ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ: ಮಿದುಳು ನಿಷ್ಕ್ರಿಯಗೊಂಡ ಯುವಕನಿಂದ ಹಲವರಿಗೆ ಜೀವದಾನ 

Last Updated 11 ಆಗಸ್ಟ್ 2022, 2:49 IST
ಅಕ್ಷರ ಗಾತ್ರ

ಧಾರವಾಡ:ಮಿದುಳು ನಿಷ್ಕ್ರಿಯಗೊಂಡ 26 ವರ್ಷದ ಯುವಕನ ಅಂಗಾಂಗಗಳು, ಜೀವನ್ಮರಣ ಹೋರಾಟ ನಡೆಸುತ್ತಿರುವವರಿಗೆ ಜೀವದಾನ ಮಾಡಿವೆ.

ಇಲ್ಲಿನ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನ (ಗುರುತು ಬಹಿರಂಗ ಪಡಿಸಲು ಪಾಲಕರು ಸಮ್ಮತಿಸಿಲ್ಲ) ಮಿದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಘೋಷಿಸಿದರು. ಅಂಗಾಂಗ ದಾನ ಕುರಿತು ವೈದ್ಯರು ಪಾಲಕರ ಮನವೊಲಿಸಿದರು.
ಇದರ ಫಲವಾಗಿ ಹೃದಯ, 2 ಮೂತ್ರಪಿಂಡ, ಕಣ್ಣುಗಳು ಹಾಗೂ ಯಕೃತ್ ಆರು ಜನರ ಬದುಕಿಗೆ ಅಸರೆಯಾಗಿವೆ.

ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ, ಯಕೃತ್ ಬೆಂಗಳೂರು, ಮೂತ್ರಪಿಂಡ ಎಸ್ ಡಿಎಂ ಆಸ್ಪತ್ರೆಯಲ್ಲಿ ಅಂಗಾಂಗ ಕಸಿ ನಿರೀಕ್ಷೆಯಲ್ಲಿರುವವರಿಗಾಗಿ ನೀಡಲಾಗುತ್ತಿದೆ. ಬೆಳಗಾವಿಗೆ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣವರೆಗೆ ಜೀರೋ ಟ್ರಾಫಿಕ್ ಮೂಲಕ ಅಂಗಾಂಗ ಸಾಗಿಸಲಾಗುತ್ತಿದೆ. ಇದಕ್ಕಾಗಿ ಪೊಲೀಸ್ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT