ಮಲೇಬೆನ್ನೂರು: ಪ್ರಸಕ್ತ ಅವಸರ, ಒತ್ತಡ ಹಾಗೂ ದುಬಾರಿ ದಿನ ಸಾಮಾಜಿಕ ಕಳಕಳಿ ಇರುವ ಹಲವಾರು ಸಂಘಟನೆಗಳು ಸಾಮೂಹಿಕ ವಿವಾಹಗಳಂತಹ ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿನ ನಂದಿಗುಡಿ ರಸ್ತೆ ಆಂಜನೇಯ ದೇವಾಲಯ ಸಮಿತಿ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹದ ಧರ್ಮಸಭೆಯಲ್ಲಿ ಬುಧವಾರ ಅವರು ಆಶೀರ್ವಚನ ನೀಡಿದರು.

ಬಾಲ್ಯಾವಸ್ಥೆಯಲ್ಲಿ ಶಿಕ್ಷಣ ಪಡೆಯುವುದು, ಯೌವನಾವಸ್ಥೆ ತಲುಪಿದ ವರ ದುಶ್ಚಟಗಳ ದಾಸನಾಗುವುದನ್ನು ತಪ್ಪಿಸಿ ಸರಿದಾರಿಗೆ ತರಲು ಹಿಂದಿನ ಕಾಲದಲ್ಲಿ ಮದುವೆ ಮಾಡುತ್ತ್ದ್ದಿದರು.ಸಮಸ್ಯೆ ಸುಳಿಯಲ್ಲಿ ಸಿಲುಕದಂತೆ ಸತ್ಪ್ರಜೆಗಳನ್ನಾಗಿಸುವುತ್ತ ಹಿರಿಯರ ಸಲಹೆ ಸೂಚನೆ ಮಾರ್ಗದರ್ಶನ ಪಡೆದು ಉತ್ತಮ ಜೀವನ ನಡೆಸುವಂತೆ ಕೋರಿದರು.

ಸಾಮೂಹಿಕ ವಿವಾಹ ಬಡ, ಹಾಗೂ ಕೆಳವರ್ಗದ ಜನತೆಗೆ ವರದಾವಾಗಿದೆ. ಶೋಷಿತ ವರ್ಗದ ಪರವಾಗಿ ಶ್ರಮಿಸಿದ ಬಸವಣ್ಣನ ಜನ್ಮದಿನದಂದು ಹಮ್ಮಿಕೊಂಡಿರುವುದು ಉತ್ತಮ ಸಂಪ್ರದಾಯ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದರು ಹರ್ಷ ವ್ಯಕ್ತಪಡಿಸಿದರು.

ಮಹಾತ್ಮರ ನೆನಪಿಗೆ ಜನ್ಮದಿನ, ಜಯಂತಿ, ಆರಾಧನೆ ಮಾಡಿ ಆಚರಿಸಿದರೆ, ರಾಜಕಾರಣಿಗಳಿಗೆ ಪುಣ್ಯಸ್ಮರಣೆ ಎನ್ನುವ ಅರ್ಥ ಬಿಡಿಸಿ ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದರು.

ನವ ವಿವಾಹಿತರು ಕುಟುಂಬ ಯೋಜನೆ ಅಳವಡಿಸಿಕೊಂಡು 2 ಮಕ್ಕಳನ್ನು ಪಡೆದು ಶಿಕ್ಷಣ ನೀಡುವ ಕುರಿತು ಯೋಜನೆ ರೂಪಿಸಿ ಮಾದರಿ ಜೀವನ ನಡೆಸಿ. ಸಾಮೂಹಿಕ ವಿವಾಹ ಹಮ್ಮಿಕೊಂಡ ದೇವಾಲಯ ಸಮಿತಿ ಕಾರ್ಯ ಸ್ಮರಣಾರ್ಹ ಎಂದು ಶಾಸಕ ಬಿ.ಪಿ. ಹರೀಶ್ ಸಂತಸ ವ್ಯಕ್ತಪಡಿಸಿದರು.

ಪ್ರಸಕ್ತ ದುಬಾರಿ ದಿನ ಹಣವಂತರಿಗೆ ವಿವಾಹ ಪ್ರತಿಷ್ಠೆ ಪ್ರಶ್ನೆಯಾಗಿದ್ದರೆ ಬಡವರು ಹಾಗೂ ಮಧ್ಯಮ ವರ್ಗಕ್ಕೆ ಸಮಸ್ಯೆಯಾಗಿದೆ. ಸರಳ ವಿವಾಹ ಹಮ್ಮಿಕೊಂಡು ಒಂದೇ ವೇದಿಕೆಯಲ್ಲಿ ಹತ್ತಾರು ವಿವಾಹ ಮಾಡುವುದರಿಂದ ದುಂದವೆಚ್ಚಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ತಿಳಿಸಿದರು.

ಜಿ.ಪಂ. ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಮಾಗಾನಹಳ್ಳಿ ಹಾಲಪ್ಪ, ಎಚ್.ಜಿ. ಗುರುಸಿದ್ದಪ್ಪ ಇತರರು ಮಾತನಾಡಿದರು.

ಗ್ರಾಮದ ಮುಖಂಡರಾದ ಕೆ.ಪಿ. ಸಿದ್ದಬಸಪ್ಪ, ವಾಗೀಶ್ಸ್ವಾಮಿ, ಬಿ. ಚಿದಾನಂದಪ್ಪ, ನಿಟ್ಟೂರು ಹೊನ್ನಪ್ಪ, ಕೆ. ಪರಶುರಾಮಪ್ಪ, ಮೊಹ್ಮದ್ ರೋಷನ್, ಫೈಜು, ಪಿ.ಎಸ್. ಹನುಮಂತಪ್ಪ, ಬಿ. ವೀರಯ್ಯ, ಓಬಳಪ್ಪ ಇತರರು ಉಪಸ್ಥಿತರಿದ್ದರು.

ದೇವಾಲಯ ಸಮಿತಿ ಅನ್ನಸಂತರ್ಪಣೆ ಏರ್ಪಡಿಸಿತ್ತು. ದಾನಿಗಳು ಮಜ್ಜಿಗೆ ವಿತರಿಸಿದರು. ದೇವಾಲಯ ನಿರ್ಮಾಣಕ್ಕೆ ಧನಸಹಾಯ ಮಾಡಿದ ದಾನಿಗಳನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. 34 ಜೋಡಿಗಳು ದಾಂಪತ್ಯ ಸ್ವೀಕರಿಸಿದರು.ದಂಡೀ ತಿಪ್ಪೇಸ್ವಾಮಿ ಸ್ವಾಗತಿಸಿದರು, ಹನುಮಂತಪ್ಪ ನಿರೂಪಿಸಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.