ಮಂಗಳವಾರ, ಜೂನ್ 15, 2021
27 °C

ಸಿಸಿ ರಸ್ತೆ ನಿರ್ಮಾಣಕ್ಕೆ ಅಬ್ಬಯ್ಯ ಭೂಮಿಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಮಂಗಸೂಳಿ- ಲಕ್ಷ್ಮೇಶ್ವರ ಮುಖ್ಯರಸ್ತೆಗೆ ಕೂಡುವ ಗಾರ್ಡನ್‌ ಪೇಟೆಯ ಒಳ ಕಾಂಕ್ರಿಟ್‌ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಪ್ರಸಾದ ಅಬ್ಬಯ್ಯ ಗುರುವಾರ ಅಬ್ಬಾಸ್ ಅಲಿ ಚೌಕ್‍ನಲ್ಲಿ ಭೂಮಿಪೂಜೆ ನೆರವೇರಿಸಿದರು.

₹5 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ’ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶೇ 70ರಷ್ಟು ರಸ್ತೆಗಳು ಕಾಂಕ್ರಿಟ್‌ನಿಂದ ಕೂಡಿವೆ. ಹಿಂದೆ ಕಾಲಿಡಲು ಆಗದಂತಿದ್ದ ರಸ್ತೆಗಳಲ್ಲಿ ಈಗ ಸುಂದರವಾದ ರಸ್ತೆಗಳು ನಿರ್ಮಾಣವಾಗಿವೆ. ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಅನುದಾನದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ’ ಎಂದರು.

’ಕ್ಷೇತ್ರ ವ್ಯಾಪ್ತಿಯ ಪ್ರತಿ ಪ್ರದೇಶಗಳನ್ನೂ ಆದ್ಯತೆ ಮೇರೆಗೆ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಗಾರ್ಡನ್‌ ಪೇಟೆ ಸುತ್ತಲಿನ ಮಾಲ್ದಾರ ಬಾಡಾ, ಕುಂಬಾರ ಬಾಡಾ, ಕೌಲಸಾ ಬಾಡಾ ಹಾಗೂ ನಾಲಬಂದ ಗಲ್ಲಿ ಪ್ರದೇಶಗಳ ರಸ್ತೆಗಳಿಗೆ ಕಾಂಕ್ರಿಟ್‌ ಹಾಕಲು ಚಾಲನೆ ನೀಡಲಾಗಿದೆ’ ಎಂದರು.

ಪಾಲಿಕೆ ಮಾಜಿ ಸದಸ್ಯರಾದ ಅಲ್ತಾಫ್ ಕಿತ್ತೂರು, ವಿಜನಗೌಡ ಪಾಟೀಲ, ಮುತುವಲ್ಲಿಗಳಾದ ಮುಮ್ತಾಜ್ ಪಠಾಣ್, ಗೌಸ್ ಕೋಲಿವಾಲೆ, ಅಂಜುಮನ್ ಇಸ್ಲಾಂ ಸಂಸ್ಥೆ ಅಧ್ಯಕ್ಷ ಯೂಸುಫ್‌ ಸವಣೂರು, ಮುಖಂಡರಾದ ಮಜರ್ ಖಾನ್, ಸೈಯದ್ ಮದನ್, ಶಬ್ಬೀರ ಚುಹೆ, ರಿಯಾಜ್ ಕೊಪ್ಪಳ, ರಿಯಾಜ್ ಗೌಂಡಿ, ಶಫಿ ಶಿರಗುಪ್ಪಿ, ಜಾಫರ್ ಹೊಂಗಲ, ಅನೀಸ್ ಹೊಂಗಲ, ಕುಮಾರ ಕುಂದನಹಳ್ಳಿ, ಪ್ರಸನ್ನ ಮಿರಜಕರ್, ಹಾಜಿ ಅಲಿ ಹಿಂಡಸಗೇರಿ, ಸಮದ್ ಗುಲಬರ್ಗಾ, ರೆಹಮಾನ್ ಮುಂಡಾಸಗರ, ಸೈಯದ್ ಸಲೀಂ ಮುಲ್ಲಾ, ಜಾಫರ್ ಶಾಬ್ದಿ, ಲೋಕೊಪಯೋಗಿ ಎಂಜಿನಿಯರ್‌ ಹರೀಶ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.