ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಾ 5 ತಂಡಕ್ಕೆ ಮೊದಲ 3 ಸ್ಥಾನ

ಸಿದ್ಧಾರೂಢ ಮಠದಲ್ಲಿ ರಾಜ್ಯಮಟ್ಟದ ಭಜನೆ ಸ್ಪರ್ಧೆ
Last Updated 28 ಮಾರ್ಚ್ 2023, 16:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಸಿದ್ಧಾರೂಢ ಮಠದಲ್ಲಿ ನಡೆದ ಆರು ದಿನಗಳ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ತಲಾ ಐದು ತಂಡಗಳು ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಹಾಗೂ 15 ತಂಡಗಳು ಸಮಾಧಾನಕರ ಬಹುಮಾನ ಪಡೆದವು.

ಪ್ರಥಮ ಸ್ಥಾನ: ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ಮಮದಾಪೂರ ಗ್ರಾಮದ ಶ್ರೀ ಗಣೇಶ ಭಜನಾ ಮಂಡಳಿ, ಮೂಡಲಗಿ ತಾಲ್ಲೂಕಿನ ಕಲ್ಲೊಳ್ಳಿಯ ಶ್ರೀ ಸಿದ್ದಲಿಂಗೇಶ್ವರ ಭಜನಾ ಮಂಡಳಿ, ತಿಗಡಿಯ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಕುಳಲಿಯ ಶ್ರೀ ಭೀಮಾ ಅವಧೂತ ಭಜನಾ ಮಂಡಳಿ ಹಾಗೂ ಜಮಖಂಡಿಯ ಶ್ರೀ ಬನಶಂಕರಿ ಭಜನಾ ಮಂಡಳಿ.

ದ್ವಿತೀಯ ಸ್ಥಾನ: ಹುಬ್ಬಳ್ಳಿ ತಾಲ್ಲೂಕಿನ ನೂಲ್ವಿಯ ಶ್ರೀ ಮರಿಯಮ್ಮ ದೇವಿ ಹಾಗೂ ಕರಿಯಮ್ಮ ದೇವಿ ಭಜನಾ ಮಂಡಳಿ, ಧಾರವಾಡ ತಾಲ್ಲೂಕಿನ ದೇವರಕೊಂಡದ ಸದ್ಗುರು ಶಿವಾನಂದ ಭಾರತಿ ಭಜನಾ ಮಂಡಳಿ (ಬಾಲಕಿಯರು), ಮೂಡಲಗಿ ತಾಲ್ಲೂಕಿನ ಬೀಸನಕೊಪ್ಪದ ಶ್ರೀ ಶಿವಾನಂದ ಭಾರತಿ ಭಜನಾ ಮಂಡಳಿ, ಗೋಕಾಕ ತಾಲ್ಲೂಕಿನ ಗೋಕಾಕ ಫಾಲ್ಸ್‌ನ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿ ಭಜನಾ ಮಂಡಳಿ.

ತೃತೀಯ ಸ್ಥಾನ: ಮುಧೋಳದ ಶ್ರೀ ಬಸವೇಶ್ವರ ಭಜನಾ (ಅಂಧರ) ಮಂಡಳಿ, ಗೋಕಾಕದ ಜೋಕಾನಟ್ಟಿಯ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಚಿಕ್ಕನಂದಿಯ ಶ್ರೀ ಸಿದ್ಧಾರೂಢ ಭಜನಾ ಮಂಡಳಿ, ಮುಧೋಳ ತಾಲ್ಲೂಕಿನ ಬುದ್ನಿಯ ಶ್ರೀ ದಿಗಂಬರೇಶ್ವರ ಭಜನಾ ಮಂಡಳಿ, ಹುಬ್ಬಳ್ಳಿಯ ಕಾಳಿದಾಸ ನಗರದ ಶ್ರೀ ದಾನೇಶ್ವರಿ ಮಹಿಳಾ ಭಜನಾ ತಂಡ.

ಪ್ರಥಮ ಬಹುಮಾನದ ಮೊತ್ತ ₹95 ಸಾವಿರ, ದ್ವಿತೀಯ ₹75 ಸಾವಿರ ಹಾಗೂ ತೃತೀಯ ₹65 ಸಾವಿರ ಮೊತ್ತವನ್ನು ಎಲ್ಲಾ ತಂಡಗಳಿಗೂ ಸಮಾನವಾಗಿ ಹಂಚಲಾಯಿತು.

ಸಮಾಧಾನಕರ ಬಹುಮಾನ: ಚಿಕ್ಕಮಗಳೂರಿನ ಶ್ರೀ ದಾಸ ವಿಠ್ಠಲ ಭಜನಾ ಮಂಡಳಿ, ದಾವಣಗೆರೆಯ ಶ್ರೀ ಮಟ್ಟಿ ಆಂಜನೇಯ ಭಜನಾ ಮಂಡಳಿ, ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಸಂಗಮೇಶ್ವರದ ಶ್ರೀ ಬನ್ನಿ ಮಹಾಂಕಾಳಿ ಭಜನಾ ಸಂಘ, ಬಡೆಲಡಕಿನ ಶ್ರೀ ಸಿದ್ಧೇಶ್ವರ ಭಜನಾ ಸಂಘ, ಕೊಪ್ಪಳ ಜಿಲ್ಲೆಯ ಅಗಳಕೇರಾದ ಶ್ರೀ ಶರಣ ಬಸವೇಶ್ವರ ಭಜನಾ ಮಂಡಳಿ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹಂದಿನಗಡು ಗ್ರಾಮದ ಶ್ರೀ ಅವಧೂತ ಗವಿ ಶಾಂತವೀರ ಭಜನಾ ತಂಡ, ದೊಡ್ಡ ತೇಕಲವಡ್ಡಿಯ ಶ್ರೀ ಕನಕಶ್ರೀ ಕಲಾ ಸಾಂಸ್ಕೃತಿಕ ಮಹಿಳಾ ಭಜನಾ ಮಂಡಳಿ, ರಾಯಚೂರು ಜಿಲ್ಲೆಯ ಮಸ್ಕಿಯ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ, ಬೀದರ್ ಜಿಲ್ಲೆಯ ಚಿಟಗುಪ್ಪಿಯ ಶ್ರೀ ಮಹಾದೇವ ಮಂದಿರ ಭಜನಾ ಸಂಘ, ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಚಿಟ್ಟೂರಿನ ಶ್ರೀ ಮಾರ್ಕಂಡೇಶ್ವರ ಭಜನಾ ಮಂಡಳಿ, ಬಳ್ಳಾರಿಯ ಶ್ರೀ ಮಾಣಿಕೇಶ್ವರ ಭಜನಾ ಮಂಡಳಿ, ತುಮಕೂರು ಜಿಲ್ಲೆಯ ತುರುವೆಕೆರೆ ತಾಲ್ಲೂಕಿನ ಮಾಂತ್ರಿಕೇನಹಳ್ಳಿ ಗೊಲ್ಲರಹಟ್ಟಿಯ ಶ್ರೀ ಮಾಚಪ್ಪಸ್ವಾಮಿ ಭಜನಾ ಮಂಡಳಿ, ಹುಲ್ಲೇಕೆರೆಯ ಶ್ರೀ ಸೋಮಲಿಂಗೇಶ್ವರ ಭಜನಾ ಮಂಡಳಿ, ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಜಮಗಾದ ಶ್ರೀ ಸಿದ್ದೇಶ್ವರ ಭಜನಾ ಸಂಘ ಹಾಗೂ ಕರಹರಿಯ ಶ್ರೀ ಮನ್ಮಥಸ್ವಾಮಿ ಭಜನಾ ಸಂಘ.

ವೈಯಕ್ತಿಕ ವಿಭಾಗ: ಮಹಿಳಾ ಪುರಸ್ಕಾರ– ಶ್ರೀ ಗೌರಿ ಹಿಳಾ ಸಮಾಜ (ಶಿರಸಿ), ಬಾಲಕರ ಪುರಸ್ಕಾರ– ಶ್ರೀ ಸಿದ್ಧಾರೂಢ ಭಜನಾ ಸಂಘ (ಗೋಠೆ, ಬಾಗಲಕೋಟೆ ಜಿಲ್ಲೆ), ಬಾಲಕಿಯರ ಪುರಸ್ಕಾರ– ಬಾಲಯೋಗಿ ಮಾಣಿಕ್ಯ ಚನ್ನವೃಷಭೇಂದ್ರ ಭಜನಾ ತಂಡ (ಉಗ್ನಿಕೇರಿ, ಧಾರವಾಡ ಜಿಲ್ಲೆ), ಉತ್ತಮ ಗಾಯನ– ಶ್ರೀ ಸಿದ್ಧಾರೂಢ ಶಾಂತಾಶ್ರಮ ಭಜನಾ ಮಂಡಳಿ (ಮುತ್ತೂರ, ಜಮಖಂಡಿ ತಾಲ್ಲೂಕು), ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ (ಕೊಪ್ಪ, ಬೀಳಗಿ ತಾಲ್ಲೂಕು), ಉತ್ತಮ ಹಾರ್ಮೊನಿಯಂ– ಶ್ರೀ ಕುಕ್ಕೆ ಸುಬ್ರಮಣ್ಯ ಮಹಿಳಾ ಸಾಂಸ್ಕೃತಿಕ ತಂಡ (ಕೆರೂರ, ಬಾದಾಮಿ ತಾಲ್ಲೂಕು), ಶ್ರೀ ಗುರು ಬಸವೇಶ್ವರ ಭಜನಾ ಮಂಡಳಿ (ನಾಗರಾಳ, ಮುಧೋಳ ತಾಲ್ಲೂಕು), ಉತ್ತಮ ತಬಲಾ ವಾದನ– ಶ್ರೀ ರಾಚೋಟೇಶ್ವರ ಭಜನಾ ಮಂಡಳಿ (ಕಣಬೂರ, ಬಬಲೇಶ್ವರ ತಾಲ್ಲೂಕು), ಶಿವಾನಂದ ಭಾರತಿ ಭಜನಾ ಮಂಡಳಿ (ಬೀರುವಳ್ಳಿ, ಕಲಘಟಗಿ ತಾಲ್ಲೂಕು), ಉತ್ತಮ ಧಮಡಿ– ಶ್ರೀ ಸಿದ್ಧಾರೂಢ ಭಜನಾ ಮಂಡಳಿ (ಗೋಸಬಾಳ, ಗೋಕಾಕ ತಾಲ್ಲೂಕು), ಶ್ರೀ ಗುರು ಮಲ್ಲೇಶ್ವರ ಭಜನಾ ಸಂಘ (ಕಟ್ನವಾಡಿ, ಚಾಮರಾಜನಗರ ಜಿಲ್ಲೆ), ಉತ್ತಮ ತಾಳ ವಾದನ– ಶ್ರೀ ಸಂಗಮೇಶ್ವರ ಭಜನಾ ಮಂಡಳಿ (ಹಿಪ್ಪರಗಿ, ರಬಕವಿ–ಬನಹಟ್ಟಿ ತಾಲ್ಲೂಕು), ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ (ಬೀಳಗಿ), ಉತ್ತಮ ಡಗ್ಗಾ ವಾದನ– ಶ್ರೀ ಅಲ್ಲಮಪ್ರಭು ಭಜನಾ ಮಂಡಳಿ (ಹದಲಿ, ನರಗುಂದ ತಾಲ್ಲೂಕು), ಅದೃಶ್ಯಾನಂದ ಭಜನಾ ಮಂಡಳಿ (ಗರಜೂರ, ಬೈಲಹೊಂಗಲ ತಾಲ್ಲೂಕು).

ಎಲ್ಲರಿಗೂ ಪ್ರಶಸ್ತಿ ಪ್ರಮಾಣಪತ್ರ ವಿತರಿಸಲಾಯಿತು. ಬಹುಮಾನ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಅಣ್ಣಿಗೇರಿಯ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ವರವಿ ಮೌನೇಶ್ವರ ಸ್ವಾಮೀಜಿ ವಹಿಸಿದ್ದರು. ಸ್ಪರ್ಧೆಯ ಅಧ್ಯಕ್ಷ ಶಾಮಾನಂದ ಪೂಜೇರಿ, ಗೌರವ ಕಾರ್ಯದರ್ಶಿಗಳಾದ ಎಸ್‌.ಐ. ಕೋಳಕೂರ, ಧರ್ಮದರ್ಶಿಗಳಾದ ಡಿ.ಡಿ. ಮಾಳಗಿ, ಜಗದೀಶ ಮಗಜಿಕೊಂಡಿ, ಜಿ.ಎಸ್. ನಾಐಕ ಹಾಗೂ ಮಠದ ವ್ಯವಸ್ಥಾಪಕ ಈರಣ್ಣ ತುಪ್ಪದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT