ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಷ್ಕರಣಿಗೆ ದಾಖಲೆ ಪ್ರಮಾಣದ ನೀರು

Last Updated 8 ಸೆಪ್ಟೆಂಬರ್ 2022, 5:19 IST
ಅಕ್ಷರ ಗಾತ್ರ

ಸಂತೇಬೆನ್ನೂರು: ಅರ್ಧ ಶತಮಾನಕ್ಕಿಂತ ದೀರ್ಘಾವಧಿಯಲ್ಲಿ ಐತಿಹಾಸಿಕ ಪುಷ್ಕರಣಿಗೆ ದಾಖಲೆ ಪ್ರಮಾಣದ ನೀರು ಹರಿದು ಬಂದಿದೆ. ವಿಶಾಲ ಹರಿವಿನ ತಿಳಿ ಜಲರಾಶಿಯ ವಿಹಂಗಮ ನೋಟ ಪ್ರವಾಸಿಗರನ್ನು
ಆಕರ್ಷಿಸುತ್ತಿದೆ.

ದಕ್ಷಿಣ ದಿಕ್ಕಿನ ವಿಶಾಲ ಪ್ರವೇಶ ದ್ವಾರದ ಶಿಲಾ ಹಾಸಿನ ಮೇಲ್ಭಾಗಕ್ಕೆ ನೀರಿನ ಮಟ್ಟ ತಲುಪಿದೆ. ಪ್ರವೇಶ ದ್ವಾರದ ಬಳಿಯೇ ಸಂಗಮವಾಗಿರುವ ಉತ್ತರ, ದಕ್ಷಿಣ ಪ್ರವೇಶ ದ್ವಾರಗಳಲ್ಲಿ ನೀರು ನಿಂತಿರುವುದು ಗ್ರಾಮದ ಹಿರಿಯರಿಗೆ ಅಚ್ಚರಿ ಉಂಟು ಮಾಡಿದೆ. ಇಲ್ಲಿಯವರೆಗೆ ನೀರಿನ ಮಟ್ಟ ತಲುಪಿರುವುದನ್ನು ಕಳೆದ ಅರ್ಧ ಶತಮಾನದಲ್ಲಿ ನೋಡಿಲ್ಲ ಎನ್ನುತ್ತಾರೆ ಕೆ. ಮೂರ್ತಿ.

ಪ್ರವೇಶ ದ್ವಾರದಿಂದ 52 ಮೆಟ್ಟಿಲು ಆಳ ಇದೆ. ನೀರಿನ ನಡುವಿರುವ ಕಲಾತ್ಮಕ ವಸಂತ ಮಂಟಪದ ಮೂರು ಅಂತಸ್ತು ಮುಳುಗಿವೆ. ಉಯ್ಯಾಲೆ ಮಂಟಪ, ಗೋಪುರ ಮಂಟಪಗಳು ಮಾತ್ರ ಗೋಚರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT