ಧಾರವಾಡ: ‘ನಗರದ ಚರಂತಿಮಠ ಗಾರ್ಡನ್ ಸಮೀಪದ ಚಿಟಲಮ್ಮ ದೇವಿ ದೇಗುಲದಲ್ಲಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ ಫೆ. 19 ಮತ್ತು 20 ರಂದು ನಡೆಯಲಿದೆ’ ಎಂದು ಮುಖಂಡ ಶ್ರೀಕಾಂತ ಪಟ್ಟಣಶೆಟ್ಟಿ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘19ರಂದು ಬೆಳಿಗ್ಗೆ 10ಕ್ಕೆ ಕಸಬಾ ಓಣಿಯ ದ್ಯಾಮವ್ವ ದುರ್ಗಮ್ಮ ದೇವಸ್ಥಾನದಿಂದ ಚಿಟಲಮ್ಮ ದೇಗುಲದವರೆಗೆ ದೇವಿಯ ಮೂರ್ತಿ ಮೆರವಣಿಗೆ ಜರುಗಲಿದೆ. ರಾತ್ರಿ ಭಜನಾ ಕಾರ್ಯಕ್ರಮ ಜರುಗಲಿದೆ’ ಎಂದರು.

20ರಂದು ಬೆಳಿಗ್ಗೆ 6ಕ್ಕೆ ದೇವಿ ಮೂರ್ತಿಗೆ ವಿಶೇಷ ಪೂಜೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದರು.

ಸದಾನಂದ ಪಾಟೀಲ, ಮುತ್ತುರಾಜ ಮಡಿವಾಳರ, ಸಂತೋಷ ನೀರಲಕಟ್ಟಿ, ಗಿರೀಶ ಕಲ್ಲಾಪುರ, ರಮೇಶ ರೇವಣ್ಣಕರ, ರವೀಂದ್ರ ಲೊಲೆಣ್ಣವರ, ಆನಂದ ಸುದ್ದಿಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.