‘ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆಗೆ ಪ್ರಸ್ತಾವ’
‘ಶಾಸಕರ ಅನುದಾನದಲ್ಲಿ ಶಾಂತಿ ನಿಕೇತನ ನಗರ ಆದಿತ್ಯ ಪಾರ್ಕ್ ಲೋಟಸ್ ಲೇಔಟ್‍ನಲ್ಲಿ ₹2 ಕೋಟಿ ಅನುದಾನದಲ್ಲಿ ಸಿ.ಸಿ ಹಾಗೂ ಡಾಂಬರ್ ರಸ್ತೆ ನಿರ್ಮಿಸಲಾಗಿದೆ. ಪ್ರಶಾಂತ ನಗರ ಕುಸುಮ ನಗರ ಸಾಧನಕೇರಿ 1ರಿಂದ 5ನೇ ಕ್ರಾಸ್ ರಸ್ತೆಗಳನ್ನು ₹1.50 ಕೋಟಿ ಅನುದಾನದಲ್ಲಿ ಡಾಂಬರ್ ರಸ್ತೆ ನಿರ್ಮಿಸಲಾಗಿದೆ. ಪ್ರಮುಖ ರಸ್ತೆ ಕಸದ ಬ್ಲಾಕ್ ಸ್ಪಾರ್ಟ್‍ಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ಅನುದಾನ ಕೋರಿ ಪಾಲಿಕೆಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು 11ನೇ ವಾರ್ಡ್ ಸದಸ್ಯ ಮಂಜುನಾಥ ಬಟ್ಟೆಣ್ಣವರ ತಿಳಿಸಿದರು.