ಧಾರವಾಡ: ಶಿವಾಜಿ ವೃತ್ತ ಸಮೀಪದ ವಧಾಗಾರದಿಂದ ಗೋವುಗಳನ್ನು ಗೋಶಾಲೆಗೆ ಸಾಗಿಸಲು ತಯಾರಿ ಮಾಡುವಾಗ ಎತ್ತೊಂದು ಇನ್ಸ್ಪೆಕ್ಟರ್ ಪ್ರಭು ಗಂಗೊಳ್ಳಿ ಅವರಿಗೆ ಗುದ್ದಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಪ್ರಭು ಅವರಿಗೆ ಕೆನ್ನೆ, ಹಣೆ ಭಾಗಕ್ಕೆ ಗಾಯವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

'ವಧಾಗಾರ ಪ್ರದೇಶದಿಂದ ಹೊರಕ್ಕೆ ಬಂದ ಎತ್ತು ರಸ್ತೆ ಬದಿಯಲ್ಲಿ ನಿಂತಿದ್ದ ಪ್ರಭು ಅವರಿಗೆ ಗುದ್ದಿದೆ. ಎತ್ತು ಗುದ್ದಿದ ರಭಸಕ್ಕೆ ಅವರು ಕೆಳಕ್ಕೆ ಬಿದ್ದು, ಪೆಟ್ಟಾಗಿದೆ' ಎಂದು ಎಸಿಪಿ ಪ್ರಶಾಂತ್ ಸಿದ್ದನಗೌಡರ 'ಪ್ರಜಾವಾಣಿ'ಗೆ ತಿಳಿಸಿದರು.

ಗೋವುಗಳನ್ನು ವಧಾಗಾರಕ್ಕೆ ಸಾಗಿಸಲಾಗುತ್ತಿದೆ ಎಂದು ಬಜರಂಗದಳದವರು ಶಿವಾಜಿ ವೃತ್ತದ ಸಮೀಪ ಸೋಮವಾರ ರಾತ್ರಿ ಪ್ರತಿಭಟನೆ ನಡೆಸಿದರು. ಪೊಲೀಸರು ಭದ್ರತಾ ಕಾರ್ಯದಲ್ಲಿ ತೊಡಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.