ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಸಿಎ ನಿವೇಶನಗಳ ಹಂಚಿಕೆಗೆ ನಿರ್ಧಾರ

Last Updated 3 ಜುಲೈ 2021, 15:41 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿ ನಗರಗಳ ಸಂಘ–ಸಂಸ್ಥೆಗಳಿಗೆ ಸಿಎ ನಿವೇಶನಗಳನ್ನು ಹಂಚಲು ಶುಕ್ರವಾರ ನಗರದಲ್ಲಿ ನಡೆದ ಹುಬ್ಬಳ್ಳಿ–ಧಾರವಾಡ ಅಭಿವೃದ್ಧಿ ಪ್ರಾಧಿಕಾರದ (ಹುಡಾ) ಸಭೆಯಲ್ಲಿ ನಿರ್ಧರಿಸಲಾಯಿತು.

ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಡಸಿನಕೊಪ್ಪ, ಲಕಮನಹಳ್ಳಿ ಬಡಾವಣೆಗಳಲ್ಲಿನ ನಿವೇಶನಗಳ ಹಂಚಿಕೆ ಮಾಡಲು ಸಮಿತಿ ರಚಿಸಿಲಾಯಿತು. ಎರಡೂ ಗ್ರಾಮಗಳಲ್ಲಿ ಶೀಘ್ರದಲ್ಲಿಯೇ ನಿವೇಶನಗಳನ್ನು ಹಂಚಲು ತೀರ್ಮಾನಿಸಲಾಯಿತು

ಸುಳ್ಳದಲ್ಲಿ 67 ಎಕರೆಗೆ ಅರ್ಜಿ ಕರೆಯಲಾಗಿದೆ. ಪ್ರತಿ ಎಕರೆಗೆ ₹42 ಲಕ್ಷದಂತೆ ಖರೀದಿಗೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುವುದು. ಹೆಬ್ಬಳ್ಳಿ ರಸ್ತೆಯಲ್ಲಿ 20 ಎಕರೆ ಪ್ರದೇಶದಲ್ಲಿ ಶೇ 50ರ ಪಾಲುದಾರಿಕೆಯಲ್ಲಿ ಹಂಚಿಕೆಗೆ ಪ್ರಸ್ತಾವ ಸಲ್ಲಿಕೆ ಮತ್ತು ಐಐಐಟಿ ಪಕ್ಕದಲ್ಲಿ 40 ಎಕರೆ ಪಾಲುದಾರಿಕೆಯಲ್ಲಿ, ತಾರಿಹಾಳದಲ್ಲಿ 40 ಎಕರೆ ಪಾಲುದಾರಿಕೆ ಕುರಿತು ಚರ್ಚೆ ನಡೆಸಲಾಗಿದೆ ಎಂದು ಕಲಬುರ್ಗಿ ತಿಳಿಸಿದರು.

ನಾಗರಿಕ ಸೌಲಭ್ಯ ನಿವೇಶನದ ಸರ್ವೇ ಕಾರ್ಯ ಕೆಲ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು ನಿವೇಶನಕ್ಕಾಗಿ ಶೀಘ್ರದಲ್ಲಿ ಅರ್ಜಿ ಕರೆಯಲಾಗುವುದು. ಅನಧಿಕೃತ ಲೇ ಔಟ್‌ಗಳನ್ನು ಈ ಹಿಂದೆ ತೆಗೆದು ಹಾಕಲಾಗಿತ್ತು. ಈ ಕಾರ್ಯಾಚರಣೆ ಮುಂದಿನ ವಾರ ಮುಂದುವರಿಯಲಿದ್ದು, ಯಾರೂ ಅನಧಿಕೃತ ಲೇ ಔಟ್‌ಗಳನ್ನು ನಿರ್ಮಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರಾದ ಅಮೃತ ದೇಸಾಯಿ, ಸಿ.ಎಂ. ನಿಂಬಣ್ಣನವರ, ಹುಡಾ ಸದಸ್ಯರಾದ ಚಂದ್ರಶೇಖರ ಗೋಕಾಕ, ಸುನೀಲ್ ಮೊರೆ, ಮೀನಾಕ್ಷಿ ವಂಟಮುರಿ, ಆಯುಕ್ತ ಎನ್.ಎಚ್‌. ಕುಮ್ಮಣ್ಣನವರ, ನಗರ ಯೋಜಕ ಸದಸ್ಯ ವಿವೇಕ ಕಾರೆಕರ, ಕಾರ್ಯನಿರ್ವಾಹಕ ಎಂಜಿನಿಯರ್‌ ಎಂ. ರಾಜಶೇಖರ. ವಿಶೇಷ ಭೂಸ್ವಾಧೀನ ಅಧಿಕಾರಿ ಜಯಶ್ರೀ ಶಿಂತ್ರಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT