ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರಾವಣಿ, ಸಚಿನ್‌ ಪ್ರಥಮ

ಚೆಸ್‌ ಟೂರ್ನಿ: ಹುಬ್ಬಳ್ಳಿ ಸ್ಪರ್ಧಿಗಳ ಮೇಲುಗೈ
Last Updated 21 ಜುಲೈ 2019, 20:08 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆರೂ ಸುತ್ತುಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಶ್ರಾವಣಿ ನಾಯ್ಕ, ಸಚಿನ್‌ ಎಸ್‌. ಪೈ, ಧೃತಿ ಮುರುಗೋಡ್ ಮತ್ತು ತನಿಷಾ ಗೋಟಡ್ಕಿ ಅವರು ಹುಬ್ಬಳ್ಳಿ ಚೆಸ್‌ ಅಕಾಡೆಮಿ ಭಾನುವಾರ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ 9ನೇ ವರ್ಷದ ಚೆಸ್‌ ಟೂರ್ನಿಯ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದರು.

ವಿಶೇಷವೆಂದರೆ ಚಾಂಪಿಯನ್ ಆದ ಈ ಎಲ್ಲ ಸ್ಪರ್ಧಿಗಳು ಹುಬ್ಬಳ್ಳಿಯವರು. ಎಚ್‌.ಕೆ. ಪಾಟೀಲ ಕಾಲೇಜಿನಲ್ಲಿ ನಡೆದ ಟೂರ್ನಿಯಲ್ಲಿ ಧಾರವಾಡ, ಹಾವೇರಿ, ಬಾಗಲಕೋಟೆ, ಉತ್ತರ ಕನ್ನಡ ಜಿಲ್ಲೆಗಳಿಂದ 155 ಸ್ಪರ್ಧಿಗಳು ಭಾಗವಹಿಸಿದ್ದರು. ಸ್ವಿಸ್‌ ಲೀಗ್ ಮಾದರಿಯಲ್ಲಿ ನಡೆದ ಟೂರ್ನಿಯಲ್ಲಿ ಫಿಡೆ ರೇಟೆಡ್‌ ಹೊಂದಿರುವ 20 ಸ್ಪರ್ಧಿಗಳು ಪಾಲ್ಗೊಂಡಿದ್ದರು.

ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ಜರುಗಿದವು. ಪ್ರತಿ ವಿಭಾಗದಲ್ಲಿ ಮೊದಲ ಐದು ಸ್ಥಾನ ಪಡೆದ ಬಾಲಕ ಹಾಗೂ ಬಾಲಕಿಯರಿಗೆ ಟ್ರೋಫಿ ನೀಡಲಾಯಿತು. 120 ಪದಕಗಳನ್ನು ವಿತರಿಸಲಾಯಿತು. ಕರ್ನಾಟಕ ರಾಜ್ಯ ಕೋ ಆಪರೇಟಿವ್‌ ಫೆಡರೇಷನ್‌ ನಿರ್ದೇಶಕ ಆರ್‌.ಕೆ. ಪಾಟೀಲ, ಉಪನ್ಯಾಸಕ ಡಾ. ಮಹಾಂತೇಶ ಯತ್ನಟ್ಟಿ, ವೆಂಕಟೇಶ ದೇಶಪಾಂಡೆ, ಅಕಾಡೆಮಿ ಸಂಸ್ಥಾಪಕ ಕೆ.ವಿ. ಶ್ರೀಪಾದ, ಹಿರಿಯ ಕೋಚ್‌ ಚಂದ್ರಶೇಖರ ಯತ್ನಟ್ಟಿ ಇದ್ದರು.

ಫಲಿತಾಂಶ: (ಮೊದಲ ಐದು ಸ್ಥಾನ ಪಡೆದವರು): 1–4ನೇ ತರಗತಿ: ಶ್ರಾವಣಿ ನಾಯ್ಕ (6 ಪಾಯಿಂಟ್ಸ್‌), ಅಭಯ ಹೆಗ್ಡೆಕಟ್ಟೆ (5), ಆಯುಷಿ ರಾಣಿ (5), ವಿ.ಬಿ. ವೃಷಭೇಂದ್ರ (4.5), ಜಯರಾಮ್ ವಿ. ಭಟ್ (4).

5–7ನೇ ತರಗತಿ: ಸಚಿನ್ ಎಸ್‌. ಪೈ (6), ಧನಂಜಯ ಪಿ. ಜೋಶಿ (5), ಕಿಶನ್‌ ಎಸ್‌. ಹುಲಿಹಳ್ಳಿ (5), ತರುಣ ಬಸವರಾಜ ಮೊರಬ್ (5), ಎಂ.ಡಿ. ಅನುಜ್ (5).

8–10ನೇ ತರಗತಿ: ಧೃತಿ ಮುರುಗೋಡ್ (5), ಟಿ.ಎಸ್‌. ನವೀನ (5), ಪ್ರಥಮ ಪಿ. ಸಹಸ್ರಬುದ್ಧೆ (5), ಡಿ. ಪ್ರಶಾಂತ (4.5), ಆರ್‌.ಜೆ. ಸ್ಫೂರ್ತಿ (4).

ಪ್ರಥಮ ಪಿಯುಸಿ ಹಾಗೂ ದ್ವಿತೀಯ ವರ್ಷ: ತನೀಷಾ ಗೋಟಡ್ಕಿ (6), ಕೆ. ಅನುರಾಗ್ (5), ರಫೀಕ್‌ ಬೂದಿಯಾಳ್‌ (5), ದೇವಿದರ್ಶನ್‌ (4), ಹರ್ಷ ನಾಗರಕರ್ (4).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT