಿದ ಸಮುದಾಯ (ಒಬಿಸಿ) ಮೀಸಲಾತಿ ಸಿಕ್ಕಿದೆ. ಆದರೆ, ಉಳಿದ ಪಂಗಡಗಳಿಗೆ ಆ ಮೀಸಲಾತಿ ಇನ್ನೂ ಸಿಕ್ಕಿಲ್ಲ, ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಮೀಸಲಾತಿ ಬೇಕಾಗಿದೆ’ ಎಂದರು. 

‘ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ಅವರು ಸಮುದಾಯಕ್ಕೆ ಸಾಮಾಜಿಕ ಮತ್ತು ರಾಜಕೀಯ ನ್ಯಾಯ ಕಲ್ಪಿಸುವ ಬಗ್ಗೆ ನಂಬಿಕೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT