ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ನೆರವಾದ ದಾನಿಗಳು

Last Updated 14 ಜೂನ್ 2021, 17:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೋವಿಡ್‌ನಿಂದಾಗಿ ಪತಿಯನ್ನು ಕಳೆದುಕೊಂಡಿರುವ ನವನಗರದ ಮಂಜುನಾಥ ವೈಕುಂಠೆ ಅವರ ಕುಟುಂಬಕ್ಕೆ ಹಲವು ದಾನಿಗಳು ಖಾತೆಗೆ ಹಣ ಪಾವತಿಸಿದ್ದಾರೆ. ಮಜೇಥಿಯಾ ಫೌಂಡೇಷನ್‌, ವೈಕುಂಠೆ ಅವರ ಮನೆಗೆ ಹೋಗಿ ನೆರವು ನೀಡಿದೆ.

ಮಂಜುನಾಥ ಅವರಿಗೆ ಪತ್ನಿ ಹಾಗೂ ಸಣ್ಣ ವಯಸ್ಸಿನ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಪಡೆದ ಚಿಕಿತ್ಸೆ ಹಣವಿನ್ನೂ ಬಾಕಿ ಉಳಿದಿದೆ. ಹೀಗಾಗಿ ಆ ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದು, ಈ ಕುರಿತು ’ಪ್ರಜಾವಾಣಿ’ ಜೂನ್‌ 13ರ ಸಂಚಿಕೆಯಲ್ಲಿ ‘ಅಪ್ಪ ಬೇಗ ವಾಪಸ್‌ ಬಂದ್ಬಿಡಿ’ ಎನ್ನುವ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

ವರದಿ ಪ್ರಕಟವಾದ ಬಳಿಕ ಹಲವಾರು ದಾನಿಗಳು ಮಂಜುನಾಥ ಅವರ ಪತ್ನಿ ಪೂರ್ಣಿಮಾ ವೈಕುಂಠೆ ಅವರ ಖಾತೆಗೆಹಣ ಹಾಕಿದ್ದಾರೆ. ಸೋಮವಾರ ಮಜೇಥಿಯಾ ಫೌಂಡೇಷನ್‌ ನೆರವಾಗಿದೆ.

ಫೌಂಡೇಷನ್‌ ಪರವಾಗಿಬಿಜೆಪಿ ಮುಖಂಡ ಲಿಂಗರಾಜ ಪಾಟೀಲ, ಕಾಂಗ್ರೆಸ್‌ ಮುಖಂಡ ಸದಾನಂದ ಡಂಗನವರ,ನವನಗರ ಠಾಣೆಯ ಪೊಲೀಸ್ ಅಧಿಕಾರಿ ಸಿ.ಡಿ. ಹಳೇಮನಿ ಅವರು ಪೂರ್ಣಿಮಾ ಹಾಗೂ ಮಕ್ಕಳಿಗೆ ಚೆಕ್‌ ಹಾಗೂಪೌಷ್ಠಿಕ ಆಹಾರಧಾನ್ಯಗಳ ಕಿಟ್‌ ನೀಡಿದರು. ಬಳಿಕ ಮಾತನಾಡಿದ ಗಣ್ಯರು ‘ಸಂಕಷ್ಟದಲ್ಲಿದ್ದ ಕುಟುಂಬಕ್ಕೆನೆರವಾಗುವ ಮೂಲಕ ಮಜೇಥಿಯಾ ಫೌಂಡೇಷನ್‌ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದೆ’ ಎಂದರು.

ಸಮೃದ್ಧಿ ಮಹಿಳಾ ಮಂಡಲದ ಅಧ್ಯಕ್ಷೆಸಂಗೀತಾ ಇಜಾರದ,ಫೌಂಡೇಷನ್ ಸಂಚಾಲಕ ಅಮರೇಶ ಹಿಪ್ಪರಗಿ,ಮುತ್ತು ಹಿರೇಮಠ ಇದ್ದರು.

‘ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬಳಿಕ ಹಲವರು ಖಾತೆಗೆ ಹಣ ಹಾಕಿದ್ದಾರೆ. ಸಾಕಷ್ಟು ಜನ ಫೋನ್‌ ಮಾಡಿ ಸಾಂತ್ವನ ಹೇಳಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ತುಂಬಿದ್ದಾರೆ. ಪತ್ರಿಕೆಗೆ ಧನ್ಯವಾದಗಳು’ ಎಂದು ಪೂರ್ಣಿಮಾ ವೈಕುಂಠೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT