ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವ ಎಕ್ಸ್‌ಪ್ರೆಸ್‌ ರೈಲು ಸಂಚಾರ ಮೂರು ದಿನ ರದ್ದು

Last Updated 24 ಸೆಪ್ಟೆಂಬರ್ 2019, 19:26 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗುಂತಕಲ್‌ ವಿಭಾಗದಲ್ಲಿ ಜೋಡಿ ರೈಲು ‌ಮಾರ್ಗದ ಕಾಮಗಾರಿ ನಡೆಯುತ್ತಿರುವ ಕಾರಣ ಸೆ.27ರಿಂದ ಮೂರು ದಿನ ಮೈಸೂರು–ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್‌ ಸಂಚಾರವನ್ನು ರದ್ದು ಮಾಡಲಾಗಿದೆ. ಈ ರೈಲು 28ರಿಂದ ಮೂರು ದಿನ ಬಾಗಲಕೋಟೆಯಿಂದಲೂ ಸಂಚರಿಸುವುದಿಲ್ಲ.

ಹುಬ್ಬಳ್ಳಿ– ಮೈಸೂರು ಹಂಪಿ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಮಾರ್ಗವನ್ನು ಸೆ.25ರಿಂದ 29ರವರೆಗೆ ಬದಲಾವಣೆ ಮಾಡಲಾಗಿದ್ದು, ಈ ರೈಲು ಗುಂತಕಲ್‌, ಕಲ್ಲೂರು, ಧರ್ಮಾವರಂ ಬದಲು ಹೊಸಪೇಟೆ, ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು, ಅರಸೀಕೆರೆ, ಯಶವಂತಪುರ ಮಾರ್ಗದಲ್ಲಿ ಸಂಚರಿಸಲಿದೆ. ಮೈಸೂರಿನಿಂದಲೂ ಇದೇ ಮಾರ್ಗದಲ್ಲಿ ಹುಬ್ಬಳ್ಳಿಗೆ ಬರಲಿದೆ.

ಮೈಸೂರು– ಸಾಯಿನಗರ ಶಿರಡಿ ನಡುವೆ ವಾರಕ್ಕೊಮ್ಮೆ ಸಂಚರಿಸುವ ರೈಲು 30ರಂದು ಧರ್ಮಾವರಂ ಮಾರ್ಗದ ಬದಲಾಗಿ ತುಮಕೂರು, ಅರಸೀಕೆರೆ, ಚಿಕ್ಕಜಾಜೂರು, ರಾಯದುರ್ಗ, ಬಳ್ಳಾರಿ ಮಾರ್ಗದಲ್ಲಿ ಸಂಚರಿಸಲಿದೆ. 29ರಂದು ಕೆಎಸ್‌ಆರ್‌ ಬೆಂಗಳೂರು– ಜೋಧಪುರ ಎಕ್ಸ್‌ಪ್ರೆಸ್‌ ರೈಲು ಸಹ ಇದೇ ಮಾರ್ಗದಲ್ಲಿ ಹುಬ್ಬಳ್ಳಿಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT