ರಕ್ತ ಹೆಪ್ಪುಗಟ್ಟುವುದು ಕೋವಿಡ್–19 ಲಕ್ಷಣ: ಡಾ.ಉಲ್ಲಾಸ ಬಿಸಲೇರಿ
ಹುಬ್ಬಳ್ಳಿ: ಕೋವಿಡ್–19 ದೃಢಪಟ್ಟ ಕೆಲ ರೋಗಿಗಳ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುತ್ತಿದೆ. ಅದು ಕೋವಿಡ್–19 ಲಕ್ಷಣವಾಗಿದೆ ಎಂದು ಕಿಮ್ಸ್ನ ಶಸ್ತ್ರಚಿಕಿತ್ಸಕರಾದ ಡಾ.ಎಸ್.ವೈ. ಮುಲ್ಕಿಪಾಟೀಲ ಹಾಗೂ ಡಾ.ಉಲ್ಲಾಸ ಬಿಸಲೇರಿ ಹೇಳಿದರು.
ಕಿಮ್ಸ್ಗೆ ಇಂತಹ 6ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಇಬ್ಬರ ಕಾಲು ಕತ್ತರಿಸಬೇಕಾಯಿತು ಎಂದರು.
ಕಾಲಿನ ರಕ್ತನಾಳಗಳಲ್ಲಿ ರಕ್ತಹೆಪ್ಪುಗಟ್ಟಿ ನಡೆಯಲಾಗದಂತೆ ಆಗುತ್ತವೆ. ಮೂರ್ನಾಲ್ಕು ದಿನ ಬಿಟ್ಟರೆ ಗ್ರ್ಯಾಂಗ್ರೀನ್ ಆಗಿ, ಶಸ್ತ್ರಚಿಕಿತ್ಸೆ ಮೂಲಕ ಕಾಲನ್ನೇ ತೆಗೆಯಬೇಕಾಗುತ್ತದೆ ಎಂದು ಹೇಳಿದರು.
ಗ್ಯಾಂಗ್ರೀನ್ ಆಗಿದ್ದ ಇಬ್ಬರು ರೋಗಿಗಳ ಕಾಲು ತೆಗೆಯಲಾಗಿದೆ. ಕೊರೊನಾ ವಾರಿಯರ್ ಆಗಿದ್ದ ಪೊಲೀಸ್ ಅಧಿಕಾರಿಯೊಬ್ಬರ ರಕ್ತನಾಳ ಹೆಪ್ಪುಗಟ್ಟಿತ್ತು. ಶಸ್ತ್ರಚಿಕಿತ್ಸೆ ಮಾಡಿದ ನಂತರ ರಕ್ತನಾಳ ಯಥಾಸ್ಥಿತಿಗೆ ಬಂದಿವೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.