ಧಾರವಾಡ: ಒಂದೇ ದಿನ 19 ಜನರಲ್ಲಿ ಕೋವಿಡ್–19 ಸೋಂಕು ದೃಢಪಟ್ಟಿದ್ದು, ಇದರಿಂದ ಸೋಂಕಿತರ ಸಂಖ್ಯೆ ನೂರರ ಗಡಿಗೆ ಸಮೀಪಿಸಿದೆ.

ಅಂತರರಾಜ್ಯ, ಅಂತರಜಿಲ್ಲೆ ಹಾಗೂ ಸೋಂಕಿತ ವ್ಯಕ್ತಿಯ ಸಂಬಂಧಿಗಳಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ ಕಳೆದ ಮೂರು ತಿಂಗಳಲ್ಲಿ ಒಂದೇ ದಿನ ಅತಿ ಹೆಚ್ಚು ಪ್ರಕರಣ ದಾಖಲಾಗಿದ್ದಕ್ಕೆ ಈ ಶುಕ್ರವಾರ ಸಾಕ್ಷಿಯಾಗಿದೆ.

ಬುಧವಾರ ಸೋಂಕು ದೃಢಪಟ್ಟ ಯಾಲಕ್ಕಿ ಶೆಟ್ಟರ್ ಕಾಲೊನಿ ನಿವಾಸಿಯಾದ29 ವರ್ಷದ ಶಿಕ್ಷಕಿ (ಪಿ–5970)ಯ ಸಂಪರ್ಕಕ್ಕೆ ಬಂದ 34 ವರ್ಷದ ಪುರುಷ (ಪಿ–6260)ನಿಗೆ ಸೋಂಕು ತಗುಲಿದೆ.ಹುಬ್ಬಳ್ಳಿ ಭೈರಿದೇವರಕೊಪ್ಪದಲ್ಲಿರುವ ಸನಾ ಕಾಲೇಜು ಹಿಂಭಾಗದ ಶಾಂತಿನಿಕೇತನ ಕಾಲೊನಿಯ ನಿವಾಸಿ 31 ವರ್ಷದ ಮಹಿಳೆ(ಪಿ–5969)ಯ 6 ತಿಂಗಳ ಗಂಡು ಮಗು (ಪಿ–6261)ವಿನಲ್ಲೂ ಸೋಂಕು ದೃಢಪಟ್ಟಿದೆ.

ತೀವ್ರ ಉಸಿರಾಟ ತೊಂದರೆ ಹಾಗೂ ಕೋವಿಡ್–19 ಸೋಂಕಿನ ಗುಣಲಕ್ಷಣಗಳು ಹೊಂದಿದ್ದ 72 ವರ್ಷದ ಮಹಿಳೆ (ಪಿ–6252), 40 ವರ್ಷದ ಪುರುಷ (ಪಿ–6254), 49 ವರ್ಷದ ಪುರುಷ (ಪಿ–6255), 63 ವರ್ಷದ ಪುರುಷ (ಪಿ–6256), 71 ವರ್ಷದ ಮಹಿಳೆ (ಪಿ-6257) ಯಲ್ಲಿ ಸೋಂಕು ಇರುವುದನ್ನು ಪ್ರಯೋಗಾಲಯ ವರದಿ ದೃಢಪಡಿಸಿದೆ.

ಅಂತರ ಜಿಲ್ಲಾ ಪ್ರಯಾಣ ಹಿನ್ನೆಲೆ ಹೊಂದಿರುವವರಲ್ಲಿ ಚಿತ್ರದುರ್ಗದಿಂದ ಬಂದ 37 ವರ್ಷದ ಪುರುಷ (ಪಿ–6253), ಕೋಲಾರ ಹಾಗೂ ಬೆಂಗಳೂರು ಪ್ರಯಾಣ ಹಿನ್ನೆಲೆಯ 50 ವರ್ಷದ ಪುರುಷ (ಪಿ–6262), ತುಮಕೂರಿನಿಂದ ಬಂದ 75 ವರ್ಷದ ಮಹಿಳೆ (ಪಿ–6267)ಯಲ್ಲಿ ಸೊಂಕು ಪತ್ತೆಯಾಗಿದೆ.

ಹಾಗೆಯೇ ಅಂತರ ರಾಜ್ಯ ಪ್ರಯಾಣ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಬಂದ 34 ವರ್ಷದ ಮಹಿಳೆ (ಪಿ–6251), 70 ವರ್ಷದ ಪುರುಷ (ಪಿ–6258), 62 ವರ್ಷದ ಮಹಿಳೆ (ಪಿ–6259), 33 ವರ್ಷದ ಮಹಿಳೆ (ಪಿ–6264), 12 ವರ್ಷದ ಬಾಲಕಿ (ಪಿ–6265), 33 ವರ್ಷದ ಪುರುಷ (ಪಿ–6266) ಇವರಲ್ಲಿ ಸೋಂಕು ದೃಢಪಟ್ಟಿದೆ. ಇವರು ಸಾಂಸ್ಥಿಕ ಕ್ವಾರಂಟೈನ್ನಲ್ಲಿದ್ದರು.

ತಮಿಳುನಾಡು ಪ್ರಯಾಣ ಹಿನ್ನೆಲೆಯ 46 ವರ್ಷದ ಪುರುಷ (ಪಿ–6263), ಗುಜರಾತ್ನಿಂದ ಹಿಂದಿರುಗಿದ 35 ವರ್ಷದ ಪುರುಷ (ಪಿ–6268), ಗೋವಾದಿಂದ ಮರಳಿದ 28 ವರ್ಷದ ಪುರುಷ (ಪಿ–6269) ಇವರಲ್ಲೂ ಸೋಂಕು ಇರುವುದು ಶುಕ್ರವಾರ ದೃಢಪಟ್ಟಿದೆ. ಇವರೆಲ್ಲರೂ ಮನೆಯಲ್ಲೇ ಕ್ವಾರಂಟೈನ್ ಆಗಿದ್ದರು.

ಆ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 91ಕ್ಕೆ ತಲುಪಿದೆ. ಸೋಂಕಿತರೆಲ್ಲರೂ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೂ 46 ಜನ ಆಸ್ಪತ್ರೆಯಿಂದ ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ. ಒಬ್ಬರು ಮೃತಪಟ್ಟಿದ್ಧಾರೆ. ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.