ತ್ಯಾವಣಿಗೆ: ಸಮೀಪದ ಕಾರಿಗನೂರು ಗ್ರಾಮದಲ್ಲಿ ದಂಪತಿ ಸಾವಿನಲ್ಲೂ ಒಂದಾಗಿ ಪ್ರೀತಿ ಮೆರೆದಿದ್ದಾರೆ.
ಗ್ರಾಮದ ಭೀಮಾನಾಯ್ಕ (65) ಐದು ವರ್ಷಗಳಿಂದ ಪಾಶ್ವುವಾಯು ರೋಗದಿಂದ ಬಳಲುತ್ತಿದ್ದರು. ಸೋಮವಾರ ಸಂಜೆ 4ಕ್ಕೆ ಮೃತಪಟ್ಟಿದ್ದರು. ಆ ಆಘಾತದಿಂದ ಅವರ ಪತ್ನಿ ಪಾರ್ವತಿ ಬಾಯಿಯೂ ರಾತ್ರಿ 7ಕ್ಕೆ ನಿಧನರಾದರು.
ಪಾರ್ವತಿ ಭಾಯಿ 15 ದಿನಗಳ ಹಿಂದೆ ಕಾಲು ಜಾರಿ ಬಿದ್ದಿದ್ದು, ನೋವಿನಿಂದ ಬಳಲುತ್ತಿದ್ದರು. ಇಬ್ಬರ ಪಾರ್ಥಿವ ಶರೀರವನ್ನು ದರ್ಶನಕ್ಕೆ ಇಟ್ಟು, ಮಂಗಳವಾರ ಮಧ್ಯಾಹ್ನ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.