ಗಾಣಿಗ ಸಮಾಜದ ಅಭಿವೃದ್ಧಿಗೆ ₹1 ಕೋಟಿ: ಶಂಕರಪಾಟೀಲ

ಅಣ್ಣಿಗೇರಿ: ‘ಸಮಾಜದ ಅಭಿವೃದ್ಧಿಗೆ ಗಾಣಿಗ ಸಮುದಾಯದವರ ಕೊಡುಗೆ ಅಪಾರ. ಈ ಸಮಾಜದ ಅಭಿವೃದ್ಧಿಗೆ ₹1 ಕೋಟಿ ಅನುದಾನ ನೀಡಲಾಗುವುದು’ ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.
ಇಲ್ಲಿನ ಆದಿಕವಿ ಪಂಪಸ್ಮಾರಕ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ
ಅಖಿಲ ಭಾರತ ಗಾಣಿಗ ಸಂಘದ ತಾಲ್ಲೂಕು ಘಟಕದ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯ
ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಗಾಣಿಗ ಸಂಘದಿಂದ ತಾಲ್ಲೂಕು ಕೇಂದ್ರದಲ್ಲಿ ಹೆಚ್ಚಿನ ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿ
ಕೊಳ್ಳಬೇಕು. ಇದಕ್ಕಾಗಿ, ವೈಯಕ್ತಿಕವಾಗಿ ನನ್ನ ತಂದೆ-ತಾಯಿ, ಸಹೋದರರ ಸ್ಮರಣಾರ್ಥ ತಲಾ ₹1 ಲಕ್ಷ ನೀಡಲಾಗುವುದು’ ಎಂದರು.
ಮಾಜಿ ಶಾಸಕ ಎನ್.ಎಚ್.ಕೋನ
ರಡ್ಡಿ ಮಾತನಾಡಿ, ‘ಗಾಣಿಗ ಸಮಾಜಕ್ಕೆ
ವೈಯಕ್ತಿಕವಾಗಿ ಒಂದು ಎಕರೆ ಜಮೀನನ್ನು ದಾನವಾಗಿ ನೀಡಲಾಗು
ವುದು’ ಎಂದು ಭರವಸೆ ನೀಡಿದರು.
ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಮಾತನಾಡಿ, ‘ಸಮಾಜದ ಇತರ ಸಮುದಾಯಗಳ ಜನರು ಗಾಣಿಗ ಸಮುದಾಯದ ಮೇಲೆ ಇಟ್ಟಿರುವ ಪ್ರೀತಿ-ವಿಶ್ವಾಸವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ’ ಹೇಳಿದರು.
ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿ ಗಾಣಿಗ ಸಮುದಾಯ ಭವನ ನಿರ್ಮಾ
ಣಕ್ಕೆ ನಾಗರತ್ನ ಅಬ್ಬಿಗೇರಿ ಅವರು ತಮ್ಮ ತಂದೆ-ತಾಯಿ ಸ್ಮರಣಾರ್ಥ ಒಂದು ಎಕರೆ ಭೂಮಿ ದಾನವಾಗಿ ನೀಡಿದರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಿದ್ಧೇಶ್ವರ ಶ್ರೀ, ಜಯದೇವ ಸ್ವಾಮೀಜಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸ್ಥಳೀಯ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ಅಸುಂಡಿಯ ಶಿವಶರಣೆ ನೀಲಮ್ಮ ತಾಯಿ ಸಾನ್ನಿಧ್ಯ ವಹಿಸಿದ್ದರು. ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನಾಗಪ್ಪ ಗಾಣಿಗೇರ ಅಧ್ಯಕ್ಷತೆ ವಹಿಸಿದ್ದರು.
ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಗುರಣ್ಣ ಗೋಡಿ, ಷಣ್ಮುಖ ಗುರಿಕಾರ, ಪ್ರಕಾಶ ಅಂಗಡಿ, ವಿನೋದ ಅಸೂಟಿ, ಅಶೋಕ ಮಜ್ಜಿಗುಡ್ಡ, ಹು-ಧಾ ಮಹಾನಗರ ಪಾಲಿಕೆ ಸದಸ್ಯ ತಿಪ್ಪಣ್ಣ ಮಜ್ಜಗಿ, ಸುಮಿತ್ರಾ ಗುಂಜಾಳ, ಚಂದ್ರಶೇಖರ ಕಾಖಂಡಕಿ, ರಾಯಪ್ಪ ಗಾಣಿಗೇರ, ಬಸವಣ್ಣೆವ್ವ ದಿಡ್ಡಿ, ವಿರುಪಾಕ್ಷಪ್ಪ ಮೇಟಿ, ಮಲಕಾಜಪ್ಪ ಕಪ್ಪತ್ತನವರ, ಜಗದೀಶ ಚವಡಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.