ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಬ್ಬಳ್ಳಿ; ವಿಜೃಂಭಣೆಯ ರಥೋತ್ಸವ 

Published 11 ಫೆಬ್ರುವರಿ 2024, 15:51 IST
Last Updated 11 ಫೆಬ್ರುವರಿ 2024, 15:51 IST
ಅಕ್ಷರ ಗಾತ್ರ

ಉಪ್ಪಿನಬೆಟಗೇರಿ: ಧಾರವಾಡ ತಾಲ್ಲೂಕಿನ ಶ್ರೀಕ್ಷೇತ್ರ ಹೆಬ್ಬಳ್ಳಿ ಶಿವಾನಂದ ಮಠದ ಲಿಂ.ವಾಸುದೇವ ಸ್ವಾಮೀಜಿ 45ನೇ ಹಾಗೂ ಲಿಂ.ಬಸವರಾಜ ಸ್ವಾಮೀಜಿ 12ನೇ ಪುಣ್ಯರಾಧಣೆಯ ಪ್ರಯುಕ್ತ ಶನಿವಾರ ವಾಸುದೇವ ಸ್ವಾಮೀಜಿ ಮೂರ್ತಿಯ ಭವ್ಯ ರಥೋತ್ಸವ ಜರುಗಿತು.

ಬೆಳಿಗ್ಗೆ ಅರ್ಚಕರಿಂದ ಉಭಯ ಶ್ರೀಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ಕಾರ್ಯಕ್ರಮಗಳು ಜರುಗಿದವು. ಭಕ್ತರು ಹೂವು, ಕಾಯಿ, ಹಣ್ಣು, ನೈವೇದ್ಯ ಅರ್ಪಿಸಿದರು. ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ ವೇಳೆ ಮಂಜುನಾಥ ಕುರಿಡಿಕೇರಿ ಅವರ ಮನೆಯಿಂದ ವಾಸುದೇವ ಸ್ವಾಮೀಜಿಯರ ಉತ್ಸವ ಮೂರ್ತಿಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳದೊಂದಿಗೆ ಸಂಚರಿಸಿ ಶಿವಾನಂದ ಮಠಕ್ಕೆ ಆಗಮಿಸಿತು. ಸಂಜೆ 5.30ಕ್ಕೆ ಸಕಲ ವಾದ್ಯ ವೈಭವಗಳೊಂದಿಗೆ ಭವ್ಯ ರಥೋತ್ಸವ ಜರುಗಿತು.

ಭಕ್ತರು ರಥಕ್ಕೆ ಉತ್ತತ್ತಿ, ನಿಂಬೆ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಹೆಬ್ಬಳ್ಳಿ ಶಿವಾನಂದ ಮಠದ ಬ್ರಹ್ಮಾನಂದ ಸ್ವಾಮೀಜಿ, ಬಸವರಾಜ ತಟ್ಟಿಮನಿ, ಸುಮಂಗಲಾ ಕೌದೆನ್ನವರ, ಮಂಜುನಾಥ ವಾಸುಂಬಿ, ಮಂಜುನಾಥ ಕುರಡಿಕೇರಿ, ಶಿವಾನಂದ ಹೂಗಾರ, ಹನುಮಂತ ಹಾವೇರಿ, ಈರಪ್ಪ ದುರತ್ತನವರ, ಚನ್ನಮಲ್ಲಿಕಾರ್ಜುನ ಹೂಗಾರ, ಗುರುಪಾದಪ್ಪ ಮಾಳಾಪೂರ, ಭಕ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT