ಬುಧವಾರ, ಜನವರಿ 22, 2020
21 °C

ಮೊಬೈಲ್‌ ವಿಷಯಕ್ಕೆ ಜಗಳ: ಮಹಿಳೆ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಕುಲಸಚಿವ ರಂಗಸ್ವಾಮಿ ಅವರ ಪತ್ನಿ ಲತಾ (48) ಅವರು ಮೊಬೈಲ್‌ ಬಳಕೆ ವಿಚಾರಕ್ಕೆ ನಗರದ ಚಿಕ್ಕಮಣ್ಣಿ ದೇವರಾಜ್‌ ಅರಸು ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲಿ ಶುಕ್ರವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಲತಾ ಅವರು ಮೊಬೈಲ್‌ ಅನ್ನು ಹೆಚ್ಚು ಬಳಸುತ್ತಿದ್ದರು. ಇದೇ ವಿಷಯಕ್ಕೆ ಪತಿ ಜೊತೆ ಜಗಳವಾಡಿದ್ದರು. ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಮನನೊಂದು ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಟಿಜೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಪ್ರತಿಕ್ರಿಯಿಸಿ (+)