ನವಲಗುಂದ: ಮಹದಾಯಿ, ಕಳಸಾ-ಬಂಡೂರಿ ಕಾಮಗಾರಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೂಡಿಕೊಂಡು ಕಾನೂನು ತೊಡಕು ಬಗೆಹರಿಸಿ ಶೀಘ್ರ ಕಾಮಗಾರಿ ಪ್ರಾರಂಭಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಪ್ರವೀಣ ಶೆಟ್ಟಿ ಆಗ್ರಹಿಸಿದರು.
ಅವರು ಗುರುವಾರ ಮಹದಾಯಿ–ಕಳಸಾ–ಬಂಡೂರಿ ಜಾರಿ ಹಾಗೂ ಕಪ್ಪತಗುಡ್ಡ ರಕ್ಷಣೆಗಾಗಿ ಆಗ್ರಹಿಸಿ ನರಗುಂದದಿಂದ ಗದಗವರೆಗೆ ಪಾದಯಾತ್ರೆಗೆ ತೆರಳುವ ಮಾರ್ಗ ಮಧ್ಯೆ ನವಲಗುಂದ ಪಟ್ಟಣದಲ್ಲಿರುವ ಹುತಾತ್ಮ ರೈತ ಬಸಪ್ಪ ಲಕ್ಕುಂಡಿ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರು ಲೋಕಸಭಾ ಚುನಾವಣೆಗೂ ಮುನ್ನ ಮಾತನಾಡಿದಂತೆ ಮಹದಾಯಿ ಕಳಸಾ ಬಂಡೂರಿ ಯೋಜನೆ ಜಾರಿ ಮಾಡಲಿ ಎಂದರು.
ಗದಗ ಜಿಲ್ಲೆಯಲ್ಲಿರುವ ಕಪ್ಪತ್ತು ಗುಡ್ಡವನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದು ಇದೆ ವೇಳೆ ಸರಕಾರಕ್ಕೆ ಒತ್ತಾಯಿಸಿದರು. ಇದಕ್ಕೂ ಮೊದಲು ಪಟ್ಟಣದ ಶೆಟ್ಟರ ಕೆರೆಯಿಂದ ಮಹದಾಯಿ ವೇದಿಕೆವರೆಗೆ ಪಾದಯಾತ್ರೆ ನಡೆಸಿದರು
ಕರವೇ ಪದಾಧಿಕಾರಿಗಳಾದ ಶರಣು ಗದ್ದಗಿ, ಪಾಪು ದಾರೆ, ಮಂಜುನಾಥ ಲೂತಿಮಠ, ಪ್ರವೀಣ ಗಾಯಕವಾಡ, ಪಾಪು ಅಂಬೇಗರ, ಸಚಿನ ಹೋನಕುದರಿ, ಕುಮಾರ ಗುತ್ತೇಪ್ಪನವರ ಅಬ್ದುಲ್ ಕಲೆಗಾರ, ಪ್ರಕಾಶ ಹಿರಗಣ್ಣವ್ವರ ಸೇರಿದಂತೆ ಮಹದಾಯಿ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ರೈತ ಹೋರಾಟಗಾರರು ಉಪಸ್ಥಿತರಿದ್ದರು.