ಧಾರವಾಡ: ನಗರದ ಮಧ್ಯಭಾಗದಲ್ಲಿ ಶತಮಾನದ ಇತಿಹಾಸವುಳ್ಳ ಆಜಾದ್ ಉಪವನ ಸಮರ್ಪಕ ನಿರ್ವಹಣೆ ಕಾಣದೇ ಬರಡಾಗಿದೆ. ಸಾರ್ವಜನಿಕರಿಗಾಗಿ ನಿರ್ಮಿಸಲಾದ ಉದ್ಯಾನ ಇದೀಗ ಮೂಲಸೌಲಭ್ಯಗಳಿಲ್ಲದೇ ವಂಚಿತಗೊಂಡಿದೆ.

ಸರ್ಕಾರಿ ನೌಕರರು, ಕೂಲಿ ಕಾರ್ಮಿಕರು, ಶಾಲಾ ಮಕ್ಕಳು ಹಾಗೂ ವೃದ್ಧರು ತಮ್ಮ ಬಿಡುವಿನ ಸಮಯದಲ್ಲಿ ವಿಶ್ರಾಂತಿ ಪಡೆಯಲು ಆಶ್ರಯವಾಗಿದ್ದ ಉದ್ಯಾನ ಇದೀಗ ಯಾರಿಗೂ ಪ್ರವೇಶ ಇಲ್ಲದಂತಾಗಿದೆ. ಉಪವನದ ಸುತ್ತಲು ನಿರ್ಮಿಸಲಾದ ಗೋಡೆಗಳು ಕೆಲ ಕಡೆ ನೆಲಸಮವಾಗಿವೆ. ಮಕ್ಕಳಿಗಾಗಿ ನಿರ್ಮಿಸಲಾದ ಆಟದ ಸ್ಥಳ ಪಾಳು ಬಿದ್ದಂತೆ ಕಾಣುತ್ತದೆ. ಜನರಿಗೆ ಕೂರಲು ನಿರ್ಮಿಸಲಾದ ಆಸನಗಳು ಸ್ವಚ್ಛತೆ ಕಾಣದೇ, ಹಾಳಾಗಿವೆ. ಶೌಚಾಲಯಗಳದ್ದು ಅದೇ ಸ್ಥಿತಿ. ಸ್ವಚ್ಚತೆ ಇಲ್ಲ.

ಉಪವನ ಮೊದಲು ಹೀಗಿತ್ತು: ಉಪವನಕ್ಕೆ ಹೋಗಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿತ್ತು. ಸಂಜೆ ಸಮಯದಲ್ಲಿ ವಾಟರ್ ಶೋ ಏರ್ಪಡಿಸಲಾಗುತಿತ್ತು. ಉಪವನದಲ್ಲಿನ ಒಣ ಸಸ್ಯಗಳನ್ನು ಸಂಗ್ರಹಿಸಿ ಎರೆಹುಳು ಗೊಬ್ಬರ ತಯಾರಿಸಿ ಸಾರ್ವಜನಿಕರಿಗೆ ಮಾರಲಾಗುತಿತ್ತು. ಸಂಜೆ ವೇಳೆ ಕಲಾವಿದರಿಗೆ ಸಂಗೀತ ಕಾರ್ಯಕ್ರಮ ನಡೆಸಿ ಕೊಡುತ್ತಿದ್ದರು. ಇಷ್ಟೆಲ್ಲ ವಿವಿಧೋದ್ದೇಶದಿಂದ ನಿರ್ಮಿತ ಉಪವನ ಇದೀಗ ಸಾವರ್ಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಪಾಲನೆಯಾಗದ ಸಮಯ: ಉಪವನದಲ್ಲಿ ಸಾರ್ವಜನಿಕರ ಅವಕಾಶಕ್ಕೆ ಸಮಯ ನಿಗದಿ ಪಡಿಸಲಾಗಿದೆ. ಬೆಳಿಗ್ಗೆ 9 ರಿಂದ 12ರವರೆಗೆ ಮತ್ತು ಸಂಜೆ 4 ರಿಂದ 6 ರವರೆಗೆ ಅವಕಾಶ. ಶಾಲಾ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲ ಎಂದು ನಾಮಫಲಕವನ್ನು ಅಂಟಿಸಲಾಗಿದೆ. ಆದರೆ, ಸಮಯಕ್ಕೆ ಸರಿಯಾಗಿ ಬಂದರೂ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ. ನಿಗದಿತ ವೇಳೆ ಮೀರಿದರೂ ಉಪವನದ ಬಾಗಿಲು ತೆರೆದಿರುವುದಿಲ್ಲ’ ಎಂದು ಹಿರಿಯರಾದ ಸೋಮನಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉಪವನದಲ್ಲಿ ಸಾಕಷ್ಟು ಅನುದಾನ ವೆಚ್ಚ ಮಾಡಿ ವಾಟರ್ ಶೋ ನಿರ್ಮಾಣ ಮಾಡಿದ್ದಾರೆ. ಆದರೇ ಇದೀಗ ಸರಿಯಾದ ನೀರಿನ ವ್ಯವಸ್ಥೆ ಹಾಗೂ ವಿದ್ಯುತ್ ವ್ಯವಸ್ಥೆ ಇಲ್ಲದೇ ಸ್ಥಗಿತಗೊಂಡಿದೆ. ವಾಟರ್ ಶೋ ಆವರಣ ಇದೀಗ ನಾಯಿಗಳು ಮಲಗಿರುತ್ತವೆ’ ಎಂದು ಅವರು ತಿಳಿಸಿದರು.

‘ಧಾರವಾಡಕ್ಕೆ ಇದು ಪ್ರಮುಖ ಉದ್ಯಾನವಾಗಿದ್ದು, ನಗರದ ಹೃದಯಭಾಗದಲ್ಲಿದೆ. ಮಾರುಕಟ್ಟೆಗೆ, ಪಾಲಿಕೆ ಕಾರ್ಯಕ್ಕೆ ಬಂದವರಿಗೆ ಅಥವಾ ಬೇರೆ ಕೆಲಸಕ್ಕೆಂದು ಬೇರೆ ಊರಿನಿಂದ ಬಂದವರಿಗೆ ಆಜಾದ್ ಉದ್ಯಾನ ವಿಶ್ರಾಂತಿ ತಾಣವಾಗಿದೆ. ಆದರೆ, ಇಲ್ಲಿ ಬರುವವರಿಗೇನೆ ಬಾರದಂತೆ ತಡೆ ಹಿಡಿದರೆ ಹೇಗೆ’ ಎಂದು ಧಾರವಾಡ ನಿವಾಸಿ ಮಹಾಂತೇಶ ಕಟ್ಟಿಮನಿ ಹೇಳಿದರು.

ಉಪವನದ ಸ್ಥಿತಿ ಗಮನದಲ್ಲಿದೆ. ಸುತ್ತಲಿನ ಗೋಡೆಗಳು ಕೆಲ ಕಡೆ ಕುಸಿದಿದೆ. ಅನುದಾನದ ಬಗ್ಗೆ ಚರ್ಚಿಸಿ ಉದ್ಯಾನ ನವೀಕರಣದ ಬಳಿಕ ಸಾರ್ವಜನಿಕರಿಗೆ ಪ್ರವೇಶಿಸಲು ಅನುವು ಮಾಡಿಕೊಡಲಾಗುವುದು.

– ಅರವಿಂದ ಜಮಖಂಡಿ ಸಹಾಯಕ ಆಯುಕ್ತರು ವಲಯ ಕಚೇರಿ–3 ಮಹಾನಗರ ಪಾಲಿಕೆ

ಕೆಲವು ವರ್ಷಗಳ ಹಿಂದೆ ಆಜಾದ್ ಪ್ರವೇಶಕ್ಕೆ ಮುಕ್ತ ಅವಕಾಶ ಇರುತ್ತಿತ್ತು. ಇದೀಗ ಸಮಯ ನಿಗದಿ ಪಡಿಸಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಬಾಗಿಲು ತೆರೆಯುವುದಿಲ್ಲ.

-ಸುನೀಲ ಅವರಾದಿ ಸ್ಥಳೀಯ ನಿವಾಸಿ

ಆಗ ವಿಕ್ಟೋರಿಯಾ ಫೌಂಟೇನ್...

‘ಉದ್ಯಾನ ನಿರ್ಮಾಣಕ್ಕೆ ವಾಸುದೇವ ಕೃಷ್ಣಜೋಶಿ ಎಂಬುವರು ಜಾಗವನ್ನು ದಾನದ ರೂಪದಲ್ಲಿ ನೀಡಿದರು. 1904ರಲ್ಲಿ ಬಾಂಬೆ ಗವರ್ನರ್ ಜನರಲ್ ಲಾರ್ಡ್ ಚಾರ್ಲ್ಸ್ ಲ್ಯಾಮಿಂಗ್ಟನ್ ಆಳ್ವಿಕೆ ವೇಳೆ ಉದ್ಯಾನ ನಿರ್ಮಾಣಕ್ಕೆ ಶಿಫಾರಸು ಸಿಕ್ಕಿತು. ಮೊದಲಿಗೆ ‘ವಿಕ್ಟೋರಿಯಾ ಫೌಂಟೇನ್’ ಎಂದು ನಾಮಕರಣ ಮಾಡಲಾಯಿತು. ನಂತರ 1955ರಲ್ಲಿ ಅಂದಿನ ಜಿಲ್ಲಾ ಕಲೆಕ್ಟರ್ ಆಗಿದ್ದ ಡಿ.ಡಿ. ಸಾಟೆ ಮರು ನವೀಕರಣಗೊಳಿಸಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ’ಆಜಾದ್ ಉಪವನ‘ ಎಂದು ಮರು ನಾಮಕರಣ ಮಾಡಿದರು. ‘ಉದ್ಯಾನವು ಅಧಿಕ ಜನದಟ್ಟಣೆ ಇರುವ ಸ್ಥಳದಲ್ಲಿದ್ದು ಸಾರ್ವಜನಿಕರ ವಿಶ್ರಾಂತಿಗಾಗಿ ಉಪವನದಲ್ಲಿ ನಿರಂತರ ಅವಕಾಶ ಕಲ್ಪಿಸಬೇಕು. ಪಾಲಿಕೆಯು ಉಪವನದ ವಸ್ತುಸ್ಥಿತಿ ಗಮನದಲ್ಲಿಟ್ಟು ಮರುನವೀಕರಣ ಗೊಳಿಸಬೇಕು. ನಿರ್ವಹಣೆಗಾಗಿ ಅನುದಾನ ಮೀಸಲಿಟ್ಟು ಪ್ರತಿದಿನ ತಲಾ ಇಬ್ಬರು ಕಾವಲುಗಾರರನ್ನು ನೇಮಿಸಬೇಕು‘ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ಸಿ.ಎಸ್ ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.