ಗುರುವಾರ , ಅಕ್ಟೋಬರ್ 1, 2020
21 °C
ಜಿಮ್‌ಗಳನ್ನು ತೆರೆಯಲು ಇಂದಿನಿಂದ ಅವಕಾಶ, ನಗರದಲ್ಲಿ ಸಿದ್ಧತೆ

ತರಬೇತಿ ಅವಧಿ ಕಡಿತಕ್ಕೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಲಾಕ್‌ಡೌನ್‌ ಭಾಗವಾಗಿ ಘೋಷಿಸಲಾಗಿದ್ದ ಜಿಮ್‌ಗಳ ಮೇಲಿನ ನಿರ್ಬಂಧವನ್ನು ಕೇಂದ್ರ ಸರ್ಕಾರ ತಗೆದು ಹಾಕಿದ್ದು, ಪುನರಾರಂಭಿಸಲು ನಗರದ ಜಿಮ್‌ಗಳ ಮಾಲೀಕರು ಸಿದ್ಧತೆ ನಡೆಸಿದ್ದಾರೆ. ತರಬೇತಿಯ ಅವಧಿಯನ್ನೂ ಕಡಿಮೆ ಮಾಡಲು ನಿರ್ಧರಿಸಿದ್ದಾರೆ.

ಒಂದೇ ಜಾಗದಲ್ಲಿ ಹೆಚ್ಚು ಜನ ಸೇರಿದರೆ ಕೊರೊನಾ ಸೋಂಕು ಹರಡುವ ಅಪಾಯವಿರುತ್ತದೆ ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಜಿಮ್‌ಗಳ ಬಳಕೆಗೆ ನಿರ್ಬಂಧ ವಿಧಿಸಿತ್ತು. ಈಗ ಸಂಪೂರ್ಣ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ತೆರೆಯಲು ಅನುಮತಿ ಕೊಟ್ಟಿದೆ. ನಾಲ್ಕು ತಿಂಗಳು ನಯಾಪೈಸೆಯೂ ದುಡಿಯಿಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದ ಜಿಮ್‌ಗಳ ಮಾಲೀಕರು ಈಗ ಸ್ವಲ್ಪ ನಿರಾಳರಾಗಿದ್ದಾರೆ.

ಜಿಲ್ಲೆಯಲ್ಲಿ 350ಕ್ಕೂ ಹೆಚ್ಚು ಜಿಮ್‌ಗಳಿದ್ದು, ಬಹಳಷ್ಟು ಜಿಮ್‌ಗಳ ಮಾಲೀಕರು ಒಂದೆರೆಡು ದಿನ ಬಿಟ್ಟು ತೆರೆಯಲು ತೀರ್ಮಾನಿಸಿದ್ದಾರೆ. ಕೆಲ ಜಿಮ್‌ನವರು ಬುಧವಾರದಿಂದಲೇ ಆರಂಭಿಸಿ  ಸಾಧಕ, ಬಾಧಕಗಳನ್ನು ನೋಡಿಕೊಂಡ ಬಳಿಕ ಉಳಿದ ಜಿಮ್‌ನವರು ಆರಂಭಕ್ಕೆ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಶಿರೂರು ಪಾರ್ಕ್‌ನಲ್ಲಿರುವ ಶ್ಯಾಡು ಜಿಮ್‌ ಯುನಿಸೆಕ್ಸ್‌ ಫಿಟ್‌ನೆಸ್‌ ಸ್ಟುಡಿಯೊದ ನಿರ್ವಾಹಕ ಕಿರಣ ಹೊನ್ನಳ್ಳಿ ಈ ಕುರಿತು ಪ್ರತಿಕ್ರಿಯಿಸಿ ‘ಸರ್ಕಾರ ಸೂಚಿಸಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತದೆ. ಮೊದಲಾದರೆ ಒಂದು ಗಂಟೆಗೆ ಕನಿಷ್ಠ 20 ಜನ ತರಬೇತಿಗೆ ಬರುತ್ತಿದ್ದರು. ಈಗ 10 ಜನರಿಗಷ್ಟೇ ಅವಕಾಶ ಕೊಡಲಾಗುವುದು. ಒಬ್ಬ ವ್ಯಕ್ತಿಯ ತರಬೇತಿ ಮುಗಿದ ಬಳಿಕ ಸ್ಯಾನಿಟೈಸ್ ಮಾಡಿದ ಮೇಲಷ್ಟೇ ಇನ್ನೊಬ್ಬರಿಗೆ ನೀಡಲಾಗುವುದು. ಇದಕ್ಕೆ ಕನಿಷ್ಠ 15 ನಿಮಿಷ ಬೇಕಾಗುತ್ತದೆ’ ಎಂದರು. ಇವರು ಗುರುವಾರದಿಂದ ಜಿಮ್‌ ಆರಂಭಿಸಲು ನಿರ್ಧರಿಸಿದ್ದಾರೆ.

ವಿದ್ಯಾನಗರದಲ್ಲಿರುವ ಐ ಫಿಟ್‌ನೆಸ್‌ನ ವ್ಯವಸ್ಥಾಪಕ ಶಫಿ ‘ಜಿಮ್‌ಗೆ ಬರುವವರ ಆರೋಗ್ಯ ತಪಾಸಣೆ ಮಾಡಿ ಮೊದಲು ಅವರಿಗೆ ಕೌನ್ಸಿಲಿಂಗ್‌ ಮಾಡಲಾಗುವುದು. ಇಷ್ಟು ದಿನ ಜಿಮ್ ಮುಚ್ಚಿದ್ದರಿಂದ ಆರ್ಥಿಕವಾಗಿ ಸಾಕಷ್ಟು ನಷ್ಟವಾಗಿದೆ. ಇದನ್ನು ಸರಿದೂಗಿಸಲು ಬೆಲೆ ಹೆಚ್ಚಿಸುವುದು ಅನಿವಾರ್ಯ. ಸಮಯ ಕಡಿತವನ್ನೂ ಮಾಡಲಾಗುವುದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು