ಹರಿಹರ: ಕೋಟ್ಯಂತರ ದೇಶವಾಸಿಗಳ ನರನಾಡಿಗಳಲ್ಲಿ ದೇಶಭಕ್ತಿಯ ಸಂಚಾರ ಮೂಡಿಸಿದ ಶ್ರೇಯಸ್ಸು ವಂದೇ ಮಾತರಂ ಗೀತೆಗೆ ಸಲ್ಲುತ್ತದೆ ಎಂದು ಯುವ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ಸನಾತನ ಸಿಂಧು ಸಂಸ್ಥೆಯಿಂದ ವಂದೇ ಮಾತರಂ ಗೀತೆಯ 150ನೇ ವರ್ಷದ ಸಂಭ್ರಮಾಚರಣೆ ನಿಮಿತ್ತ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ವಿವಿಧ ಜಾತಿ, ಜನಾಂಗ, ವರ್ಣ, ಪ್ರಾಂತ್ಯದ ಹಂಗು ತೊರೆದು ಬ್ರಿಟೀಷರ ವಿರುದ್ಧ ತೊಡೆ ತಟ್ಟಲು ವಂದೇ ಮಾತರಂ ಗೀತೆ ಪ್ರೇರಣೆ ನೀಡಿದೆ. ಈಗಲೂ ವಂದೇ ಮಾತರಂ ಗೀತೆ ಭಾರತೀಯರ ಉಸಿರಾಗಿದೆ. ಒಗ್ಗಟ್ಟು, ಗೌರವ, ಪ್ರೀತಿಯಂತಹ ಅಂಶಗಳಿದ್ದಾಗ ದೇಶವು ಬಲಿಷ್ಠವಾಗಿರಲು ಸಾಧ್ಯ ಎಂದರು.

ಭಾರತವು ಶ್ರೇಷ್ಠ ಸಂಸ್ಕೃತಿ, ಪರಂಪರೆ ಹೊಂದಿರುವ ದೇಶ. ಕೋಟ್ಯಂತರ ಜನರ ತ್ಯಾಗ ಬಲಿದಾನದಿಂದ ರೂಪಿತವಾಗಿರುವ ಈ ದೇಶದ ಸಂರಕ್ಷಣೆಗೆ ಪ್ರತಿಯೊಬ್ಬರೂ ಪಣ ತೊಡಬೇಕು ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.

150 ಗಾಯಕರು ವಂದೇ ಮಾತರಂ ಗೀತೆಯನ್ನು ಹಾಡಿ ಜನ–ಮನ ಸೆಳೆದರು.

ಸನಾತನ ಸಿಂಧು ಸಂಸ್ಥೆಯ ಅಧ್ಯಕ್ಷ ಆರ್.ಆರ್.ಖಮಿತ್ಕರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಕಾರ್ಯದರ್ಶಿ ವೀರೇಶ್ ಯಾದವಾಡ, ಬಿಜೆಪಿ ಮುಖಂಡರಾದ ಗಾಯತ್ರಿ ಸಿದ್ದೇಶ್ವರ, ಎ.ಎಚ್. ಶಿವಯೋಗಿಸ್ವಾಮಿ, ಎಸ್.ಎಂ. ವೀರೇಶ್ ಹನಗವಾಡಿ, ಹೊನ್ನಾಳಿ ಬಾಬಣ್ಣ, ಶಿವಪ್ರಕಾಶ ಶಾಸ್ತ್ರೀ, ಡಿ.ಜಿ. ಶಿವಾನಂದಪ್ಪ, ಚಂದ್ರಶೇಖರ ಪೂಜಾರ್, ವಕೀಲ ವಿರೇಶ ಅಜ್ಜಣ್ಣನವರ, ಪ್ರಕಾಶ ಕೋಳೂರು, ಆರ್.ಆರ್. ಕಾಂತರಾಜ, ಶ್ರೀಧರ್ ಶ್ರೇಷ್ಟಿ, ಜಿ.ಕೆ. ಮಲ್ಲಿಕಾರ್ಜುನ್, ಸುಮನ್ ಖಮಿತ್ಕರ್, ನಾಗಮಣಿ ಶಾಸ್ತ್ರಿ, ಪ್ರಮೀಳಾ ನಲ್ಲೂರು, ಸಾಕ್ಷಿ ಶಿಂಧೆ, ರೂಪಾ ಕಾಟ್ವೆ ಇದ್ದರು.