ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಮತ್ತೆ ಏರುತ್ತಿದೆ ಸೋಂಕು

ಜಿಲ್ಲೆಯಲ್ಲಿ ಸೋಂಕು ದರ ಶೇ 10.5ಕ್ಕೆ
Last Updated 8 ಜೂನ್ 2021, 13:53 IST
ಅಕ್ಷರ ಗಾತ್ರ

ಧಾರವಾಡ: ಜಿಲ್ಲೆಯಲ್ಲಿ ಕೋವಿಡ್–19 ಸೋಂಕು ದೃಢಪಡುತ್ತಿರುವ ದರ ಶೇ 10.5ರಷ್ಟಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಹೇಳಿದೆ.

ಲಾಕ್‌ಡೌನ್‌ನಲ್ಲಿ ಒಂದಷ್ಟು ರಿಯಾಯಿತಿಯೊಂದಿಗೆ ಪರಿಷ್ಕೃತ ಆದೇಶ ನೀಡಿದ ಬೆನ್ನಲ್ಲೇ ನಗರ ಹಾಗೂ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಜನರ ಓಡಾಟ ಹೆಚ್ಚಾಗಿದೆ. ಕಿರಾಣಿ ಹಾಗೂ ಇನ್ನಿತರ ವಸ್ತುಗಳ ಖರೀದಿ ಭರಾಟೆಯೂ ಜೋರಾಗಿದೆ. ಇದರ ಬೆನ್ನಲ್ಲೇ ಮತ್ತೆ ಸೋಂಕು ಹೆಚ್ಚಳವಾಗುವ ಭೀತಿಯೂ ಕಾಡುತ್ತಿದೆ.

ಈ ಕುರಿತಂತೆ ಮನವಿ ಮಾಡಿಕೊಂಡಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ‘ಪಾಲಿಕೆಯ ಕೆಲವು ವಾರ್ಡ್‍ಗಳ ವ್ಯಾಪ್ತಿಯ ನಗರಗಳಲ್ಲಿ ಸೋಂಕಿತರ ಸಂಖ್ಯೆ ಮತ್ತೆ ಏರುಮುಖವಾಗುತ್ತಿದೆ. ಸಾರ್ವಜನಿಕರು ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು’ ಎಂದಿದ್ದಾರೆ.

ಅವಳಿ ನಗರದಲ್ಲಿ ಜೂನ್ 7ರವರೆಗೆ ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ಚೇತನಾ ಕಾಲೋನಿಯಲ್ಲಿ 125 ಪ್ರಕರಣಗಳು, ನವನಗರದ ಕೆಎಚ್‌ಬಿ ಕಾಲೊನಿಯಲ್ಲಿ 102, ಗೋಕುಲ ರಸ್ತೆಯ ರೇಣುಕಾ ನಗರ, ರವಿ ನಗರಗಳಲ್ಲಿ 99, ವಿದ್ಯಾನಗರ, ಜಯನಗರದಲ್ಲಿ 97, ಹಳೇ ಬಾದಾಮಿ ನಗರದಲ್ಲಿ 71, ಗುಡಿ ಪ್ಲಾಟ್‌ನ ಬಸವಾ ನಗರದಲ್ಲಿ 71,ಆನಂದ ನಗರ ರಸ್ತೆ, ವಿಶಾಲ ನಗರ ಸಿದ್ಧಾರೋಡ ಮಠ ಬಳಿ 63, ಅಶೋಕ ನಗರ, ರಾಜ ನಗರ, ಚಾಮುಂಡೇಶ್ವರಿ ನಗರದಲ್ಲಿ 59, ರಾಮಲಿಂಗೇಶ್ವರ ನಗರದಲ್ಲಿ 54, ಕೇಶವಾಪುರ, ಶಬರಿ ನಗರದಲ್ಲಿ 47, ಅಧ್ಯಾಪಕ ನಗರದಲ್ಲಿ 41, ಹೆಗ್ಗೇರಿ ಕಾಲೊನಿ ಬಸನಗರದಲ್ಲಿ 40 ಪ್ರಕರಣಗಳು ದಾಖಲಾಗಿವೆ.

ಧಾರವಾಡದ ಕೆಲಗೇರಿ ಬಸವ ನಗರದಲ್ಲಿ 103 ಪ್ರಕರಣಗಳು, ರಾಜೀವಗಾಂಧಿ ನಗರ, ಎಸ್‌ಡಿಎಂ ವೈದ್ಯಕೀಯ ಕಾಲೇಜು ಬಳಿ 73, ವಿದ್ಯಾಗಿರಿ, ಗಾಂಧಿನಗರದಲ್ಲಿ 72, ಸಂಪಿಗೆ ನಗರ, ಕುಮಾರೇಶ್ವರ ನಗೆರದಲ್ಲಿ 63, ನಾರಾಯಣಪುರ, ಫಾರೆಸ್ಟ್ ಕಾಲೊನಿ– 55, ಸಿಬಿ ನಗರ, ಕಲ್ಯಾಣ ನಗರ, ಶಿವಗಿರಿಯಲ್ಲಿ 47, ಮರಾಠಾ ಕಲೊನಿಯಲ್ಲಿ 41, ವೈ.ಎಸ್.ಕಾಲೊನಿ, ಲಕ್ಷ್ಮೀನಗರದಲ್ಲಿ 41 ಪ್ರಕರಣಗಳು ದಾಖಲಾಗಿವೆ.

‘ಒಟ್ಟು ಅವಳಿನಗರದ ಸುಮಾರು 9 ವಲಯ ವ್ಯಾಪ್ತಿಯ 20 ವಾರ್ಡ್‍ಗಳ 42 ಪ್ರದೇಶಗಳಲ್ಲಿ 1365 ಕೋವಿಡ್–19 ಪ್ರಕರಣಗಳು ದಾಖಲಾಗಿವೆ. ಇದೇ ರೀತಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾದರೆ ನಿಯಂತ್ರಿಸಲು ಕಷ್ಟಸಾಧ್ಯವಾಗುತ್ತದೆ. ಹೀಗಾಗಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಅತಿ ಅನಿವಾರ್ಯವಾಗಿದೆ’ ಎಂದು ಡಾ. ಇಟ್ನಾಳ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT