ಅಳ್ನಾವರ: ಧಾರವಾಡದ ನೆಹರು ಯುವ ಕೇಂದ್ರ, ಕ್ರೀಡಾ ಭಾರತಿ, ಸ್ಥಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಹೊನ್ನಾಪೂರದ ಭಾರತ ಮಾತಾ ಮಹಿಳಾ ಮಂಡಳದ ಸಹಯೋಗದಲ್ಲಿ 2021-22ರ ತಾಲ್ಲೂಕು ಮಟ್ಟದ ಕ್ರೀಡಾಕೂಟ ಜ.2ರಂದು ಇಲ್ಲಿನ ತಾಲ್ಲೂಕು ಕ್ರೀಡಾಂಗಣ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ.

ಕ್ರೀಡಾಕೂಟಕ್ಕೆ ಭರದ ಸಿದ್ಧತೆ ನಡೆದಿದೆ ಎಂದು ದೈಹಿಕ ಕ್ರೀಡಾ ನಿರ್ದೇಶಕ ಶ್ರೀಪಾಲ ಕುರಕುರಿ ತಿಳಿಸಿದ್ದಾರೆ.
ಬೆಳಿಗ್ಗೆ ಗಂಟೆಗೆ 9.30ಕ್ಕೆ ಪಟ್ಟಣ ಪಂಚಾಯ್ತಿ ಆಧ್ಯಕ್ಷೆ ಮಂಗಳಾ ರವಳಪ್ಪನವರ ಕ್ರೀಡಾಕೂಟ ಉದ್ಘಾಟಿಸುವರು, ಪ್ರಾಚಾರ್ಯ ಡಾ. ಸಿ.ಎನ್.ಹೊಂಬಾಳಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಯುವ ಅಧಿಕಾರಿ ನೆಹರು ಯುವ ಕೇಂದ್ರದ ಗೌತಮ ರೆಡ್ಡಿ , ನದೀಮ ಕಾಂಟ್ರ್ಯಾಕ್ಟರ್, ಬೆಣಚಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಂದೀಪ ಪಾಟೀಲ, ರಮೇಶ ಹೂಗಾರ, ಮಂಜುಳಾ ಕಲಾಜ, ಪರಪ್ಪ ಕ್ಷಾತ್ರತೇಜ, ಗಿರೀಶ ಗಿರಿಮಲ್ಲಣ್ಣವರ, ವಿದ್ಯಾಶ್ರೀ ನಾಯಕ ಉಪಸ್ಥಿತರಿರುವರು.

ಕ್ರೀಡಾಕೂಟದಲ್ಲಿ ಕಬಡ್ಡಿ ( ಪುರುಷ- ಮಹಿಳೆ), ವಾಲಿಬಾಲ್ ( ಪುರುಷ- ಮಹಿಳೆ), ಹಗ್ಗ– ಜಗ್ಗಾಟ (ಪುರುಷ- ಮಹಿಳೆ), ಖೋ ಖೋ (ಪುರುಷ- ಮಹಿಳೆ) ಹಾಗೂ ಅಥ್ಲೇಟಿಕ್ 100 ಮೀ, 200 ಮೀ ಹಾಗೂ ಭಲ್ಲೆ ಎಸೆತ, ಗುಂಡು ಎಸೆತ, (ಪುರುಷ- ಮಹಿಳೆ), 10 ಕಿ.ಮೀ. (ಪುರುಷ), 6 ಕಿ.ಮೀ (ಮಹಿಳೆ), ಟೆಕ್ವಾಂಟೊ (ಆತ್ಮರಕ್ಷಣೆ ಕಲೆ- ಪುರುಷ- ಮಹಿಳೆ), ಪುರುಷರಿಗಾಗಿ ಕುಸ್ತಿ ಆಯೋಜನೆ ಮಾಡಲಾಗಿದೆ.

ತಾಲ್ಲೂಕಿನ ಎಲ್ಲ ಕ್ರೀಡಾಪಟುಗಳು, ಯುವಕ/ ಯುವತಿ ಮಂಡಳಿಯವರು, ಕ್ಲಬ್ ಸದಸ್ಯರು, ಕ್ರೀಡಾ ಪ್ರತಿಭೆಗಳು ಭಾಗವಹಿಸಬಹುದು. ತಾಲ್ಲೂಕು ಮಟ್ಟದ ಪ್ರಥಮ ಹಾಗೂ ದ್ವಿತೀಯ ಸ್ಥಾನ ವಿಜೇತರಿಗೆ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಈ ಕುರಿತು ಕಾಲೇಜಿನ ಸಭಾ ಭವನದಲ್ಲಿ ಶನಿವಾರ ನಿರ್ಣಾಯಕರ ಹಾಗೂ ಕ್ರೀಡಾ ಶಿಕ್ಷಕರ ಸಭೆ ನಡೆದು ಕ್ರೀಡಾಕೂಟದ ಸಿದ್ದತೆ ಹಾಗೂ ಯಶಸ್ವಿಗೆ ಶ್ರಮಿಸಲು ನಿರ್ಧರಿಸಲಾಗಿದೆ ಎಂದರು.

ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳ ವಯಸ್ಸು 18 ರಿಂದ 29ರೊಳಗೆ ಇರಬೇಕು. ಹೆಚ್ಚಿನ ಮಾಹಿತಿಗೆ ಹಾಗೂ ನೋಂದಣಿಗೆ ಪರಪ್ಪ ಶಿ. ಕ್ಷಾತ್ರಕ್ಷೇಜ್ ಕಾರ್ಯದರ್ಶಿ ಕೀಡಾ ಭಾರತಿ ಹೊನ್ನಾಪೂರ ಮೊಬೈಲ್ ಸಂಖ್ಯೆ 9632139615 ಮತ್ತು ದೈಹಿಕ ಶಿಕ್ಷಕ ಶ್ರೀಪಾಲ ಕುರಕುರಿ ಮೊಬೈಲ್ ಸಂಖ್ಯೆ- 94480402922 ಗೆ ಸಂಪರ್ಕಿಸಲು ಪ್ರಕಟಣೆ ಕೋರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.