ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಪ್ರಯೋಗಶಾಲೆಯಲ್ಲಿ ಸರದೇಶಪಾಂಡೆ

ವೃತ್ತಿ ಮತ್ತು ಅಧುನಿಕ ಕಾಲದ ನಾಟಕಗಳ ಸೇತುವೆಯಾಗಿ ಕೆಲಸ ಮಾಡುವ ಗುರಿ
Last Updated 5 ಆಗಸ್ಟ್ 2020, 9:11 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮನೆಯಲ್ಲಿದ್ದುಕೊಂಡೇ ಎಲ್ಲವನ್ನೂ ನೋಡಲು ಅನುಕೂಲ ಕಲ್ಪಿಸಿರುವ ಅಂತರ್ಜಾಲದಿಂದ ಜಗತ್ತೇ ಅಂಗೈಯಲ್ಲಿದೆ. ಹೀಗಾಗಿ ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದ ಸಮಯ ಕಳೆಯುವುದು ಕಷ್ಟವಾಗಿಲ್ಲ. ಕಲೆ, ಸಾಹಿತ್ಯ, ರಂಗಭೂಮಿ, ನೃತ್ಯದ ಬಗ್ಗೆ ಆಸಕ್ತಿ ಹೊಂದಿದ್ದವರಿಗೆ ಲಾಕ್‌ಡೌನ್‌ ಹೊಸ ಸಾಧ್ಯತೆಗಳನ್ನು ಪರಿಚಯಿಸಿದೆ.

ನಾಟಕ ನೋಡಲು ಆಸಕ್ತಿಯಿದ್ದರೂ ಮನೆಯಿಂದ ಹೊರಹೋಗಲು ಆಗದ ಸ್ಥಿತಿ ಅನೇಕರದು. ಅಂಥವರಿಗೆ ಆನ್‌ಲೈನ್ ಮೂಲಕ ಕಲಾವಿದರೇ ಮನೆಗೆ ಬಂದು ಜನರ ಆಸೆ ಪೂರೈಸಿದ್ದಾರೆ. ರಂಗಭೂಮಿಯಲ್ಲಿ ಹೊಸ ಪ್ರಯೋಗಗಳ ಮೂಲಕ ಗಮನ ಸೆಳೆದಿರುವ ಹುಬ್ಬಳ್ಳಿಯ ಯಶವಂತ ಸರದೇಶಪಾಂಡೆ ರಂಗಭೂಮಿಯ ಸಾಂಪ್ರದಾಯಿಕತೆ, ವೃತ್ತಿಪರತೆ ಮತ್ತು ಆಧುನಿಕತೆಗೆ ತಕ್ಕಂತೆ ಹೊಸತನಗಳನ್ನು ಪ್ರಯೋಗಿಸುತ್ತಿದ್ದಾರೆ.

7ನೇ ತರಗತಿಯಿಂದಲೇ ನಾಟಕದ ಗೀಳು ಬೆಳೆಸಿಕೊಂಡರು. ನ್ಯೂಯಾರ್ಕ್‌ನ ವಿಶ್ವವಿದ್ಯಾಲಯದಲ್ಲಿ ಸಾಂಸ್ಕೃತಿಕ ಕೇಂದ್ರಗಳ ನಿರ್ವಹಣೆ ಬಗ್ಗೆ ಅಭ್ಯಸಿಸಿದ್ದಾರೆ. ಕೇಂದ್ರ ಸರ್ಕಾರದ ನಿರ್ವಹಣೆಯಲ್ಲಿ ದೇಶದ ಏಳು ಸಾಂಸ್ಕೃತಿಕ ವಲಯಗಳಿದ್ದು, ಇವುಗಳಲ್ಲಿ ದಕ್ಷಿಣ ಮಧ್ಯ ವಲಯದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಈ ಬದ್ಧತೆಯಿಂದಲೇ 50ಕ್ಕೂ ಹೆಚ್ಚು ಬಾರಿ ವಿದೇಶಕ್ಕೆ ಹೋಗಿ ಅಲ್ಲಿ ನಾಟಕ ಕಲೆ ಮೂಲಕ ಕನ್ನಡ ಭಾಷೆಯ ಕಂಪು ಹರಡಿದ್ದಾರೆ.

ಆಸೆ, ಬದುಕು, ಪ್ರೀತಿ, ಕನಸು, ದೊಡ್ಡ ಸ್ಥಾನಕ್ಕೇರಬೇಕು ಎನ್ನುವ ಮನುಷ್ಯ ಸಹಜ ಹಂಬಲದ ವಿಷಯಗಳನ್ನು ಇಟ್ಟುಕೊಂಡು ಸರದೇಶಪಾಂಡೆ ನಾಟಕಗಳನ್ನು ರಚಿಸಿ, ನಿರ್ಮಿಸಿದ್ದರಿಂದ ನಾಟಕಗಳು ಜನಸಾಮಾನ್ಯರಿಗೆ ಹತ್ತಿರವಾಗುತ್ತವೆ ಎನ್ನುತ್ತಾರೆ ಅವರು.

’ವೃತ್ತಿ ಮತ್ತು ಅಧುನಿಕ ಕಾಲದ ನಾಟಕಗಳ ನಡುವೆ ಸೇತುವೆಯಾಗಿ ರಂಗಭೂಮಿಗೆ ಹೊಸ ಹೊಳಪು ನೀಡುವ ಉದ್ದೇಶದಿಂದ ಗುರು ಇನ್‌ಸ್ಟಿಟ್ಯೂಟ್‌ ಆಶ್ರಯದಲ್ಲಿ ಆದಿರಂಗ ಥೇಟರ್‌ ಕಟ್ಟಿದ್ದೇನೆ. ಅಲ್ಲಿ 450 ಜನ ಕುಳಿತು ನೋಡುವಷ್ಟು ಆಸನಗಳ ವ್ಯವಸ್ಥೆಯಿದೆ. ಒಂದೇ ಬಾರಿಗೆ ಎರಡ್ಮೂರು ನಾಟಕಗಳ ಅಭ್ಯಾಸಕ್ಕೆ ಸೌಲಭ್ಯಗಳಿವೆ. ನೃತ್ಯ, ಸಂಗೀತ, ಸಾಹಿತ್ಯ, ನಾಟಕ ಕಲಿಯುವವರಿಗೆ ವೇದಿಕೆಯಾಗಲಿದೆ. ಕಲಾವಿದರು, ತಂತ್ರಜ್ಞರನ್ನು ಬೆಳೆಸುವ ಜೊತೆಗೆ ಪ್ರೇಕ್ಷಕರನ್ನೂ ಹೆಚ್ಚಿಸುವ ಗುರಿ ಈ ಥೇಟರ್‌ನ ಉದ್ದೇಶ. ಎಲ್ಲ ಕಲೆಗಳ ತಾಯಿಬೇರು ಎನಿಸಿರುವ ರಂಗಭೂಮಿ ಬೆಳೆಯಲು ಹೊಸ ಭರವಸೆಯಾಗಿ ಕಾಣುತ್ತಿದೆ’ ಎಂದು ಸರದೇಶಪಾಂಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT