ಅಳ್ನಾವರ: ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಸಂಭ್ರಮದಿಂದ ಹೋಳಿ ಆಚರಿಸಲಾಯಿತು.
ಪಟ್ಟಣದ ವಿವಿಧ ಕೂಟಗಳಲ್ಲಿ ಕಾಮ ದಹನ ನಡೆಯಿತು. ಕೈಯಲ್ಲಿ ಬಣ್ಣದ ಪೊಟ್ಟಣ ಹಿಡಿದುಕೊಂಡು ಬೆಳಿಗ್ಗೆಯಿಂದಲೇ ಚಿಣ್ಣರು, ಯುವಕರು ಬೀದಿಗಿಳಿದು ತಮಗೆ ಪರಿಚಯಸ್ಥರ ಮನಯತ್ತ ತೆರಳಿ ಬಣ್ಣ ಹಾಕಿ ಸಂಭ್ರಮಿಸಿದರು. ಯುವಕರು ಬೈಕ್‌ನಲ್ಲಿ ಪಟ್ಟಣದಲ್ಲಿ ಸುತ್ತಾಡಿ ಬಣ್ಣ ಎರಚಿಸಿದರು. ಯುವಕರು, ಮಹಿಳೆಯರು ಡಿ.ಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ಕಾಮದಹನ ಮಾಡಿದ ಬೆಂಕಿಯಲ್ಲಿ ಕಡ್ಲೆ ಹುರಿದು ತಿಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.