ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂಚಗೇರಿಗೆ ಸಚಿವ ದಿನೇಶ ಗುಂಡುರಾವ್ ಭೇಟಿ

Published 28 ಜೂನ್ 2024, 16:00 IST
Last Updated 28 ಜೂನ್ 2024, 16:00 IST
ಅಕ್ಷರ ಗಾತ್ರ

ಹೊರ್ತಿ: ಸಮೀಪದ ಇಂಚಗೇರಿ ಗ್ರಾಮದ ಮಾಧವಾನಂದ ಪ್ರಭೂಜಿ ಮಠಕ್ಕೆ ಗುರುವಾರ ತಡ ರಾತ್ರಿ ಆರೋಗ್ಯ ಸಚಿವ ದಿನೇಶ ಗುಂಡುರಾವ್ ಶ್ರೀಮಠದ ಒಂಬತ್ತು ಗುರುಗಳ ಕತೃ ಗದ್ದುಗೆಗಳಿಗೆ ಭೇಟಿ ನೀಡಿದರು.

ಈ ವೇಳೆ ಇಂಚಗೇರಿ ಗ್ರಾಮಸ್ಥರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ, ಹೈಟೆಕ್ ಆಸ್ಪತ್ರೆ ಮಾಡಲೂ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಆಸ್ಪತ್ರೆಗೆ ಬೇಕಾದ ಹೈಟೆಕ್ ಲ್ಯಾಬೋರೇಟರಿ ಹಾಗೂ ಎಕ್ಸರೇ ಲ್ಯಾಬ್ ಮತ್ತು ಎಂಬಿಬಿಎಸ್, ಜನರಲ್ ಮೆಡಿಸನ್ ಎಂಡಿ ವೈದ್ಯರನ್ನು ನೇಮಕ ಮಾಡಬೇಕು. ಸುಸಜ್ಜಿತ ಶವಾಗಾರ, ಸುಸಜ್ಜಿತ ಕಟ್ಟಡ ಮೂಲಸೌಕರ್ಯಗಳನ್ನು ನಿರ್ಮಿಸಿ ಕೊಡಬೇಕು ಎಂದು ಮನವಿ ಮಾಡಿದರು.

ನಂತರ ಶ್ರಿಮಠದ ರೇವಣಸಿದ್ಧೇಶ್ವರ ಮಾಹಾರಾಜರು, ಆರೋಗ್ಯ ಸಚಿವ ದಿನೇಶ ಗುಂಡುರಾವ್ ಹಾಗೂ ಕೌಶಲಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷೆ ಕಾಂತಾ ನಾಯಕ ಅವರನ್ನು ಸನ್ಮಾನಿಸಿದರು. ಈ ವೇಳೆ, ಕೌಶಲಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷೆ ಕಾಂತಾ ನಾಯಕ, ಬಾಗಲಕೋಟ ಜಿ.ಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ, ತಾ. ಪಂ ಮಾಜಿ ಸದಸ್ಯ ರವಿದಾಸ ಜಾಧವ, ಮಲ್ಲಣ್ಣ ಸಕ್ರಿ, ಸುರೇಶ ಜಂಬಗಿ, ಮಾಧವಾನಂದ ಅರಳಿ, ಅನೀಲ ಥೋರಾತ್, ಮಹಾದೇವ ಮುರಗೋಡ, ಕೆ.ಎಂ.ಅರವತ್ತಿ, ಚಾಂದ ಮುಲ್ಲಾ, ರಾಜು ಕನಮಡಿ, ರೇವಣಸಿದ್ಧ ಮಾನೆ, ಅಂಬರೀಷ ಬೆಳ್ಳೆನವರ, ಅದಿಲ ವಾಲೀಕಾರ, ಶಂಕರ ಚನಶೆಟ್ಟಿ, ಸಂತೋಷ ಬೆಳ್ಳೆನವರ, ದರ್ಶನ ವರೂರ, ಶರಣಪ್ಪ ಬೆಳ್ಳೆನವರ, ರೇವಪ್ಪ ಸಾತಲಗಾಂವ, ಗುರುಬಾಳಪ್ಪ ಸಾತಲಗಾಂವ, ರೇವಣಸಿದ್ಧ ಬುದಿಹಾಳ, ಶಂಕರ ಸಾತಲಗಾಂವ, ಕಿರಣ ಪೂಜಾರಿ ಸೇರಿದಂತೆ ಅನೇಕರು ಇದ್ದರು.

 ಹೊರ್ತಿ ಸಮೀಪದ ಇಂಚಗೇರಿ ಗ್ರಾಮದ ಮಾಧವಾನಂದ ಪ್ರಭುಜಿ ಮಠಕ್ಕೆ ಗುರುವಾರ ತಡ ರಾತ್ರಿ ಆರೋಗ್ಯ ಸಚಿವ ದಿನೇಶ ಗುಂಡುರಾವ್ ಭೇಟಿ ನೀಡಿದ ಅವರನ್ನು ಶ್ರೀಮಠದ ಗುರುಗಳಾದ ರೇವಣಸಿದ್ಧೇಶ್ವರ ಮಹಾರಾಜರು ಸನ್ಮಾನಿಸಿದರು

ಹೊರ್ತಿ ಸಮೀಪದ ಇಂಚಗೇರಿ ಗ್ರಾಮದ ಮಾಧವಾನಂದ ಪ್ರಭುಜಿ ಮಠಕ್ಕೆ ಗುರುವಾರ ತಡ ರಾತ್ರಿ ಆರೋಗ್ಯ ಸಚಿವ ದಿನೇಶ ಗುಂಡುರಾವ್ ಭೇಟಿ ನೀಡಿದ ಅವರನ್ನು ಶ್ರೀಮಠದ ಗುರುಗಳಾದ ರೇವಣಸಿದ್ಧೇಶ್ವರ ಮಹಾರಾಜರು ಸನ್ಮಾನಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT