ಶುಕ್ರವಾರ, ಅಕ್ಟೋಬರ್ 18, 2019
23 °C
‘ಬಿಜೆಪಿ ಅಧಿಕಾರದಲ್ಲಿ ಮುಂದುವರಿಯಲು ಹೆಚ್ಚಿನ ಸ್ಥಾನ ಗೆಲ್ಲಲೇಬೇಕು’

ಚುನಾವಣೆ ಗೆಲ್ಲಲು ತಂತ್ರ–ಕುತಂತ್ರ ಎರಡೂ ಮಾಡ್ತೇವೆ: ಎಸ್‌.ಎ.ರವೀಂದ್ರನಾಥ್ ಹೇಳಿಕೆ

Published:
Updated:
Prajavani

ದಾವಣಗೆರೆ: ಉಪಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ತಂತ್ರ–ಕುತಂತ್ರಗಳೆರಡನ್ನೂ ಮಾಡುತ್ತದೆ ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್ ಹೇಳಿದರು.

ಸೋಮವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ‘ಬಿಜೆಪಿ ಅಧಿಕಾರದಲ್ಲಿ ಮುಂದುವರೆಯಬೇಕಾದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ಗೆಲುವು ಸಾಧಿಸಲು ಬೇಕಾದಂತಹ ಕುತಂತ್ರ ಹಾಗೂ ತಂತ್ರಗಳನ್ನು ಮಾಡಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ’ ಎಂದರು.

ಅನರ್ಹ ಶಾಸಕರ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿದೆ. ತೀರ್ಪನ್ನು ನೋಡಿ ಟಿಕೆಟ್ ಘೋಷಣೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ಎಲ್ಲವನ್ನು ಪಕ್ಷದ ವರಿಷ್ಠರು ಮಾಡುತ್ತಾರೆ. ಚುನಾವಣೆ ಪ್ರಚಾರಕ್ಕೆ ಕರೆದರೆ ಹೋಗುವುದಷ್ಟೇ ನನ್ನ ಕೆಲಸ’ ಎಂದರು.

‘ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹ ಶಾಸಕರ ಅರ್ಜಿಗಳು ಇವೆ. ಅವರ ಬಗ್ಗೆ ಏನಾದರೂ ಹೇಳಿ ಅಪರಾಧಿಯಾಗುವುದಿಲ್ಲ. ಕೋರ್ಟ್ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು’ ಎಂದು ಹೇಳಿದರು.

Post Comments (+)