ಸೋಮವಾರ, ನವೆಂಬರ್ 18, 2019
29 °C

ರಮೇಶ್ ಆತ್ಮಹತ್ಯೆ ರಾಜಕೀಯಕರಣ ಬೇಡ: ಬೊಮ್ಮಾಯಿ

Published:
Updated:

ಹುಬ್ಬಳ್ಳಿ: ‘ಶಾಸಕ ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅವರ ಆತ್ಮಹತ್ಯೆ ವಿಷಯವನ್ನು ರಾಜಕೀಯಕರಣಗೊಳಿಸುವುದು ಬೇಡ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆತ್ಮಹತ್ಯೆಯನ್ನು ಅಸ್ವಾಭಾವಿಕ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಮೇಶ್ ಅವರ ಫೋನ್ ಕರೆಗಳು ಹಾಗೂ ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ತನಿಖೆ ನಡೆಯಲಿದೆ. ಹಾಗಾಗಿ, ಈ ವಿಷಯದಲ್ಲಿ ಯಾರೂ ರಾಜಕೀಯ ಮಾಡಬಾರದು’ ಎಂದರು.

ಪ್ರತಿಕ್ರಿಯಿಸಿ (+)