ಶುಕ್ರವಾರ, ಏಪ್ರಿಲ್ 10, 2020
19 °C
ಮಾರ್ಚ್‌ 31 ಕೊನೆಯ ದಿನ

ಅಸಲು ಪಾವತಿಸಿದರೆ ಬಡ್ಡಿ ಮನ್ನಾ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಪ್ರಸಕ್ತ ವರ್ಷ ಜ.31ಕ್ಕೆ ಸುಸ್ತಿಯಾಗಿರುವ ಕೃಷಿ ಸಾಲಗಳ ಬಡ್ಡಿ ಸಂಪೂರ್ಣ ಮನ್ನ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಜಿಲ್ಲೆಯ ರೈತರು ಬಾಕಿ ಅಸಲು ಪಾವತಿಸುವ ಮೂಲಕ ಬಡ್ಡಿ ಮನ್ನಾ ಪ್ರಯೋಜನ ಪಡೆಯಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಕೋರಿದರು.

ಡಿಸಿಸಿ ಹಾಗೂ ಪೀಕಾರ್ಡ್ ಬ್ಯಾಂಕ್‌ನಲ್ಲಿ ಸಾಲ ಪಡೆದು ಸುಸ್ತಿಯಾಗಿರುವ ರೈತರಿಗೆ ಈ ಯೋಜನೆ ಅನ್ವಯಿಸುತ್ತದೆ. ಪಬಡ್ಡಿ ಮನ್ನಾ ಪ್ರಯೋಜನ ಪಡೆಯುವ ರೈತರು ಮಾರ್ಚ್ 31ರ ಒಳಗೆ ಅಸಲು ಪಾವತಿಸಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 165 ಪ್ರಾಥಮಿಕ ಸಹಕಾರ ಸಂಘಗಳಿವೆ. 8 ಡಿಸಿಸಿ ಬ್ಯಾಂಕ್ ಶಾಖೆಗಳಿವೆ. ಸುಮಾರು 728 ಸದಸ್ಯರ ಸಾಲ ಸುಸ್ತಿಯಾಗಿದೆ. ಪೀಕಾರ್ಡ್ ಬ್ಯಾಂಕ್‌ನಲ್ಲಿ 12,500 ಸದಸ್ಯರು ದೀರ್ಘಾವಧಿ ಸಾಲ ಪಡೆದಿದ್ದಾರೆ. ₨ 124 ಕೋಟಿ ಅಸಲು ಇದೆ. ಡಿಸಿಸಿ ಬ್ಯಾಂಕ್‌ನಲ್ಲಿ ಪಡೆದ 6079 ರೈತರ ಸಾಲ 30.15 ಕೋಟಿ ಇದೆ. ಅಸಲಿಗಿಂತ ಬಡ್ಡಿಯೇ ₨ 31.60 ಕೋಟಿ ಯಾಗಿದೆ. ಡಿಸಿಸಿ ಬ್ಯಾಂಕ್‌ನ ಮಧ್ಯಮಾವಧಿ ಸಾಲದ ಪ್ರಯೋಜನ 13,228 ರೈತರಿಗೆ ದೊರಕಲಿದೆ ಎಂದರು.

ಡಿಸಿಸಿ ಬ್ಯಾಂಕ್‌ ಜ.31ರವರೆಗೆ 63,008 ರೈತರಿಗೆ ₨ 330 ಕೋಟಿ ಸಾಲ ನೀಡಿದೆ. ಮಾರ್ಚ್ ಅಂತ್ಯದವರೆಗೆ ಇನ್ನಷ್ಟು ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ವಿವರ ನೀಡಿದರು.

ನಿಯಮದ ಅನ್ವಯ ನೇಮಕ: 

ನಬಾರ್ಡ್ ನಿಯಮದ ಪ್ರಕಾರವೇ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಕ ಮಾಡಲಾಗಿದೆ. ಸಹಕಾರ ಇಲಾಖೆ ಜಿಲ್ಲಾ ಪಂಚಾಯತಿಗೆ ತಪ್ಪು ಮಾಹಿತಿ ನೀಡಿದೆ. ನಿಯಮ ಬಿಟ್ಟು ಸಿಬ್ಬಂದಿ ನೇಮಕ ಮಾಡಿಕೊಂಡಿಲ್ಲ. ಇತರೆ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಚನ್ನವೀರಪ್ಪ, ನಿರ್ದೇಶಕರಾದ ದುಗ್ಗಪ್ಪಗೌಡ, ಸುಧೀರ್, ಬಿ.ಡಿ.ಭೂಕಾಂತ್, ಎಸ್.ಪಿ.ದಿನೇಶ್, ಎಚ್‌.ಎಲ್.ಷಡಾಕ್ಷರಿ, ವ್ಯವಸ್ಥಾಪಕ ನಿರ್ದೇಶಕ ರಾಜಣ್ಣ ರೆಡ್ಡಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು