ಹುಬ್ಬಳ್ಳಿ: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಮುನ್ನ ನಡೆಯುವ ಕುಟುಂಬ ಸದಸ್ಯರ ಮ್ಯಾಪಿಂಗ್ ವೇಳೆ ಇಲ್ಲಿನ ಚಾಲುಕ್ಯನಗರದಲ್ಲಿ ಕೆಲ ದಿನಗಳ ಹಿಂದೆ ನಡೆದಿದ್ದ ಗಲಾಟೆ, ಬುಧವಾರ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಗುದ್ದಾಟಕ್ಕೆ ಕಾರಣವಾಯಿತು.

ಜನವರಿ 2ರಂದು ಬ್ಲಾಕ್ ಮಟ್ಟದ ಅಧಿಕಾರಿ (ಬಿಎಲ್ಒ) ನಂದಿನಿ ಕುಲಕರ್ಣಿ ಅವರ ಜೊತೆ ಸಂಬಂಧವಿಲ್ಲದ ವ್ಯಕ್ತಿಗಳು ಕುಟುಂಬದ ಮ್ಯಾಪಿಂಗ್ ಸಮೀಕ್ಷೆಗೆ ಬಂದಿದ್ದರು ಎಂದು ಚಾಲುಕ್ಯನಗರದ ಪ್ರಶಾಂತ ಬೊಮ್ಮಾಜಿ ಅವರು ಆಕ್ಷೇಪಿಸಿದ್ದರು. ಆಗ ಕುಟುಂಬದ ಮೇಲೆ ಹಲ್ಲೆ ನಡೆದಿತ್ತು ಎಂದು ಆರೋಪಿಸಲಾಗಿತ್ತು.

ಆಗ ಸ್ಥಳಕ್ಕೆ ತೆರಳಿದ್ದ ಪಾಲಿಕೆಯ ಕಾಂಗ್ರೆಸ್ ಸದಸ್ಯೆ ಸುವರ್ಣ ಕಲಕುಂಟ್ಲ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಸುಜಾತಾ ಹಂಡಿ, ಅವರ ಕುಟುಂಬದ ಸದಸ್ಯರ ವಿರುದ್ಧ ಕೇಶ್ವಾಪುರ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿತ್ತು.

‘ಈ ಪ್ರಕರಣಕ್ಕೆ ಸಂಬಂಧಿಸಿ ಸುಜಾತಾ ಹಂಡಿ ಅವರನ್ನು ಜನವರಿ 5ರಂದು ಪೊಲೀಸರು ವಶಕ್ಕೆ ಪಡೆಯುವಾಗ, ಅವರನ್ನು ವಿವಸ್ತ್ರಗೊಳಿಸಿ ಅವಮಾನಿಸಿದ್ದಾರೆ. ದಲಿತ ಮಹಿಳೆ ಎಂದು ಗೊತ್ತಿದ್ದೂ ಪಾಲಿಕೆ ಸದಸ್ಯೆಯ ಕುಮ್ಮಕ್ಕಿನಿಂದ ಬಿಜೆಪಿ ಕಾರ್ಯಕರ್ತೆ ಎಂದು ಅಮಾನುಷವಾಗಿ ವರ್ತಿಸಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಮಹಿಳೆಯನ್ನು ವಶಕ್ಕೆ ಪಡೆಯುವಾಗ ಅವರು ವಿವಸ್ತ್ರವಾಗಿರುವ ಎರಡು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದ್ದವು.

ಈ ಬಗ್ಗೆ ಮಾಧ್ಯಮದವರಿಗೆ ಸ್ಪಷ್ಟನೆ ನೀಡಿದ್ದ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ‘ಮಹಿಳೆಯು ನಮ್ಮ ಸಿಬ್ಬಂದಿಯ ಮೇಲೆಯೇ ಹಲ್ಲೆ ನಡೆಸಿ, ತಾವೇ ವಿವಸ್ತ್ರವಾಗಿ ಡ್ರಾಮಾ ಮಾಡಿದ್ದಾರೆ. ಇದರಲ್ಲಿ ಪೊಲೀಸರ ತಪ್ಪೇನೂ ಇಲ್ಲ. ನಮ್ಮಲ್ಲಿ ವಿಡಿಯೊಗಳು ಇವೆ’ ಎಂದಿದ್ದರು. ಆ ವಿಡಿಯೊ ಸಹ ಹಂಚಿಕೆಯಾಗಿತ್ತು.

ಇತ್ತ, ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು, ‘ಯಾವುದೇ ಮಹಿಳೆ ತನ್ನ ಮರ್ಯಾದೆಯನ್ನು ಈ ರೀತಿ ಹರಾಜು ಹಾಕಿಕೊಳ್ಳುವುದಿಲ್ಲ. ವಶಕ್ಕೆ ಪಡೆಯುವಾಗ ಪೊಲೀಸರೇ ವಿವಸ್ತ್ರಗೊಳಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿ, ಠಾಣೆ ಎದುರು ಪ್ರತಿಭಟನೆ ಆರಂಭಿಸಿದ್ದರು.

‘ಇನ್ಸ್ಪೆಕ್ಟರ್ ಕೆ.ಎಸ್. ಹಟ್ಟಿ ಮತ್ತು ಮಹಿಳೆ ಬಂಧನದ ವೇಳೆ ಇದ್ದ ಎಲ್ಲ ಸಿಬ್ಬಂದಿ ಅಮಾನತು ಮಾಡಬೇಕು. ಪಾಲಿಕೆ ಸದಸ್ಯೆ ಸುವರ್ಣ ಕಲಕುಂಟ್ಲ ಅವರನ್ನು ಬಂಧಿಸಬೇಕು’ ಎಂದು ಪಟ್ಟು ಹಿಡಿದರು. ಮೇಯರ್ ಜ್ಯೋತಿ ಪಾಟೀಲ, ಉಪಮೇಯರ್ ಸಂತೋಷ ಚವ್ಹಾಣ್, ಪಾಲಿಕೆಯ ಕೆಲವು ಬಿಜೆಪಿ ಸದಸ್ಯರು ಪ್ರತಿಭಟನೆಯಲ್ಲಿದ್ದರು.

ಪ್ರತಿಭಟನಾಕಾರರು ಠಾಣೆ ಪ್ರವೇಶಿಸದಂತೆ ಬ್ಯಾರಿಕೇಡ್ ಹಾಕಿ ನಿರ್ಬಂಧಿಸಲಾಗಿತ್ತು. ಮೇಯರ್, ಉಪಮೇಯರ್ ಅವರನ್ನು ತಡೆದಿದ್ದರಿಂದ ಪ್ರತಿಭಟನೆ ತೀವ್ರಗೊಂಡಿತು. ಪೊಲೀಸರು ಮತ್ತು ಮೇಯರ್ ನಡುವೆ ವಾಕ್ಸಮರ ನಡೆಯಿತು. ಪರಿಸ್ಥಿತಿ ಕೈಮೀರುವ ಹಂತಕ್ಕೆ ಬಂದಾಗ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸ್ಥಳಕ್ಕೆ ಬಂದು, ಮನವೊಲಿಸಲು ಯತ್ನಿಸಿದರು. ನಂತರ ಮೇಯರ್, ಉಪಮೇಯರ್ ಹೇಳಿಕೆ ಪಡೆದರು.

16 ಮಂದಿ ವಶಕ್ಕೆ:

ಠಾಣೆಯಿಂದ ಹೊರಬರುತ್ತಿದ್ದಂತೆಯೇ ಮೇಯರ್ ಜ್ಯೋತಿ ಪಾಟೀಲ ಮತ್ತು ಉಪಮೇಯರ್ ಸಂತೋಷ ಚವ್ಹಾಣ್ ನೇತೃತ್ವದಲ್ಲಿ ಠಾಣೆ ಆವರಣದಲ್ಲಿ ಪುನಃ ಪ್ರತಿಭಟನೆ ಮುಂದುವರಿಸಿದರು. ಮನವೊಲಿಸಲು ಪ್ರಯತ್ನಿಸಿದರೂ ಸ್ಪಂದಿಸದ 16 ಜನರನ್ನು ಪೊಲೀಸರು ವಶಕ್ಕೆ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.