ಧಾರವಾಡ: ‘ದ.ರಾ. ಬೇಂದ್ರೆ ಅವರು ಸಾಹಿತ್ಯದ ಮೂಲಕ ಉತ್ತರ ಕರ್ನಾಟಕದ ಭಾಷೆ, ಸಂಸ್ಕೃತಿಯನ್ನು ನಾಡಿನ ತುಂಬ ಪಸರಿಸಿ, ಜನ ಮನ ಗೆದ್ದರು’ ಎಂದು ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಹೇಳಿದರು.

ನಗರದ ಸಾಧನಕೇರಿಯ ಬೇಂದ್ರೆ ಭವನದಲ್ಲಿ ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ವತಿಯಿಂದ ಶನಿವಾರ ಆಯೋಜಿಸಿದ್ದ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ಪಂಪನಿಂದ ಹಿಡಿದು ಬೇಂದ್ರೆವರೆಗಿನ ಸಾಹಿತ್ಯವು ಅಮೋಘವಾಗಿದೆ. ಅದು ಯಾವ ಕಾಲಕ್ಕೂ ಮಂಕಾಗಿಲ್ಲ. ಜೈನ ಕವಿಗಳು, ಶರಣರು, ದಾಸರು ಸೇರಿದಂತೆ ಅನೇಕ ಮಹನೀಯರು ಕನ್ನಡ ಸಾಹಿತ್ಯವನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಯುವಜನರು ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿ ಮಾತನಾಡಿ, ‘ಮಾತೃಭಾಷೆ ಮರಾಠಿಯನ್ನು ಬಿಟ್ಟು ಹೃದಯದ ಭಾಷೆಯಾದ ಕನ್ನಡದಲ್ಲಿ ಕವಿತೆಗಳನ್ನು ಬರೆಯುವ ಮೂಲಕ ಬೇಂದ್ರೆ ಅವರು ವರಕವಿ ಎಂದೇ ಪ್ರಖ್ಯಾತಿ ಗಳಿಸಿದರು’ ಎಂದರು.

ಭಾರ್ಗವಿ ಕುಲಕರ್ಣಿ, ಗಾಯತ್ರಿ ಟೊಣಪಿ ಮತ್ತು ತಂಡದವರು ಬೇಂದ್ರೆ ಗೀತ ಗಾಯನ ಪ್ರಸ್ತುತಪಡಿಸಿದರು.

ಟ್ರಸ್ಟ್ ಅಧ್ಯಕ್ಷ ಸರಜೂ ಕಾಟ್ಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಐ.ಜಿ.ಸನದಿ, ಟ್ರಸ್ಟ್ ಸದಸ್ಯರಾದ ಶರಣ್ಣಮ್ಮ ಗೊರೇಬಾಳ, ವೈ.ಎಂ. ಯಾಕೊಳ್ಳಿ, ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಕುಮಾರ ಬೆಕ್ಕೇರಿ, ಸದಸ್ಯರಾದ ವೈ.ಎಂ. ಯಾಕೊಳ್ಳಿ, ಅಶೋಕ ಶೆಟ್ಟರ, ಶರಣಮ್ಮ ಗೊರೇಬಾಳ, ಪ್ರಭು ಕುಂದರಗಿ, ಇಮಾಮಸಾಬ್ ವಲ್ಲೆಪ್ಪನವರ, ಟ್ರಸ್ಟ್ ವ್ಯವಸ್ಥಾಪಕ ಪ್ರಕಾಶ ಬಾಳಿಕಾಯಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.