ಧಾರವಾಡ: ನಗರದ ಲಕ್ಕಮ್ಮನಹಳ್ಳಿಯ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಕಚೇರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ತಂಡ ಶುಕ್ರವಾರ ದಾಳಿ ನಡೆಸಿತು.
ಭೂಸ್ವಾಧೀನ ಅಕ್ರಮ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಪರಿಶೀಲಿಸಿದರು. ಕಚೇರಿಯ ನೌಕರರಿಂದ ಮಾಹಿತಿ ಪಡೆಯುವುದರ ಜೊತೆಗೆ ಇತರ ದಾಖಲೆಗಳ ಬಗ್ಗೆಯೂ ವಿವರಣೆ ಪಡೆಯುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ. ಇ.ಡಿ ತಂಡವು ಮಧ್ಯಾಹ್ನ 3 ಗಂಟೆಯಿಂದ ಕಚೇರಿಯಲ್ಲಿ ಕಾರ್ಯಾಚರಣೆ ನಡೆಸಿದೆ.