ದಾವಣಗೆರೆ: ಆರ್ಥಿಕ ನೆರವು ನೀಡಿ ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸಬೇಕು ಎಂದು ಸಂಸತ್ ಸದಸ್ಯ ಜಿ.ಎಂ.ಸಿದ್ದೇಶ್ವರ ಬ್ಯಾಂಕ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ `ಮಾರ್ಗದರ್ಶಿ ಬ್ಯಾಂಕ್' ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ವಿವಿಧ ಯೋಜನೆಗಳ ಮಾಹಿತಿ ಪಡೆದು ಅವರು ಮಾತನಾಡಿದರು.

ಜಿಲ್ಲೆಯಲ್ಲಿ ದೊಡ್ಡ ಕೈಗಾರಿಕೆಗಳು ಬರುತ್ತಿಲ್ಲ. ಹೀಗಿರುವಾಗ ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡದಿದ್ದರೆ ಹೇಗೆ? ಸಣ್ಣ ಕೈಗಾರಿಕೆ ಕ್ಷೇತ್ರ ಬೆಳೆದರೆ ನಿರುದ್ಯೋಗ ಸಮಸ್ಯೆ ಪರಿಹರಿಸಬಹುದು. ಇದಕ್ಕೆ ಬ್ಯಾಂಕ್ ಅಧಿಕಾರಿಗಳು ಮನಸ್ಸು ಮಾಡಬೇಕು ಎಂದರು.

2002-13ನೇ ಸಾಲಿನಲ್ಲಿ ಸಣ್ಣ ಕೈಗಾರಿಕೆ ವಲಯಕ್ಕೆರೂ49.28 ಕೋಟಿ ಸಾಲದ ಗುರಿ ನಿಗದಿಯಾಗಿತ್ತು. ಇದರಲ್ಲಿರೂ22.55 ಕೋಟಿ ಸಾಲ ನೀಡಲಾಗಿದ್ದು, ಶೇ 45.75ರಷ್ಟು ಸಾಧನೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದರಿಂದ ಅಸಮಾಧಾನಗೊಂಡ ಸಿದ್ದೇಶ್ವರ, ಸಣ್ಣ ಕೈಗಾರಿಕೆಗಳಿಗೆ ಜಾಮೀನು ಪಡೆಯದೇ ಆರ್ಥಿಕ ನೆರವು ನೀಡಬೇಕು ಎಂದು ಸರ್ಕಾರ ಹೇಳಿದೆ.

ಆದರೂ, ನಿರ್ಲಕ್ಷ್ಯ ತೋರುವುದು ಸರಿಯಲ್ಲ. ನಿಗದಿಗಿಂತ ಕಡಿಮೆ ಸಾಧನೆ ಮಾಡಿರುವ ಬ್ಯಾಂಕ್ಗಳವರು, ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಅರ್ಜಿ ಆಹ್ವಾನಿಸಬೇಕು. ಹಾಗೆಂದು, ಎಲ್ಲರಿಗೂ ಸಾಲ ನೀಡಬೇಕು ಎಂದಲ್ಲ. ಸಾಲ ಪಡೆದವರು ಉದ್ಯಮ ನಡೆಸುತ್ತಿದ್ದಾರೆಯೇ? ಇಲ್ಲವೇ? ಎಂಬುದನ್ನು ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಈ ಸಾಲಿನಲ್ಲಿ ಸಣ್ಣ ಕೈಗಾರಿಕೆಗಳಿಗೆ ಎಸ್ಬಿಐಗೆ ರೂ 12.50 ಕೋಟಿ ಗುರಿ ನಿಗದಿಯಾಗಿತ್ತು. ಆದರೆ, ಕೊಟ್ಟಿದ್ದು ಕೇವಲ ರೂ 2.5 ಕೋಟಿ. ಬ್ಯಾಂಕ್ ಆಫ್ ಬರೋಡಕ್ಕೆ ನೀಡಿದ ರೂ 44 ಲಕ್ಷ ಗುರಿಯಲ್ಲಿ ಕೊಟ್ಟಿದ್ದು ಕೇವಲ ರೂ 25 ಸಾವಿರ ಎಂಬ ಮಾಹಿತಿ ನೀಡಲಾಯಿತು. ಇದು ಸಂಸತ್ ಸದಸ್ಯರ ಅತೃಪ್ತಿಗೆ ಕಾರಣವಾಯಿತು. ಮುಂದಿನ ಸಭೆಯ ವೇಳೆಗೆ ಸಂಪೂರ್ಣ ಗುರಿ ತಲುಪಬೇಕು ಎಂದು ಸೂಚಿಸಿದರು.

ಮಾಹಿತಿ ನೀಡದ ಇಲಾಖೆಗಳು
ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಮಲ್ಲಿಕಾರ್ಜುನ ಮಾತನಾಡಿ, ನೇರ ನಗದು ವರ್ಗಾವಣೆ (ಡಿಸಿಟಿ) ಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಉಳಿತಾಯ ಖಾತೆಗೆ ಆಧಾರ್ ಕಾರ್ಡ್ನ ಜೋಡಣೆ, ಸರ್ಕಾರದ ಸಂಸ್ಥೆಗಳಿಂದ ಪ್ರಾಯೋಜಿತ ಕೇಂದ್ರೀಯ ಯೋಜನೆಗಳ ಫಲಾನುಭವಿಗಳನ್ನು ಸಂಗ್ರಹಿಸಲು ಕ್ರಮ ವಹಿಸಲಾಗಿದೆ. ಕುಟುಂಬಕ್ಕೊಂದು ಖಾತೆ ತೆರೆಯಲು ಉದ್ದೇಶಿಸಲಾಗಿದೆ.

26 ಯೋಜನೆಗಳಿಗೆ ಸಂಬಂಧಿಸಿದಂತೆ ನೇರ ನಗದು ವರ್ಗಾವಣೆ ಮಾಡಲಾಗುವುದು. ಇದಕ್ಕಾಗಿ ವಿವಿಧ ಇಲಾಖೆಗಳಿಗೆ ಮಾಹಿತಿ ಕೋರಿ ಪತ್ರ ಬರೆಯಲಾಗಿದೆ. ಸಮಾಜ ಕಲ್ಯಾಣ ಇಲಾಖೆ ಬಿಟ್ಟರೆ ಇತರ ಇಲಾಖೆಗಳು ಮಾಹಿತಿ ನೀಡಿಲ್ಲ ಎಂದು ತಿಳಿಸಿದರು.
ಎಷ್ಟು ಮಂದಿ ಫಲಾನುಭವಿಗಳ್ದ್ದಿದಾರೆ ಎಂಬುದನ್ನು ತಿಳಿಸಬೇಕು. ಅಂತೆಯೇ, ಫಲಾನುಭವಿಗಳು `ಆಧಾರ್' ಕಾರ್ಡ್ ಹೊಂದುವುದು ಕಡ್ಡಾಯ. ಈ ನಿಟ್ಟಿನಲ್ಲಿ ವಿಳಂಬ ಆಗದಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ಬಿ.ಹೇಮಚಂದ್ರ ಮಾತನಾಡಿ, ಜಿಲ್ಲೆಯಲ್ಲಿರೂ2.90 ಲಕ್ಷ ಉದ್ಯೋಗ ಖಾತರಿ ಫಲಾನುಭವಿಗಳಿದ್ದಾರೆ. ಅವರಿಗೆ ರೂ 16 ಕೋಟಿ ಹಣವನ್ನು ನೇರವಾಗಿ ಅವರವರ ಖಾತೆಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳು ಹೆಚ್ಚಿನ ವಿಳಂಬ ಮಾಡದೇ ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ವಿದ್ಯಾರ್ಥಿಗಳನ್ನು ಅಲೆದಾಡಿಸಬಾರದು
ಸಿದ್ದೇಶ್ವರ ಮಾತನಾಡಿ, ಜಿಲ್ಲೆಯಲ್ಲಿ ಎಷ್ಟು ಶಾಲಾ- ಕಾಲೇಜು ವಿದ್ಯಾರ್ಥಿಗಳು ಇದ್ದಾರೆ ರೂ 2 ಲಕ್ಷ ವಯೋಮಾನದ ಒಳಗೆ ಯಾರ್ಯಾರು ಬರುತ್ತಾರೆ ಎಂಬುದರ ಪಟ್ಟಿಯನ್ನು ಮುಂದಿನ ತಿಂಗಳು ನೀಡಬೇಕು. ಫಲಾನುಭವಿಗಳಿಗೆ ವಿದ್ಯಾರ್ಥಿ ವೇತನವನ್ನು ಸರ್ಕಾರ ನೀಡಿದ ಕೂಡಲೇ ವರ್ಗಾಯಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು; ಅಲೆದಾಡಿಸಬಾರದು. ವಿದ್ಯಾಭ್ಯಾಸ ಮುಂದುವರಿಸಲು ನೆರವಾಗಬೇಕು ಎಂದು ತಿಳಿಸಿದರು.

ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಗಸೂಚಿ ಪ್ರಕಾರ ನೇಮಕ ಮಾಡಲಾಗಿದೆ. ಅವರಿಗೆ ರೂ 2,500 ವೇತನ ನಿಗದಿಪಡಿಸಲಾಗಿದೆ. ಇತರ ಕೆಲಸಗಳಿಂದ ಒಟ್ಟು ರೂ 5 ಸಾವಿರದವರೆಗೆ ಹಣ ದೊರೆಯುತ್ತದೆ. ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಮಲ್ಲಿಕಾರ್ಜುನಪ್ಪ ನೀಡಿದ ಮಾಹಿತಿಗೆ ಪ್ರತಿಕ್ರಿಯಿಸಿದ ಸಂಸದರು, ಕೇವಲ ರೂ 5 ಸಾವಿರದಲ್ಲಿ ಜೀವನ ಮಾಡಲಾದೀತೇ? ಅದರಲ್ಲಿಯೂ ಅವರನ್ನು ಟೆಂಡರ್ ಪಡೆದ ಕಂಪೆನಿ ನೇಮಿಸಿಕೊಳ್ಳುತ್ತದೆ. ಈ ಯೋಜನೆಯೇ ಸರಿ ಇಲ್ಲ.ರೂ 8ರಿಂದರೂ10 ಸಾವಿರ ವೇತನ ಸಿಗಬೇಕು. ವೇತನ ಹೆಚ್ಚಿಸುವಂತೆ ಸಂಬಂಧಿಸಿದವರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಆರ್ಬಿಐ ಅಧಿಕಾರಿ ಶ್ಯಾಮಲಾ ದೇವಿ ಮಾತನಾಡಿ, ಸಣ್ಣ ಕೈಗಾರಿಕೆ ಸ್ಥಾಪಿಸಲು ಸಾಲ ಪಡೆಯುವ ನಿಟ್ಟಿನಲ್ಲಿ ಇರುವ ತೊಂದರೆಗಳನ್ನು ನಿವಾರಿಸಲು ಶೀಘ್ರವೇ ಪ್ರತಿ ಜಿಲ್ಲೆಯಲ್ಲಿಯೂ ಸಭೆ (ಟೌನ್ಹಾಲ್ ಮೀಟಿಂಗ್) ನಡೆಸಲು ಉದ್ದೇಶಿಸಲಾಗಿದೆ. ನಿಯೋಜಿತ ಬ್ಯಾಂಕ್ಗಳು ಕೂಡಲೇ ಆರ್ಥಿಕ ಸಮಾಲೋಚನಾ ಕೇಂದ್ರ ತೆರೆಯಲು ಕ್ರಮ ವಹಿಸಬೇಕು ಎಂದು ತಿಳಿಸಿದರು.

`ಕೈಗಾರಿಕೆ ಆರಂಭಕ್ಕೆ ಹಣಕಾಸಿನ ತೊಂದರೆ'
ದಾವಣಗೆರೆ: ನಗರದಲ್ಲಿ ಸ್ಥಾಪಿಸಲಾಗಿರುವ `ಜವಳಿ ಉದ್ಯಾನ'ದಲ್ಲಿ ಉದ್ಯಮ ಆರಂಭಿಸಲು ಬರುವವರಿಗೆ ಆರ್ಥಿಕ ತೊಡಕು ಉಂಟಾಗಿದೆ. ಬ್ಯಾಂಕ್ಗಳ ಅಸಹಕಾರಿಂದ ಎಷ್ಟೋ ಮಂದಿ ಉದ್ಯಮ ಸ್ಥಾಪಿಸಲು ಸಾಧ್ಯವಾಗಿಲ್ಲ.

- ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸಂಸತ್ ಸದಸ್ಯ ಜಿ.ಎಂ.ಸಿದ್ದೇಶ್ವರ ಸಮ್ಮುಖದಲ್ಲಿ ಸೋಮವಾರ ನಡೆದ ಮಾರ್ಗದರ್ಶಿ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಅಂಶ ವ್ಯಕ್ತವಾಯಿತು.

ಕೈಗಾರಿಕಾ ಇಲಾಖೆ ನಿರ್ದೇಶಕ ಬಿ.ಎನ್.ಗದಗ್ ಹಾಗೂ ಸುರೇಶ್ ಮಾತನಾಡಿ, ಜವಳಿ ಉದ್ಯಾನದಲ್ಲಿ ಕೈಗಾರಿಕೆ ಆರಂಭಿಸಲು 78 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ 58 ಮಂದಿ ಮಾತ್ರ ಉದ್ಯಮ ಆರಂಭಕ್ಕೆ ಮುಂದೆ ಬಂದಿದ್ದಾರೆ. ಇದರಲ್ಲಿ ಕೆಲವು ಕಟ್ಟಡ ಪೂರ್ಣಗೊಳ್ಳುವ ಹಂತದಲ್ಲಿವೆ. ಉಳಿದವರು, ಉದ್ಯಮ ಸ್ಥಾಪಿಸಲು ಸಾಧ್ಯವಾಗಿಲ್ಲ. ಹಣಕಾಸಿನ ತೊಂದರೆ ಎದುರಾಗಿರುವುದು ಇದಕ್ಕೆ ಕಾರಣ ಎಂದು ಸಭೆಯ ಗಮನಕ್ಕೆ ತಂದರು. ಉದ್ಯಮ ಆರಂಭಿಸಲು 2 ವರ್ಷಗಳವರೆಗೆ ಕಾಲಾವಕಾಶವಿದೆ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದೇಶ್ವರ, `ಬ್ಯಾಂಕ್ಗಳು ಹಣಕಾಸಿನ ನೆರವು ನೀಡುತ್ತಿಲ್ಲವೇಕೆ? ಇದಾಗಬಾರದು. ಉದ್ಯಮ ಸ್ಥಾಪಿಸದೇ ಇರುವವರಿಗೆ ಕೂಡಲೇ ಆರಂಭಿಸುವಂತೆ ನೋಟಿಸ್ ನೀಡಬೇಕು. ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಸಾಲ ನೀಡಲು ತೊಂದರೆ ಉಂಟಾಗಿದ್ದರೆ ಅದನ್ನು ನಿವಾರಿಸಬೇಕು' ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.