ಹುಬ್ಬಳ್ಳಿ: ನಗರದ ಬೈರಿದೇವರಕೊಪ್ಪದ ಈಶ್ವರ ದೇವಸ್ಥಾನದ ಎದುರು ಶುಕ್ರವಾರ ರಾತ್ರಿ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಬೈಕ್ ಸವಾರ ಡಿಕ್ಕಿ ಹೊಡೆದ ಪರಿಣಾಮ, ಪಾದಚಾರಿ ಮತ್ತು ಸವಾರ ಇಬ್ಬರೂ ಮೃಪಟ್ಟಿದ್ದಾರೆ.
ಕುಂದುಗೊಳ ತಾಲ್ಲೂಕಿನ ಎಲಿವಾಳ ಗ್ರಾಮದ ನಿವಾಸಿ ಬೈಕ್ ಸವಾರ ಮುಕ್ತುಂ ಹುಸೇನ್ ಕುರುಹಟ್ಟಿ (21) ಮತ್ತು ಧಾರವಾಡದ ಹಂಗರಕಿ ಗ್ರಾಮದ ಹಮಾಲಿ ಕಾರ್ಮಿಕ ಬಸವರಾಜ (45) ಮೃತಪಟ್ಟವರು. ಧಾರವಾಡದಿಂದ ಬೈಕ್‌ನಲ್ಲಿ ಬರುತ್ತಿದ್ದ ಮುಕ್ತುಂ, ಈಶ್ವರ ದೇವಸ್ಥಾನದ ಕಡೆಯಿಂದ ಎಪಿಎಂಸಿಗೆ ಹೋಗಲು ರಸ್ತೆ ದಾಟುತ್ತಿದ್ದ ಬಸವರಾಜ ಅವರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ತೀವ್ರತೆಗೆ ಮುಕ್ತುಂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡಿದ್ದ ಬಸವರಾಜ ಅವರನ್ನು ಕಿಮ್ಸ್‌ಗೆ ಸಾಗಿಸುವಾಗ ಮೃತಪಟ್ಟಿದ್ದಾರೆ ಎಂದು ಉತ್ತರ ಸಂಚಾರ ಠಾಣೆ ಇನ್‌ಸ್ಪೆಕ್ಟರ್ ರಮೇಶ ಗೋಕಾಕ ತಿಳಿಸಿದ್ದಾರೆ.
ಉತ್ತರ ಪೊಲೀಸ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.