ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ | ಉಮೇದುವಾರಿಕೆ ಹಿಂಪಡೆದ 8 ಮಂದಿ: ಕಣದಲ್ಲಿ ಉಳಿದ 17 ಅಭ್ಯರ್ಥಿಗಳು

Published 22 ಏಪ್ರಿಲ್ 2024, 15:41 IST
Last Updated 22 ಏಪ್ರಿಲ್ 2024, 15:41 IST
ಅಕ್ಷರ ಗಾತ್ರ

ಧಾರವಾಡ: ಧಾರವಾಡ ಕ್ಷೇತ್ರದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದವರಲ್ಲಿ ಎಂಟು ಅಭ್ಯರ್ಥಿಗಳು ಉಮೇದುವಾರಿಕೆ ವಾಪಸ್‌ ಪಡೆದಿದ್ದಾರೆ. ಅಂತಿಮವಾಗಿ 17ಮಂದಿ ಕಣದಲ್ಲಿ ಉಳಿದಿದ್ದಾರೆ.

ನಾಮಪತ್ರ ಹಿಂಪಡೆಯುವುದಕ್ಕೆ ಸೋಮವಾರ ಕೊನೆಯ ದಿನವಾಗಿತ್ತು.

ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಪ್ರವೀಣಕುಮಾರ ಮಾದರ, ವೆಂಕಟೇಶ ಆಚಾರ್ಯ ಮಣ್ಣೂರ, ವೀಣಾ ಜನಗಿ, ರಿಯಾಜ್‌ ಶೇಖ್‌, ದಿಂಗಾಲೇಶ್ವರ ಸ್ವಾಮೀಜಿ, ಶಿವಾನಂದ ಮುತ್ತಣ್ಣವರ, ರಾಜಶೇಖರಯ್ಯ ಕಂತಿಮಠ ಹಾಗೂ ವಿರೊ ಕೆ.ವಿರ್‌ ಇಂಡಿಯನ್‌ ಪಾರ್ಟಿಯ ರವಿ ಪಟ್ಟಣಶೆಟ್ಟಿ ನಾಮಪತ್ರ ಹಿಂಪಡೆದಿದ್ಧಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.

ಮೇ 7ಕ್ಕೆ ಮತದಾನ ಹಾಗೂ ಜೂನ್‌ 4ಕ್ಕೆ ಮತ ಎಣಿಕೆ ನಡೆಯಲಿದೆ.


ಕಣದಲ್ಲಿ ಉಳಿದವರು

 1. ವಿನೋದ ಅಸೂಟಿ– ಕಾಂಗ್ರೆಸ್‌

 2. ಪ್ರಲ್ಹಾದ ಜೋಶಿ– ಬಿಜೆಪಿ

 3. ಜಾವೀದ ಅಹಮದ್ ಬೆಳಗಾಂವಕರ್– ನಾಕಿ ಭಾರತೀಯ ಏಕತಾ ಪಾರ್ಟಿ

 4. ಟಾಕಪ್ಪ ಯಲ್ಲಪ್ಪ ಕಲಾಲ– ಪ್ರಹಾರ ಜನಶಕ್ತಿ ಪಾರ್ಟಿ

 5. ನಾಗರಾಜ ಕರೆಣ್ಣವರ– ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ

 6. ಬುಗಡಿ ಬಸವಲಿಂಗಪ್ಪ ಈರಪ್ಪ– ಉತ್ತಮ ಪ್ರಜಾಕೀಯ ಪಾರ್ಟಿ

 7. ಮಹಮ್ಮದ್‌ ಇಸ್ಮಾಯಿಲ್ ಮುಕ್ತಿ– ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ

 8. ವಿನೋದ ದಶರಥ್‌ ಘೋಡ್ಕೆ– ಪ್ರೌಟಿಸ್ಟ್ ಬ್ಲಾಕ್ ಇಂಡಿಯಾ ಪಕ್ಷ

 9. ವೆಂಕಟೇಶ್‌ಪ್ರಸಾದ ಎಚ್.– ಇಂಡಿಯನ್ ಲೇಬರ್ ಪಾರ್ಟಿ (ಅಂಬೇಡ್ಕರ, ಪುಲೆ)

 10. ಶರಣಬಸವಗೋನವರ–ಸೋಷಲಿಸ್ಟ್ ಯೂನಿಟಿಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷ

 11. ಬಂಕಾಪುರ ಶೌಖತ್ ಅಲಿ– ಟಿಪ್ಪು ಸುಲ್ತಾನ್‌ ಪಾರ್ಟಿ

 12. ಡಾ.ಗುರಪ್ಪ ಎಚ್.ಇಮ್ರಾಪೂರ– ಪ‍ಕ್ಷೇತರ

 13. ಪ್ರವೀಣ್‌ ಎಚ್‌ ಹತ್ತೆನ್ನವರ– ಪ‍ಕ್ಷೇತರ

 14. ಬಾಳನಗೌಡ್ರ ಮಲ್ಲಿಕಾರ್ಜುನಗೌಡ– ಪಕ್ಷೇತರ

 15. ರಾಜು ಅನಂತಸಾ ನಾಯಕವಾಡಿ– ಪಕ್ಷೇತರ

 16. ಶಕೀಲ್‌ ಅಹಮದ್‌ ಡಿ ಮುಲ್ಲಾ– ಪಕ್ಷೇತರ

 17. ಎಸ್.ಎಸ್.ಪಾಟೀಲ್– ಪಕ್ಷೇತರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT