ಹುಬ್ಬಳ್ಳಿ: ನೈರುತ್ಯ ರೈಲ್ವೆಯು 2024–25ನೇ ಹಣಕಾಸು ವರ್ಷದಲ್ಲಿ ನಿರುಪಯುಕ್ತ ವಸ್ತುಗಳನ್ನು ಮಾರಿ, ₹188.07 ಕೋಟಿ ಆದಾಯ ಗಳಿಸಿದೆ. 2022–23ನೇ ಹಣಕಾಸು ವರ್ಷದಲ್ಲಿ ₹180.52 ಕೋಟಿ ಆದಾಯ ಗಳಿಸಿತ್ತು. ಪ್ರಸಕ್ತ ಸಾಲಿನಲ್ಲಿ ಶೇ 4.2ರಷ್ಟು ಹೆಚ್ಚು ಆದಾಯ ಗಳಿಸಿದ್ದು, ಆಸ್ತಿ ನಿರ್ವಹಣೆ ಮತ್ತು ಆದಾಯ ವೃದ್ಧಿಯಲ್ಲಿ ಇದು ಹೊಸ ದಾಖಲೆ ಆಗಿದೆ.

ನಿರುಪಯುಕ್ತ ವಸ್ತುಗಳ ಮಾರಾಟವನ್ನು ಪಾರದರ್ಶಕ ಮತ್ತು ನ್ಯಾಯಸಮ್ಮತ ಆಗಿಸಲು ಭಾರತೀಯ ರೈಲ್ವೆಯ ಆನ್ಲೈನ್ ವೇದಿಕೆ www.ireps.gov.in ಮೂಲಕ ಹರಾಜು ಪ್ರಕ್ರಿಯೆ ನಡೆಸಲಾಯಿತು. ಜನವರಿ 23ರಂದೇ ರೈಲ್ವೆ ಮಂಡಳಿಯ ₹160 ಕೋಟಿ ಗುರಿ ತಲುಪಿದ್ದು, ಆನಂತರವೂ ಹೆಚ್ಚುವರಿ ಆದಾಯ ಗಳಿಸಿದ್ದು ವಿಶೇಷ.

ಮುಖ್ಯ ಸಾಮಗ್ರಿಗಳ ವ್ಯವಸ್ಥಾಪಕ ಮಾಮನ್ ಸಿಂಗ್ ಮಾರ್ಗದರ್ಶನದಂತೆ, ತ್ರೈಮಾಸಿಕ ಆಧಾರದಲ್ಲಿ ಕಾರ್ಯಾಚರಣೆ ನಡೆಯಿತು. 19,745 ಮೆಟ್ರಿಕ್ ಟನ್ ಹಳಿ ಹಾಗೂ ಫಿಟ್ಟಿಂಗ್ಗಳು, ನಾಲ್ಕು ಲೋಕೊಮೋಟಿವ್, 38 ವ್ಯಾಗನ್, 56 ಜಖಂಗೊಂಡ ಬೋಗಿಗಳು, 11,532 ಮೆಟ್ರಿಕ್ ಟನ್ ಕಬ್ಬಿಣ, 1,500 ಮೆಟ್ರಿಕ್ ಟನ್ ಇತರೆ ವಸ್ತುಗಳನ್ನು ಮಾರಾಟ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.