ಬುಧವಾರ, ಮಾರ್ಚ್ 3, 2021
22 °C

ಚೆಕ್‌ಪೋಸ್ಟ್‌ಗಳಿಗೆ ಡಿಸಿ, ಎಸ್‌ಪಿ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಮಂಗಳವಾರ ಜಿಲ್ಲೆಯ ಹಲವು ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಿಬ್ಬಂದಿಗೆ ನೀರಿನ ಬಾಟಲ್, ಆಹಾರದ ಪೊಟ್ಟಣ, ಹಣ್ಣುಗಳನ್ನು ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಡಕೆ ಚೀಲೂರು, ಕಾರೆಹಳ್ಳಿ ಚೆಕ್‌ಪೋಸ್ಟ್‌ಗಳಲ್ಲಿ ಹೊರ ಜಿಲ್ಲೆಗಳಿಂದ ಬರುತ್ತಿದ್ದ ಪ್ರಯಾಣಿಕರನ್ನು ಕಟ್ಟುನಿಟ್ಟಾಗಿ ತಪಾಸಣೆ ನೆಡೆಸುವಂತೆ ತಾಕೀತು ಮಾಡಿದರು.

3.60 ಲಕ್ಷ ರು. ಮೌಲ್ಯದ ಮಾಸ್ಕ್‌ ದಾನ

ಉಡುಪಿ ಜಿಲ್ಲೆಯ ಉದ್ಯಮಿ ಡಾ.ಜಿ.ಶಂಕರ್ ಶಿವಮೊಗ್ಗ ಜಿಲ್ಲಾ ಪೊಲೀಸರಿಗೆ 3.60 ಲಕ್ಷ ರು. ಮೌಲ್ಯದ ಫೇಸ್‌ಮಾಸ್ಕ್‌, ಫೇಸ್ಶಿಲ್ಡ್‌ಗಳನ್ನು ಕೊಡುಗೆ ನೀಡಿದರು. ಮಂಗಳವಾರ ಎಸ್‌ಪಿ ಶಾಂತರಾಜು ಕೊಡುಗೆ ಸ್ವೀಕರಿಸಿದರು.

ರಮೇಶ್ ಕೋಟಿಯನ್, ಜಯ ಕೋಟಿಯನ್, ಚಂದ್ರೇಶ್, ಹೆಚ್ಚುವರಿ ಎಸ್‌ಪಿ ಶೇಖರ್ ಇದ್ದರು.

ಮೂರು ಬೈಕ್ ವಶ

ಅಧಿಕೃತ ಪಾಸ್ ಹೊಂದದೆ ಜಿಲ್ಲಾ ಸರಹದ್ದಿನ ಚೆಕ್‌ಪೋಸ್ಟ್ ಮೂಲಕ ಹಾದು ಹೋಗುತ್ತಿದ್ದ ಹಾವೇರಿ ಜಿಲ್ಲೆಗೆ ಸೇರಿದ ಮೂರು ಬೈಕ್‌ಗಳನ್ನು ಮಂಗಳವಾರ ಶಿಕಾರಿಪುರ ಗ್ರಾಮಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಾವೇರಿ ಜಿಲ್ಲೆಯಿಂದ ಗುಳೇದಹಳ್ಳಿ, ಮಾರವಳ್ಳಿ ಗ್ರಾಮದ ಒಳ ರಸ್ತೆಗಳ ಮುಖಾಂತರ ಬರುತ್ತಿದ್ದ 6 ಜನ ಬೈಕ್ ಸವಾರರನ್ನು ವಶಕ್ಕೆ ಪಡೆದಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು