ಮಂಗಳವಾರ, ಸೆಪ್ಟೆಂಬರ್ 21, 2021
29 °C
ಹೊಲದಿಂದ ಮನೆಗೆ ಬರುವಾಗ ಬೆಣ್ಣೆಹಳ್ಳ ಪ್ರವಾಹ ಏರಿಕೆ

ಬೆಣ್ಣೆಹಳ್ಳದ ಪ್ರವಾಹದಲ್ಲಿ ಸಿಲುಕಿದ ಮೂವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವಲಗುಂದ: ತಾಲ್ಲೂಕಿನ ಗುಡಿಸಾಗರ ಗ್ರಾಮದ ಬಳಿ ಸೋಮವಾರ ಹೊಲಕ್ಕೆ ಹೋಗಿದ್ದ ಮೂವರು ಬೆಣ್ಣೆಹಳ್ಳದ ಪ್ರವಾಹದಿಂದಾಗಿ ದಡದಲ್ಲಿಯೇ ಸಿಲುಕಿದ್ದಾರೆ. ಕತ್ತಲು ಆವರಿಸಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಯಿತು.

ಗುಡಿಸಾಗರ ಗ್ರಾಮದ ಶರಣಪ್ಪ ಮೇಟಿ, ಬೀರಪ್ಪ ಪೂಜಾರ ಹಾಗೂ ಗಂಗವ್ವ ಕಡೆಮನಿ ಪ್ರವಾಹದಲ್ಲಿ ಸಿಲುಕಿದ್ದಾರೆ. ಬೆಳಿಗ್ಗೆ ಹೊಲಕ್ಕೆ ಹೋಗಿದ್ದ ಅವರು ಸಂಜೆ ಮನೆಗೆ ಮರಳುವ ವೇಳೆ ಹಳ್ಳದ ಪ್ರವಾಹ ಹೆಚ್ಚಾಗಿದೆ. ಮೂವರನ್ನು ರಕ್ಷಿಸಲು ತಾಲ್ಲೂಕು ಆಡಳಿತ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ದಡದಲ್ಲಿ ಸಿಲುಕಿದವರಿಗೆ ಪೊಲೀಸ್ ಸಿಬ್ಬಂದಿ ಧೈರ್ಯ ತುಂಬಿದರು.

ಅಗ್ನಿಶಾಮಕ ಸಿಬ್ಬಂದಿ ಬಂದಿದ್ದಾರೆ. ಹುಬ್ಬಳ್ಳಿಯಿಂದ ಬೋಟ್ ತರಿಸುವ ವ್ಯವಸ್ಥೆ ಮಾಡಲಾಗುತ್ತಿದೆ.ತಾಲ್ಲೂಕಿನಲ್ಲಿ ಅಷ್ಟೇನು ಮಳೆ ಬಾರದಿದ್ದರೂ ಕೂಡ ಬೇರೆಡೆ ಮಳೆಯಾಗಿದ್ದರಿಂದ ಹಳ್ಳದ ಪ್ರವಾಹ ಹೆಚ್ಚಾಗಿ ತುಂಬಿ ಹರಿಯುತ್ತಿದೆ ಎಂದು ತಹಶೀಲ್ದಾರ್ ನವೀನ ಹುಲ್ಲೂರ ಹೇಳಿದರು. ಪ್ರವಾಹದಲ್ಲಿ ಸಿಲುಕಿಕೊಂಡಿರುವವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಎಸ್.ಐ ಜಯ ಪಾಲ ಪಾಟೀಲ ಹೇಳಿದರು. ಸಿಪಿಐ ಚಂದ್ರಶೇಖರ ಮಠಪತಿ ಸ್ಥಳದಲ್ಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು